Advertisement

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಪದ್ಮಭೂಷಣ ಇಳಾ ಭಟ್ ವಿಧಿ ವಶ

07:25 PM Nov 02, 2022 | Team Udayavani |

ಅಹಮದಾಬಾದ್: ಖ್ಯಾತ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಇಳಾ ಭಟ್ ಅವರು ವಯೋಸಹಜ ಸಮಸ್ಯೆಗಳಿಂದ ಬುಧವಾರ ವಿಧಿವಶವಾಗಿದ್ದಾರೆ.

Advertisement

ಪದ್ಮಭೂಷಣ ಪುರಸ್ಕೃತರಾದ 89 ವರ್ಷದ ಭಟ್ ಅವರು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಪ್ರವರ್ತಕರಾಗಿದ್ದರು ಮತ್ತು ಅವರ ಕೆಲಸದಿಂದಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದರು., SEWA (Self Employed Women’s Association) ಸಂಸ್ಥಾಪಕಿಯಾಗಿದ್ದರು.

“ನಮ್ಮ ಪ್ರೀತಿಯ ಮತ್ತು ಗೌರವಾನ್ವಿತ ಸಂಸ್ಥಾಪಕರಾದ ಇಳಾ ಭಟ್ ಅವರ ನಿಧನವನ್ನು ನಾವು ತೀವ್ರ ದುಃಖದಿಂದ ಘೋಷಿಸುತ್ತೇವೆ. ಮಹಿಳಾ ಕಾರ್ಮಿಕರ ಹಕ್ಕುಗಳಿಗಾಗಿ ಪ್ರತಿಪಾದಿಸುವ ಪ್ರವರ್ತಕಿ ಇಳಾ ಬೆನ್ ಭಟ್, ನಾವು ನಿಮ್ಮ ಪರಂಪರೆಯನ್ನು ಮುಂದಕ್ಕೆ ಸಾಗಿಸಲು ಪ್ರಯತ್ನಿಸುತ್ತೇವೆ ”ಎಂದು SEWA ಭಾರತ್ ಸದಸ್ಯರು ಟ್ವೀಟ್ ಮಾಡಿದ್ದಾರೆ.

ಇಳಾ ಭಟ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next