Advertisement
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಓಪನರ್ ಫರ್ಗಾನಾ ಹಕ್ ಅವರ ಶತಕ ಸಾಹಸದಿಂದ 4 ವಿಕೆಟಿಗೆ 225 ರನ್ ಗಳಿಸಿತು. ಜವಾಬಿತ್ತ ಭಾರತ 49.3 ಓವರ್‌ಗಳಲ್ಲಿ 225ಕ್ಕೆ ಆಲೌಟ್ ಆಯಿತು. ಸರಣಿ 1-1 ಸಮಬಲದೊಂದಿಗೆ ಅಂತ್ಯ ಕಂಡಿತು. ಮಳೆಯಿಂದಾಗಿ ಪಂದ್ಯದ ಮುಕ್ತಾಯ ವಿಳಂಬಗೊಂಡಿದ್ದರಿಂದ ಸೂಪರ್ ಓವರ್ ಹಾಕಲಿಲ್ಲ. ಮೊದಲ ಪಂದ್ಯವನ್ನು ಬಾಂಗ್ಲಾ 40 ರನ್ನುಗಳಿಂದ, 2ನೇ ಪಂದ್ಯವನ್ನು ಭಾರತ 108 ರನ್ ಅಂತರದಿಂದ ಜಯಿಸಿತ್ತು.
Related Articles
38 ಓವರ್ ಮುಗಿದೊಡನೆ ಮಳೆ ಸುರಿಯಿತು. ಆಗ 4 ವಿಕೆಟಿಗೆ 173 ರನ್ ಮಾಡಿದ ಭಾರತ ಸುಸ್ಥಿತಿಯಲ್ಲಿತ್ತು. ಪಂದ್ಯ ಇಲ್ಲಿಗೇ ಕೊನೆಗೊಂಡರೂ ಗೆಲುವು ಭಾರತದ್ದಾಗುತ್ತಿತ್ತು. ಪಾರ್ ಸ್ಕೋರ್’ 151 ರನ್ ಆಗಿತ್ತು.
Advertisement
ಆದರೆ ಮಳೆ ನಿಂತ ಬಳಿಕ ಭಾರತದ ಇನ್ನಿಂಗ್ಸ್ ನಾಟಕೀಯ ತಿರುವು ಪಡೆಯಿತು. ಪಟಪಟನೆ ವಿಕೆಟ್ ಉರುಳುತ್ತ ಹೋಯಿತು. ಹಲೀìನ್ ದೇವಲ್ ಮತ್ತು ದೀಪ್ತಿ ಶರ್ಮ ಒಂದೇ ಓವರ್‌ನಲ್ಲಿ ರನೌಟ್ ಆದದ್ದು ಭಾರತಕ್ಕೆ ಭಾರೀ ಹೊಡೆತವಿಕ್ಕಿತು. ಸ್ನೇಹ್ ರಾಣಾ, ದೇವಿಕಾ ವೈದ್ಯ ಖಾತೆಯನ್ನೇ ತೆರೆಯಲಿಲ್ಲ. ಪಂದ್ಯ ಅಂತಿಮ ಓವರ್‌ನತ್ತ ಹೊರಳುವಾಗ ಒಂದು ವಿಕೆಟ್‌ನಿಂದ 3 ರನ್ ಮಾಡಬೇಕಾದ ಗುರಿ ಭಾರತದ ಮುಂದಿತ್ತು. ಮರೂಫಾ ಅಖ್ತರ್ ಅವರ 3ನೇ ಎಸೆತದಲ್ಲಿ ಮೇಘನಾ ಸಿಂಗ್ ಕಾಟ್ ಬಿಹೈಂಡ್ ಆದಾಗ ಸ್ಕೋರ್ ಸಮಬಲದಲ್ಲಿ ನೆಲೆಸಿತ್ತು. ಆಗ 33 ರನ್ ಮಾಡಿದ್ದ ಜೆಮಿಮಾ ಇನ್ನೊಂದು ತುದಿಯಲ್ಲಿದ್ದರು. 9ನೇ ವಿಕೆಟ್ 217ಕ್ಕೆ ಉರುಳಿದಾಗ ಬಾಂಗ್ಲಾಕ್ಕೂ ಗೆಲ್ಲುವ ಅವಕಾಶವಿತ್ತು.ಭಾರತದ ಸರದಿಯಲ್ಲಿ ಹರ್ಲೀನ್ ಸರ್ವಾಧಿಕ 77 ರನ್ (108 ಎಸೆತ, 9 ಬೌಂಡರಿ), ಮಂಧನಾ 59 ರನ್ (85 ಎಸೆತ, 5 ಬೌಂಡರಿ) ಹೊಡೆದರು. ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-4 ವಿಕೆಟಿಗೆ 225 ರನ್ (ಫರ್ಗಾನಾ ಹಕ್ 107, ಶಮಿಮಾ ಸುಲ್ತಾನಾ 52, ಸ್ನೇಹ್ ರಾಣಾ 45ಕ್ಕೆ 2). ಭಾರತ-49.3 ಓವರ್‌ಗಳಲ್ಲಿ 225 (ಹಲೀìನ್ 77, ಮಂಧನಾ 59, ಜೆಮಿಮಾ ಔಟಾಗದೆ 33, ನಹಿದಾ ಅಖ್ತರ್ 37ಕ್ಕೆ 3, ಮರೂಫಾ ಅಖ್ತರ್ 55ಕ್ಕೆ 2). ಪಂದ್ಯಶ್ರೇಷ್ಠ: ಹಲೀìನ್ ದೇವಲ್. ಸರಣಿಶ್ರೇಷ್ಠ: ಫರ್ಗಾನಾ ಹಕ್.