Advertisement
ಮುಂಬಯಿಯ ಜಿಯೋ ಸೆಂಟರ್‌ನಲ್ಲಿ 409 ಆಟಗಾರ್ತಿಯರ ಹೆಸರು ಹರಾ ಜಿನ ವೇಳೆ ಪ್ರಸ್ತಾವವಾಗಲಿದೆ. ಈ ಪೈಕಿ 243 ಭಾರತೀಯರು, 163 ವಿದೇಶೀಯರು (ಐಸಿಸಿ ಸಹ ಸದಸ್ಯ ರಾಷ್ಟ್ರಗಳ 8 ಮಂದಿ ಸೇರಿ) ಇದ್ದಾರೆ.
Related Articles
ಭಾರತೀಯರ ಪೈಕಿ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗ್ಸ್, ದೀಪ್ತಿ ಶರ್ಮ, ಸ್ನೇಹ್ ರಾಣಾ, ವಿದೇಶೀಯರ ಪೈಕಿ ಅಲಿಸ್ಸಾ ಹೀಲಿ, ಸೋಫಿ ಎಕಲ್‌ಸ್ಟೋನ್, ನ್ಯಾಟ್ ಸ್ಕಿವರ್, ಮೆಗ್ ಲ್ಯಾನಿಂಗ್ ಗರಿಷ್ಠ 50 ಲಕ್ಷ ರೂ. ಮೂಲಬೆಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇವರನ್ನು ಕೊಳ್ಳಲು ಫ್ರಾಂಚೈಸಿಗಳು ಭಾರೀ ಪೈಪೋಟಿ ನಡೆಸುವುದು ಖಾತ್ರಿ. ಕೋಟಿ ರೂ.ಗಳಿಗಿಂತ ಹೆಚ್ಚಿನ ಬೆಲೆಗೆ ಅವರು ಮಾರಾಟವಾಗುವ ಸಾಧ್ಯತೆಯಿದೆ.
Advertisement
ಇನ್ನು ಭಾರತದ 19 ವಯೋಮಿತಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯೆಯರಾದ ಪಾರ್ಶ್ವವಿ ಚೋಪ್ರಾ, ಅರ್ಚನಾ ದೇವಿ, ತಿತಾಸ್ ಸಾಧು, ಶ್ವೇತಾ ಸೆಹ್ರಾವತ್, ಮನ್ನತ್ ಕಶ್ಯಪ್ 10 ಲಕ್ಷ ರೂ. ಮೂಲಬೆಲೆ ಪಟ್ಟಿಯಲ್ಲಿ ಬರುತ್ತಾರೆ.
ಪ್ರತಿಯೊಂದು ತಂಡವೂ ಆಟ ಗಾರ್ತಿಯರ ಆಯ್ಕೆಗಾಗಿ 12 ಕೋಟಿ ರೂ.ಗಳನ್ನು ಖರ್ಚು ಮಾಡಬಹುದು. ತಂಡದಲ್ಲಿ ಆರು ಮಂದಿ ವಿದೇಶಿ ಆಟಗಾರ್ತಿಯರ ಸಹಿತ 18 ಮಂದಿ ಇರಬೇಕಾಗುತ್ತದೆ.