Advertisement

ಪ್ರಗತಿಗೆ ಮಹಿಳಾ ಶಕ್ತಿ ಸದ್ಬಳಕೆ ಮುಖ್ಯ

05:46 PM Mar 28, 2022 | Team Udayavani |

ರಾಯಚೂರು: ಯಾವುದೇ ದೇಶ ಸಮಗ್ರ ಅಭಿವೃದ್ಧಿ ಹೊಂದಲು ಅಲ್ಲಿನ ಮಹಿಳಾ ಶಕ್ತಿ ಸದ್ಬಳಕೆ ಆಗಬೇಕು. ಮಹಿಳೆಯರಿಗೆ ಸಮಾನತೆ ನೀಡುವ ದೇಶಗಳ ಪ್ರಗತಿ ಹೆಚ್ಚಾಗಿರುತ್ತದೆ ಎಂದು ಭಾರತ ಸೇವಾದಳದ ಮಹಿಳಾ ಪ್ರತಿನಿಧಿ ದಾನಮ್ಮ ಸುಭಾಶ್ಚಂದ್ರ ಅಭಿಪ್ರಾಯಪಟ್ಟರು.

Advertisement

ನಗರದ ನಂದಿನಿ ಶಿಕ್ಷಣ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸ್ವಾವಲಂಬನೆ ಸಾಧಿಸುವ ದೇಶ ಅಭಿವೃದ್ಧಿ ಸಾಧಿಸಲಿದೆ. ಸ್ತ್ರೀಯರು ಕೇವಲ ಮನೆಗೆಲಸಗಳಿಗೆ ಸೀಮಿತವಾಗದೆ ಶಿಕ್ಷಣ ಪಡೆದು ಸ್ವಂತ ಶಕ್ತಿಯಿಂದ ಮುಂದೆ ಬರಬೇಕು. ದೇಶದ ಸೇವೆ ಮಾಡಬೇಕು ಎಂದರು.

ವಕೀಲರಾದ ವಿಜಯಲಕ್ಷ್ಮೀ ಪಾಸೋಡಿ ವಿಶೇಷ ಉಪನ್ಯಾಸ ನೀಡಿ, ಭಾರತ ಸಂವಿಧಾನ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳನ್ನು ಕಲ್ಪಿಸಿದೆ. ಮಹಿಳೆಯರ ಪರ ಅನೇಕ ಕಾನೂನುಗಳಿದ್ದು, ಅವುಗಳ ಬಗ್ಗೆ ಪ್ರತಿ ಮಹಿಳೆಗೂ ಜ್ಞಾನವಿರಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆದು ಮುನ್ನಡೆಯಬೇಕು. ಅನ್ಯಾಯವಾದಾಗ ಪ್ರತಿಭಟಿಸಿ ಕಾನೂನಿನ ನೆರವಿನಿಂದ ನ್ಯಾಯ ಪಡೆಯಬಹುದು ಎಂದರು.

ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಜಿ.ಎಸ್‌.ಹಿರೇಮಠ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ್‌ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಭಾಷಣ, ದೇಶಭಕ್ತಿಗೀತೆ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಉಪನ್ಯಾಸಕ ವಿಜಯರಾಜೇಂದ್ರ, ಭಾರತ ಸೇವಾದಳ ವಿಭಾಗ ಸಂಘಟಕರಾದ ವಿದ್ಯಾಸಾಗರ್‌ ಚಿನಮಗೇರಿ, ಉಪನ್ಯಾಸಕರು, ಶಿಕ್ಷಕರು, ಬಿಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next