Advertisement

Chhattisgarh 2034ರ ವರೆಗೆ ಮಹಿಳಾ ಮೀಸಲು ಜಾರಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

11:46 PM Sep 28, 2023 | Team Udayavani |

ಹೊಸದಿಲ್ಲಿ: “ಮಹಿಳಾ ಮೀಸಲಾತಿ ಮಸೂದೆ ಕೇವಲ ಚುನಾವಣೆಯ ಗಿಮಿಕ್‌. ಜನರು ಇದಕ್ಕಾಗಿ ಮತ ಹಾಕುತ್ತಾರೆ, ಬಳಿಕ ಪಕ್ಷ ಕೊಟ್ಟಿರುವ ಭರವಸೆಯನ್ನು ಮರೆತು ಬಿಡುತ್ತಾರೆ ಎಂದು ಬಿಜೆಪಿ ಯೋಚಿಸಿಯೇ ಮಸೂದೆ ಅಂಗೀಕರಿಸಿದೆ. ಹೀಗೆಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಛತ್ತೀಸ್‌ಗಢದಲ್ಲಿ ನಡೆದ ಕೃಷಿಕ್‌ -ಸಹ -ಶ್ರಮಿಕ್‌ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿರುವ ಖರ್ಗೆ, ಬಿಜೆಪಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಮಹಿಳಾ ಮೀಸಲಾತಿ ಕೂಡ ಅದರ ಚುನಾವಣೆ ಅಸ್ತ್ರ ಅಷ್ಟೇ, 2034ರವರೆಗೂ ಅದು ಜಾರಿಯಾಗುವುದಿಲ್ಲ, ಮೀಸಲಿನ ಹೆಸರಿನಲ್ಲಿ ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next