Advertisement
ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿರುವ ಲೆಫ್ಟಿನೆಂಟ್ ಮೆಹಕ್ ಸೈನಿ, ಲೆಫ್ಟಿನೆಂಟ್ ಸಾಕ್ಷಿ ದುಬೆ, ಲೆಫ್ಟಿನೆಂಟ್ ಅದಿತಿ ಯಾದವ್, ಲೆಫ್ಟಿನೆಂಟ್ ಪಿಯುಸ್ ಮುದ್ಗಿಲ್, ಲೆಫ್ಟಿನೆಂಟ್ ರೇಖಾ ಸಿಂಗ್ ಶನಿವಾರ ಸೇನೆಯ ಫಿರಂಗಿ ಪಡೆಗೆ ಸೇರ್ಪಡೆಗೊಂಡಿದ್ದಾರೆ. ಆರ್ಟಿಲ್ಲರಿ ರೆಜಿಮೆಂಟ್‌ಗೆ ಮಹಿಳಾ ಅಧಿಕಾರಿಗಳ ನೇಮಕ ಸೇನಾ ಇತಿಹಾಸದಲ್ಲಿ ಇದೇ ಮೊದಲು.
Related Articles
ಭಾರತೀಯ ಸೇನೆಯ ಯುದ್ಧನಿಪುಣ ವಿಭಾಗವಾ ಗಿರುವ ಆರ್ಟಿಲರಿ ರೆಜಿಮೆಂಟ್‌ನಲ್ಲಿ ಮಹಿಳಾ ಸಿಬಂದಿಗೆ ಯಾವುದೇ ಕಠಿನ ಪರಿಸ್ಥಿತಿಯನ್ನೂ ಯಶಸ್ವಿ ಯಾಗಿ ನಿಭಾಯಿಸಲು ವಿಶೇಷ ರಕ್ಷಣ ತರಬೇತಿ ನೀಡಲಾಗಿದೆ. ಈ ಪೈಕಿ ರಾಕೆಟ್ ನಿರ್ವಹಣೆಯೂ ಸೇರಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಪತಿ ನೆತ್ತರಿತ್ತ ಭೂಮಿಗೆ ಈಗ ಪತ್ನಿಯಿಂದ ರಕ್ಷಣೆ!2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನ ಸೇನೆ ನಡುವೆ ನಡೆದ ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಶನಿವಾರ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರ್ಪ ಡೆಗೊಂಡಿದ್ದಾರೆ. ಯುದ್ಧ ಘಟಕವಾದ ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆ ಗೊಂಡ ದೇಶದ ಮೊದಲ ಐವರು ಮಹಿಳಾ ಸಿಬಂದಿಯ ಪೈಕಿ ರೇಖಾ ಕೂಡ ಒಬ್ಬರು. ವಿಶೇಷವೆಂದರೆ ಯಾವ ನೆಲದ ಉಳಿವಿಗಾಗಿ ರೇಖಾರ ಪತಿ ಉಸಿರು ಚೆಲ್ಲಿದರೋ, ಅದೇ ಗಾಲ್ವಾನ್ ನೆಲದ ರಕ್ಷಣೆಗಾಗಿ ಪೂರ್ವ ಲಡಾನ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ರೇಖಾ ಅವರನ್ನು ನಿಯೋಜಿಸಲಾಗಿದೆ.