Advertisement

ಐಪಿಎಲ್‌ ನಡುವೆ ಶಾರ್ಜಾ ಅಂಗಳದಲ್ಲಿ ನಡೆಯಲಿದೆ ವನಿತಾ ಟಿ20 ಚಾಲೆಂಜ್‌ ಸರಣಿ

11:43 PM Nov 03, 2020 | sudhir |

ಶಾರ್ಜಾ : ಕಳೆದ ಒಂದೂವರೆ ತಿಂಗಳಿನಿಂದ ಐಪಿಎಲ್‌ ಗುಂಗಿನಲ್ಲೇ ಇದ್ದ ದೇಶದ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಬುಧವಾರದಿಂದ ಮತ್ತೂಂದು ಆಕರ್ಷಣೆ. ಅರಬ್‌ ನಾಡಿನ ಸಣ್ಣ ಮೈದಾನವಾದ ಶಾರ್ಜಾ ಅಂಗಳದಲ್ಲಿ ಮಹಿಳಾ ಟಿ20 ಚಾಲೆಂಜ್‌ ಲೀಗ್‌ ಕೂಟದ ಸಂಭ್ರಮ.

Advertisement

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸೂಪರ್‌ನೊವಾಸ್‌ ಮತ್ತು ರನ್ನರ್ ಅಪ್‌ ವೆಲಾಸಿಟಿ ತಂಡಗಳು ಎದುರಾಗಲಿವೆ. ಒಟ್ಟು 4 ಪಂದ್ಯಗಳು ನಡೆಯಲಿವೆ.

ಕೊರೊನಾ ಭೀತಿಯ ನಡುವೆ, ಹತ್ತಾರು ನಿಬಂಧನೆ ಗಳು ಮತ್ತು ವೀಕ್ಷಕರ ಅನುಪಸ್ಥಿತಿ ಯಲ್ಲಿ ಈ ಪಂದ್ಯಾವಳಿ ನಡೆದರೂ, ಪ್ರಸಕ್ತ ಮುಕ್ತಾಯ ಹಂತಕ್ಕೆ ತಲುಪಿದ ಐಪಿಎಲ್‌ 13ನೇ ಆವತ್ತಿ ಸೃಷ್ಟಿಸಿರುವ ರೋಮಾಂಚನಕ್ಕೇನೂ ಕೊರತೆಯಾಗದು. ಆದ್ದರಿಂದ ಈ ಕೂಟ ಹೆಚ್ಚು ರೋಮಾಂಚನಕಾರಿಯಾಗಿರಲಿದೆ ಹಾಗೂ ವನಿತಾ ಕ್ರಿಕೆಟಿಗೆ “ಬೂಸ್ಟ್‌’ ಆಗಲಿದೆ ಎನ್ನುವುದು ಸಂಘಟಕರ ವಿಶ್ವಾಸ.

ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಇಷ್ಟು ದಿನಗಳ ಕಾಲ ಭಾರತದ ಆಟಗಾರ್ತಿಯರಯ ಮನೆಯಲ್ಲಿಯೇ ಕಾಲ ಕಳೆದಿದ್ದರು. ಈಗ ಒಮ್ಮೆಲೇ ಟಿ20 ಕ್ರಿಕೆಟಿಗೆ ಕುದುರಿಕೊಳ್ಳಬೇಕಿದೆ. ಆಸ್ಟೇಲಿಯ, ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ತಂಡದ ಸದಸ್ಯರು ಈಗಾಗಲೇ ಕೆಲವು ಟೂರ್ನಿಗಳಲ್ಲಿ ಪಾಲ್ಗೊಂಡಿರುವುದರಿಂದ ಫಿಟ್‌ನೆಸ್‌ ಸಮಸ್ಯೆ ಕಾಡದು. ಆದರೆ ಭಾರತೀಯರು ನೆಟ್‌ ಅಭ್ಯಾಸವನ್ನು ತುಸು ಹೆಚ್ಚಾಗಿ ನಡೆಸುವ ಅಗತ್ಯವಿದೆ.

ಶಫಾಲಿ ಮೇಲೆ ನಂಬಿಕೆ
ಆಸ್ಟೇಲಿಯದಲ್ಲಿ ನಡೆದ ಕಳೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಕೂಟದಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ 16ರ ಬಾಲೆ, “ಲೇಡಿ ಸೆಹವಾಗ್‌’ ಖ್ಯಾತಿಯ ಶಫಾಲಿ ವರ್ಮ ಮೇಲೆ ವೆಲಾಸಿಟಿ ತಂಡ ಹೆಚ್ಚಿನ ಭರವಸೆ ಇರಿಸಿದೆ. ಈ ಕೂಟದಲ್ಲಿಯೂ ಇವರ ಬಿರುಸಿನ ಬ್ಯಾಟಿಂಗ್‌ ನಿರೀಕ್ಷಿಸಲಾಗಿದ್ದು, ವೆಲಾಸಿಟಿ ತಂಡ ಮೊದಲ ಬಾರಿ ಚಾಂಪಿಯನ್‌ ಆಗುವ ಕನಸು ಕಾಣುತ್ತಿದೆ. ಈ ತಂಡದಲ್ಲಿ ಅಂತರಾಷ್ಟ್ರೀಯ ಆಟಗಾರಿಗೇನೂ ಕೊರತೆ ಇಲ್ಲ. ನಾಯಕಿ ಮಿಥಾಲಿ ರಾಜ್‌, ಶಿಖಾ ಪಾಂಡೆ, ಡೇನಿಯಲ್‌ ವ್ಯಾಟ್‌, ವೇದಾ ಕೃಷ್ಣಮೂರ್ತಿ ಇವರೆಲ್ಲ ತಂಡಕ್ಕೆ ನೆರವಾಗಬಲ್ಲ ವಿಶ್ವಾಸವಿದೆ.

Advertisement

ಸಂಭಾವ್ಯ ತಂಡಗಳು
ಸೂಪರ್‌ನೊವಾಸ್‌: ಹರ್ಮನ್‌ ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೋಡ್ರಿಗಸ್‌, ಚಾಮರಿ ಅಟಪಟ್ಟು, ಪ್ರಿಯಾ ಪೂನಿಯಾ/ಅನುಜಾ ಪಾಟೀಲ್‌, ರಾಧಾ ಯಾದವ್‌, ತನಿಯಾ ಭಾಟಿಯಾ, ಶಶಿಕಲಾ ಸಿರಿವರ್ಧನೆ/ ಶಕೀರಾ ಸೆಲ್ಮನ್‌, ಪೂನಂ ಯಾದವ್‌, ಅಂಕಿತಾ ರೆಡ್ಡಿ/ ಪೂಜಾ ವಸ್ತ್ರಾಕರ್‌, ಆಯುಷಿ ಸೋನಿ, ಮುಸ್ಕಾನ್‌ ಮಲಿಕ್‌.

ವೆಲಾಸಿಟಿ: ಮಿಥಾಲಿ ರಾಜ್‌ (ನಾಯಕಿ), ವೇದಾ ಕೃಷ್ಣಮೂರ್ತಿ, ಶಫಾಲಿ ವರ್ಮ, ಸುಶ್ಮಾ ವರ್ಮ, ಏಕ್ತಾ ಬಿಶ್‌r, ಶಿಖಾ ಪಾಂಡೆ, ದೇವಿಕಾ ವೈದ್ಯ/ ದಿಭ್ಯದರ್ಶಿನಿ/ಮಾನಸಿ ಜೋಶಿ, ಡೇನಿಯಲ್‌ ವ್ಯಾಟ್‌, ಸುನೆ ಲೂಸ್‌, ಜಹನಾರಾ ಆಲಂ/ ಎಂ. ಅನಘಾ.

ಹ್ಯಾಟ್ರಿಕ್‌ ಕಾತರದಲ್ಲಿ ಕೌರ್‌ ಪಡೆ
ಸತತ ಎರಡು ಬಾರಿಯ ಚಾಂಪಿಯನ್‌ ಸೂಪರ್‌ನೊàವಾಸ್‌ ಹ್ಯಾಟ್ರಿಕ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸುತ್ತಿರುವ ಈ ತಂಡ ಸ್ಟಾರ್‌ ಆಟಗಾರರಿಂದ ಒಳಗೊಂಡಿದೆ. ಲಂಕಾದ ಚಾಮರಿ ಅಟಪಟ್ಟು, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌, ತನಿಯಾ ಭಾಟಿಯಾ ಬ್ಯಾಟಿಂಗ್‌ ಆಧಾರಸ್ತಂಭವಾಗಿದ್ದಾರೆ. ಅರುಂಧತಿ ರೆಡ್ಡಿ, ಪೂನಂ ಯಾದವ್‌ ಬೌಲಿಂಗ್‌ ವಿಭಾಗದ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next