Advertisement
ದಕ್ಷಿಣ ಆಫ್ರಿಕಾ 4 ವಿಕೆಟಿಗೆ 189 ರನ್ ಪೇರಿಸಿದರೆ, ಭಾರತ 4 ವಿಕೆಟಿಗೆ 177 ರನ್ ಹೊಡೆಯಿತು. ಇದಕ್ಕೂ ಮೊದಲಿನ ಏಕದಿನ ಹಾಗೂ ಟೆಸ್ಟ್ ಸರಣಿಗಳೆರಡನ್ನೂ ದಕ್ಷಿಣ ಆಫ್ರಿಕಾ ಕಳೆದುಕೊಂಡಿತ್ತು.
ದಕ್ಷಿಣ ಆಫ್ರಿಕಾದ ಸವಾಲಿನ ಮೊತ್ತಕ್ಕೆ ಕಾರಣವಾದದ್ದು ತಾಜ್ಮಿನ್ ಬ್ರಿಟ್ಸ್-ಮರಿಜಾ ಕಾಪ್ ಅವರ ಅರ್ಧ ಶತಕ. ನಾಯಕಿ ಲಾರಾ ವೋಲ್ವಾರ್ಟ್ ಮತ್ತು ಬ್ರಿಟ್ಸ್ ಮೊದಲ ವಿಕೆಟಿಗೆ 7.1 ಓವರ್‌ಗಳಿಂದ 50 ರನ್ ಒಟ್ಟುಗೂಡಿಸಿದರು. ಇದರಲ್ಲಿ ವೋಲ್ವಾರ್ಟ್ ಗಳಿಕೆಯೇ 33 ರನ್. ದ್ವಿತೀಯ ವಿಕೆಟಿಗೆ ಬ್ರಿಟ್ಸ್-ಕಾಪ್ 96 ರನ್ ಪೇರಿಸಿದರು. ಬ್ರಿಟ್ಸ್ 81 ರನ್ ಮಾಡಿದರೆ (56 ಎಸೆತ, 10 ಬೌಂಡರಿ, 3 ಸಿಕ್ಸರ್), ಕಾಪ್ 33 ಎಸೆತ ನಿಭಾಯಿಸಿ 57 ರನ್ ಹೊಡೆದರು (8 ಬೌಂಡರಿ, 1 ಸಿಕ್ಸರ್).
Related Articles
Advertisement
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-4 ವಿಕೆಟಿಗೆ 189 (ಬ್ರಿಟ್ಸ್ 81, ಕಾಪ್ 57, ವೋಲ್ವಾರ್ಟ್ 33, ಪೂಜಾ 23ಕ್ಕೆ 2, ರಾಧಾ 40ಕ್ಕೆ 2). ಭಾರತ-4 ವಿಕೆಟಿಗೆ 177 (ಜೆಮಿಮಾ ಔಟಾಗದೆ 53, ಮಂಧನಾ 46, ಕೌರ್ 35).