Advertisement
ಮಿಲಿಟರಿಯಲ್ಲಿ ನಾರೀಶಕ್ತಿಮಂಗಳೂರು ಮೂಲದ ಕನ್ನಡತಿ, ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್(29) 144 ನಾವಿಕರನ್ನು ಒಳಗೊಂಡ ನೌಕಾಪಡೆಯ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಾಕಿಸ್ಥಾನದೊಂದಿಗಿನ ಮರುಭೂಮಿ ಗಡಿ ಪ್ರದೇಶದಲ್ಲೇ ಹೆಚ್ಚಾಗಿ ನಿಯೋಜಿಸಲ್ಪಡುತ್ತಿದ್ದ ಅಸಾಲ್ಟ್ ರೈಫಲ್‌ಗಳನ್ನು ಹಿಡಿದ ಮಹಿಳಾ ಯೋಧರ ತಂಡ ಮೊದಲ ಬಾರಿಗೆ ಬಿಎಸ್‌ಎಫ್ ಒಂಟೆ ಪಡೆ ಯನ್ನು ಮುನ್ನಡೆಸಿತು. ಕಾರ್ಪ್ ಆಫ್ ಸಿಗ್ನಲ್ಸ್, ಆರ್ಮಿ ಏರ್ ಡಿಫೆನ್ಸ್ ಮತ್ತು ಆರ್ಮಿ ಡೇರ್‌ಡೆವಿಲ್ಸ್‌ನ ಮಹಿಳಾ ಅಧಿಕಾರಿಗಳೂ ಮಿಂಚಿದರು.
ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲು ಮರದ ತಿಮ್ಮಕ್ಕ ಅವರ ನಿಸ್ವಾರ್ಥ ಕೊಡುಗೆ ಹಾಗೂ ಸಾಧನೆಗಳನ್ನು ಬಿಂಬಿಸಿ ಕರ್ನಾಟಕ ಸರಕಾರ ರಚಿಸಿದ್ದ “ನಾರೀಶಕ್ತಿ’ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್‌ನ ಪ್ರಮುಖ ಆಕರ್ಷಣೆ. ವಿಶೇಷವೆಂದರೆ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರ ರಾಜ್ಯಗಳ ಸ್ತಬ್ಧ ಚಿತ್ರಗಳಲ್ಲೂ ನಾರೀಶಕ್ತಿಯೇ ವಿಜೃಂಭಿಸಿತು. ಆತ್ಮನಿರ್ಭರತೆಯ ಪ್ರತೀಕ
ಈ ಬಾರಿ ಆತ್ಮನಿರ್ಭರತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ ಎಂಕೆ-1, ಕೆ-9 ವಜ್ರ ಹೊವಿಟರ್ ಗನ್, ಬಿಎಂಪಿ, ಆಕಾಶ್ ಕ್ಷಿಪಣಿ, ಬ್ರಹ್ಮೋಸ್, ನಾಗ್ ಕ್ಷಿಪಣಿ ಸೇರಿದಂತೆ ದೇಶೀ ನಿರ್ಮಿತ ಶಸ್ತ್ರಾಸ್ತ್ರ, ಯುದ್ದೋಪಕರಣಗಳು ಪ್ರದರ್ಶಿತವಾದವು.
Related Articles
ಈ ಬಾರಿಯ ಉತ್ಸವದಲ್ಲಿ ಏನೆಲ್ಲ ವಿಶೇಷತೆ ಇತ್ತು, ಗೊತ್ತೆ? ಇಂದಿನ ಸುದಿನ ಸಂಚಿಕೆಗಳ 2ನೇ ಪುಟದಲ್ಲಿರುವ ವಿಶೇಷ ರಸಪ್ರಶ್ನೆಗಳಿಗೆ ಉತ್ತರಿಸಿ.
Advertisement
ದೇಶದ ಪ್ರಗತಿಪರ ರಾಜ್ಯ ಗಳಲ್ಲಿ ಮುಂಚೂಣಿಯಲ್ಲಿ ರುವ ಕರ್ನಾಟಕವನ್ನು ಸ್ವಸ್ಥ ಹಾಗೂ ಸಮೃದ್ಧವಾಗಿಸೋಣ.– ಥಾವರ್‌ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯಪಾಲರು