ಮುಂಬೈ: ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಶನಿವಾರ ಮುಂಬೈನಲ್ಲಿ ನಡೆಯಿತು. ಕೆಲ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಭಾರತೀಯ ಅನ್ ಕ್ಯಾಪ್ಡ್ ಆಟಗಾರರು ಉತ್ತಮ ಬೇಡಿಕೆ ಪಡೆದರು.
ಯುವ ಆಟಗಾರರಾದ ಕಾಶ್ವೀ ಗೌತಮ್ ಮತ್ತು ಕರ್ನಾಟಕದ ವೃಂದಾ ದಿನೇಶ್ ಶನಿವಾರದ ಹರಾಜಿನ ಹೈಲೈಟ್ಸ್. ಕಾಶ್ವೀ ಎರಡು ಕೋಟಿ ರೂ ಗೆ ಗುಜರಾತ್ ಜೈಂಟ್ಸ್ ಪಾಲಾದರೆ, ವೃಂದಾ ದಿನೇಶ್ 1.3 ಕೋಟಿ ರೂ ಗೆ ಯುಪಿ ವಾರಿಯರ್ಸ್ ಪಾಲಾದರು.
ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಪ್ರಮುಖ ಆಟಗಾರ್ತಿಯರನ್ನು ಖರೀದಿಸಿತು. ಆಸ್ಟ್ರೇಲಿಯದ ಆಲ್ ರೌಂಡರ್ ಜಾರ್ಜಿಯಾ ವೇರ್‌ಹ್ಯಾಮ್ (40 ಲಕ್ಷ ರೂ.), ಇಂಗ್ಲೆಂಡ್ ಕೇಟ್ ಗ್ರಾಸ್ (30 ಲಕ್ಷ ರೂ.), ಸ್ಪಿನ್ನರ್, ಭಾರತ ತಂಡದ ಪ್ರಮುಖ ಆಟಗಾರ್ತಿ ಏಕ್ತಾ ಬಿಷ್ಟ್ (60 ಲಕ್ಷ ರೂ.), ಆಂಧ್ರ ಪ್ರದೇಶದ ಎಸ್.ಮೇಘನಾ (30 ಲಕ್ಷ ರೂ.), ಕರ್ನಾಟಕದ ಎಸ್.ಶುಭಾ (10 ಲಕ್ಷ ರೂ.), ಆಸ್ಟ್ರೇಲಿಯದ ಸೋಫಿ ಮೊಲಿನೆಕ್ಸ್ (30 ಲಕ್ಷ ರೂ.), ಸಿಮ್ರಾನ್ ಬಹಾದ್ದೂರ್ (30 ಲಕ್ಷ ರೂ.) ಆರ್ ಸಿಬಿಯನ್ನು ಕೂಡಿಕೊಂಡರು.
ಸ್ಮೃತಿ ಮಂಧನಾ ನಾಯಕತ್ವದ ಆರ್ ಸಿಬಿ ತಂಡವು ಕಳೆದ ಸೀಸನ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಾರಿ ಮತ್ತಷ್ಟು ಆಟಗಾರರ ಸೇರ್ಪಡೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಆರ್ ಸಿಬಿ ತಂಡ: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.