Advertisement

ಮದ್ಯದಂಗಡಿ ತೆರವಿಗೆ ಮಹಿಳೆಯರ ಆಕ್ರೋಶ

09:21 AM Jun 04, 2018 | Team Udayavani |

ಕಾಳಗಿ: ತಾಲೂಕಿನ ಹೊಸ ಹೆಬ್ಟಾಳ ಗ್ರಾಮದಲ್ಲಿ ಹೊಸದಾಗಿ ಪರವಾನಗಿ ಪಡೆದು ಮದ್ಯಮಾರಾಟಕ್ಕೆ ಸಿದ್ಧವಾಗಿರುವ ಎಂ.ಎಸ್‌.ಐ.ಎಲ್‌ ಮದ್ಯದ ಅಂಗಡಿಯನ್ನು ಶೀಘ್ರವೇ ತೆರವುಗೊಳಿಸಬೇಕೆಂದು ಇಲ್ಲಿನ ಮಹಿಳೆಯರು ಮದ್ಯದ ಅಂಗಡಿಗೆ ಬೀಗ ಜಡಿದು ಪ್ರತಿಭಟಿಸಿದರು.

Advertisement

ಮದ್ಯದ ಅಂಗಡಿಯನ್ನು ಗ್ರಾಮದ ಮಧ್ಯದಲ್ಲಿಯೇ ತೆರೆಯಲಾಗುತ್ತಿದೆ. ಇಲ್ಲಿ ಸುತ್ತಮುತ್ತಲೂ ನೂರಾರು ಮನೆಗಳು, ಶಾಲಾ-ಕಾಲೇಜುಗಳಿವೆ. ಈ ಅಂಗಡಿ ತೆರೆಯುವುದರಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಹೊರಗಡೆ ಓಡಾಡಲು, ಶಾಲೆ-ಕಾಲೇಜುಗಳಿಗೆ ಹೋಗಲು ತೊಂದರೆ ಆಗುತ್ತದೆ. ಈ ಕುರಿತು ಕಳೆದ ಡಿಸೆಂಬರ್‌
ತಿಂಗಳಿನಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. 

ಶಾಸಕ ಪ್ರಿಯಾಂಕ್‌ ಖರ್ಗೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಬದಲು ಮದ್ಯದ ಅಂಗಡಿ ಸ್ಥಾಪಿಸಿ ಗ್ರಾಮದ ಅನೇಕ ಕುಟುಂಬಗಳನ್ನು ಬೀದಿಗೆ ತರುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹಿಡಿಶಾಪ ಹಾಕಿದರು.
ಈಗಾಗಲೇ ಗ್ರಾಮದ ಹೋಟೆಲ್‌, ಪಾನ್‌ಶಾಪ್‌ ಎಲ್ಲೆಂದರಲ್ಲಿ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಕೂಲಿ ಮಾಡಿ ದುಡಿದ ಹಣವೆಲ್ಲ ಕುಡಿತಕ್ಕೆ ಹೊಗುತ್ತಿದೆ.

ರಾತ್ರಿಯಾದರೆ ಸಾಕು ಮನೆಯಲ್ಲಿ ದಿನನಿತ್ಯ ಜಗಳ ನಡೆಯುತ್ತಿವೆ. ಅಂತಹದರಲ್ಲಿ ಪರವಾನಿಗೆ ಸಹಿತ ಮದ್ಯದಂಗಡಿ ಗ್ರಾಮಕ್ಕೆ ಬಂದರೆ ನಮ್ಮ ಸಂಸಾರ ಬೀದಿಗೆ ಬೀಳುತ್ತದೆ. ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.

ಗಂಗಮ್ಮ ಮಾಲಿಪಾಟೀಲ, ಶರಣಬಸಮ್ಮ ಬೆಡಸೂರ, ಅಂಜನಾದೇವಿ ಕಲಶೆಟ್ಟಿ, ಶ್ರೀದೇವಿ ಕಲಾಲ, ಅಲ್ಲಮ್ಮ ಸಾಲಹಳ್ಳಿ, ಮೌನೇಶ ಸುತಾರ, ಗುಂಡಪ್ಪ ಮುತ್ತಗಿ, ರೇವಪ್ಪ ಕಲಶೆಟ್ಟಿ, ಗುಂಡಪ್ಪ ಮುತ್ತಿನ, ವಿಶ್ವನಾಥ ಮೆಂಚಾ,
ಪಾರ್ವತಿ  ಬೇನೂರ, ಕವಿತಾ ಮುಚ್ಚಟ್ಟಿ, ಶಾಂತಾಬಾಯಿ ಶಿವಗೋಳ, ಕವಿತಾ ಹೊಸ್ಸಳ್ಳಿ, ಅಣವೀರಪ್ಪ ಕಣಸೂರ, ಪಾರ್ವತಿ ಪಂಗರಗಿ, ನಾಗಮ್ಮ ಮಠಪತಿ, ಶಾಂತಬಾಯಿ ಶಿವಗೋಳ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next