Advertisement

ಅಂತಿಮ ಏಕದಿನ ಪಂದ್ಯ : ಭಾರತದ ವನಿತೆಯರಿಗೆ 4ನೇ ಸೋಲು

11:01 PM Mar 17, 2021 | Team Udayavani |

ಲಕ್ನೋ : ಅಂತಿಮ ಏಕದಿನ ಪಂದ್ಯದಲ್ಲಾದರೂ ಗೆದ್ದು ಒಂದಿಷ್ಟು ಪ್ರತಿಷ್ಠೆ ಉಳಿಸಿಕೊಳ್ಳುವ ಭಾರತದ ವನಿತಾ ಕ್ರಿಕೆಟಿಗರ ಯೋಜನೆ ವಿಫ‌ಲಗೊಂಡಿದೆ. ಬುಧವಾರ ನಡೆದ 5ನೇ ಮುಖಾಮುಖೀಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ವಿಸ್ತರಿಸಿತು.

Advertisement

ಭಾರತ 49.3 ಓವರ್‌ಗಳಲ್ಲಿ 188 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 48.2 ಓವರ್‌ಗಳಲ್ಲಿ 5 ವಿಕೆಟಿಗೆ 189 ರನ್‌ ಬಾರಿಸಿ ಜಯ ಸಾಧಿಸಿತು. ಮಿಥಾಲಿ ಅಜೇಯ 79 ರನ್‌ ಬಾರಿಸಿ ಹೋರಾಟ ಸಂಘಟಿಸಿದರು (104 ಎಸೆತ, 8 ಬೌಂಡರಿ, 1 ಸಿಕ್ಸರ್‌).

ಮಿಂಚಿದ ರಾಜೇಶ್ವರಿ
ದಕ್ಷಿಣ ಆಫ್ರಿಕಾ ಚೇಸಿಂಗ್‌ ಆಘಾತಕಾರಿ ಯಾಗಿಯೇ ಆರಂಭಗೊಂಡಿತು. 27 ರನ್ನಿಗೆ 3 ವಿಕೆಟ್‌ ಬಿತ್ತು. ಕರ್ನಾಟಕದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಘಾತಕ ಸ್ಪೆಲ್‌ ಮೂಲಕ ಹರಿಣಗಳಿಗೆ ಕಂಟಕವಾಗಿ ಪರಿಣಮಿಸಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಮಿಗ್ನನ್‌ ಡು ಪ್ರೀಝ್ (57), ಆ್ಯನೆ ಬಾಶ್‌ (58) ಮತ್ತು ಮರಿಜಾನ್‌ ಕಾಪ್‌ (ಔಟಾಗದೆ 36) ಕ್ರೀಸ್‌ ಆಕ್ರಮಿಸಿಕೊಂಡು ತಂಡವನ್ನು ದಡ ತಲುಪಿಸಿದರು.

ರಾಜೇಶ್ವರಿ ಗಾಯಕ್ವಾಡ್‌ 10 ಓವರ್‌ಗಳ ಸ್ಪೆಲ್‌ನಲ್ಲಿ 4 ಮೇಡನ್‌ ಮಾಡಿ, ಕೇವಲ 13 ರನ್ನಿತ್ತು 3 ವಿಕೆಟ್‌ ಉರುಳಿಸಿ ಗಮನ ಸೆಳೆದರು.

ಇದನ್ನೂ ಓದಿ :ಡಿನೋಟಿಫಿಕೇಷನ್‌ ಆರೋಪ ಪ್ರಕರಣ: ಬಿಎಸ್‌ವೈಗೆ ಸಂಕಷ್ಟ?

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-49.3 ಓವರ್‌ಗಳಲ್ಲಿ 188 (ಮಿಥಾಲಿ 79, ಕೌರ್‌ 30, ಪೂನಿಯ 18, ಮಂಧನಾ 18, ಡಿ ಕ್ಲಾರ್ಕ್‌ 35ಕ್ಕೆ 3, ಸೆಖುಖುನ್‌ 26ಕ್ಕೆ 2, ಶಂಗೇಸ್‌ 43ಕ್ಕೆ 2). ದ.ಆಫ್ರಿಕಾ-48.2 ಓವರ್‌ಗಳಲ್ಲಿ 5 ವಿಕೆಟಿಗೆ 189 (ಬಾಶ್‌ 58, ಡು ಪ್ರೀಝ್ 57, ಕಾಪ್‌ ಔಟಾಗದೆ 36, ರಾಜೇಶ್ವರಿ 13ಕ್ಕೆ 3).

ಪಂದ್ಯಶ್ರೇಷ್ಠ: ಆ್ಯನೆ ಬಾಶ್‌.

ಸರಣಿಶ್ರೇಷ್ಠ: ಲಿಜೆಲ್‌ ಲೀ.

Advertisement

Udayavani is now on Telegram. Click here to join our channel and stay updated with the latest news.

Next