Advertisement

Women’s ODI Series; ಇಂದು ಕೊನೆಯ ಕದನ: ವೈಟ್‌ವಾಶ್‌ ತಪ್ಪಿಸಬೇಕಿದೆ ಭಾರತ

11:44 PM Jan 01, 2024 | Team Udayavani |

ಮುಂಬಯಿ : ಮಂಗಳ ವಾರದ ಭಾರತ- ಆಸ್ಟ್ರೇಲಿಯ ವನಿತಾ ಏಕದಿನ ಪಂದ್ಯದ ಮೂಲಕ 2024ರ ಕ್ರಿಕೆಟ್‌ ಋತು ಆರಂಭವಾಗಲಿದೆ. ಇದು ಸರಣಿಯ 3ನೇ ಹಾಗೂ ಅಂತಿಮ ಪಂದ್ಯ.

Advertisement

ಮೊದಲೆರಡೂ ಮುಖಾಮುಖಿಗಳಲ್ಲಿ ಸೋಲನುಭವಿಸಿ ಸರಣಿ ಕಳೆದುಕೊಂಡಿರುವ ಹರ್ಮನ್‌ ಪ್ರೀತ್‌ ಕೌರ್‌ ಬಳಗಕ್ಕೆ ಇದು ಪ್ರತಿಷ್ಠೆಯ ಪಂದ್ಯ. ವರ್ಷಾರಂಭ ದಲ್ಲೇ ವೈಟ್‌ವಾಶ್‌ ಅವಮಾನದಿಂದ ಪಾರಾಗಬೇಕಾದ ವಿಪರೀತ ಒತ್ತಡ ವನಿತಾ ತಂಡದ ಮೇಲಿದೆ.

ಎರಡು ಟೆಸ್ಟ್‌ ಪಂದ್ಯಗಳಲ್ಲಿ ಐತಿ ಹಾಸಿಕ ಫ‌ಲಿತಾಂಶ ದಾಖಲಿಸಿದ ಭಾರತ, ಏಕದಿನದಲ್ಲಿ ಹಳಿ ತಪ್ಪಿದೆ. ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ, ದ್ವಿತೀಯ ಮುಖಾಮುಖಿಯನ್ನು ಕೇವಲ 3 ರನ್ನುಗಳಿಂದ ಸೋತು ಒತ್ತಡಕ್ಕೆ ಸಿಲುಕಿದೆ. ಅಂತಿಮ ಪಂದ್ಯವನ್ನಾದರೂ ಗೆದ್ದು ಪೂರ್ತಿ ಮುಖಭಂಗದಿಂದ ಪಾರಾಗಬೇಕಿದೆ.

ತಪ್ಪಿಹೋದ ಅವಕಾಶ
ದ್ವಿತೀಯ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಕ್ಕೆ ತರುವ ಅವಕಾಶ ವೊಂದು ಭಾರತದ ಮುಂದಿತ್ತು. ರಿಚಾ ಘೋಷ್‌ ಆಸೀಸ್‌ ದಾಳಿಗೆ ಸಡ್ಡು ಹೊಡೆದು ನಿಂತು ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ ಇವರಿಗೆ ಇನ್ನೊಂದು ತುದಿಯಲ್ಲಿ ಸಮರ್ಥ ಬೆಂಬಲ ಲಭಿಸದೇ ಹೋಯಿತು. ಮುಖ್ಯವಾಗಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಬ್ಯಾಟಿಂಗ್‌ ವೈಫ‌ಲ್ಯ ತಂಡಕ್ಕೆ ಮುಳುವಾಗುತ್ತಿದೆ. ಈ ಸರಣಿಯಲ್ಲಿ ಅವರು ಗಳಿಸಿದ್ದು 9 ಮತ್ತು 5 ರನ್‌ ಮಾತ್ರ. ಪ್ರಸಕ್ತ ಋತುವಿನ ಎಲ್ಲ ಮಾದರಿಗಳ 8 ಇನ್ನಿಂಗ್ಸ್‌ಗಳಲ್ಲಿ ಕೌರ್‌ ಎರಡಂಕೆಯ ಗಡಿ ದಾಟಿದ್ದು ಮೂರರಲ್ಲಿ ಮಾತ್ರ. ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ 49 ರನ್‌ ಹೊಡೆದದ್ದೇ ಅತ್ಯಧಿಕ ಗಳಿಕೆ.

ಆಸ್ಟ್ರೇಲಿಯ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಖಾತೆಯನ್ನೇ ತೆರೆಯಲಿಲ್ಲ. ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. ಟೆಸ್ಟ್‌ ಗೆಲುವು ಕಂಡಾಗ ತವರಿನ ಏಕದಿನ ಸರಣಿಯಲ್ಲೂ ಭಾರತ ಮೇಲುಗೈ ಸಾಧಿಸೀತೆಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಇದೀಗ ಹುಸಿಯಾಗಿದೆ.

Advertisement

ನೂತನ ವನ್‌ಡೌನ್‌ ಆಟಗಾರ್ತಿ ರಿಚಾ ಘೋಷ್‌ ಆಕ್ರಮಣಕಾರಿ ಆಟದ ಮೂಲಕ ಅಗ್ರ ಕ್ರಮಾಂಕಕ್ಕೆ “ಫೈರ್‌ ಪವರ್‌’ ತುಂಬುತ್ತಿರುವುದು ಶುಭ ಸೂಚನೆ. ಆದರೆ ದ್ವಿತೀಯ ಪಂದ್ಯದ ಕೊನೆಯಲ್ಲಿ “ಎಸೆತಕ್ಕೊಂದು ರನ್‌’ ಲೆಕ್ಕಾಚಾರ ವಿದ್ದೂ ಅಮನ್‌ಜೋತ್‌ ಕೌರ್‌, ದೀಪ್ತಿ ಶರ್ಮ ಅವರಿಗೆ ಫಿನಿಶಿಂಗ್‌ ಸಾಧ್ಯವಾಗದೇ ಹೋದದ್ದೊಂದು ವಿಪರ್ಯಾಸ.

ಪೂಜಾ ವಸ್ತ್ರಾಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿತೀಯಾರ್ಧದಲ್ಲಿ ಹೊರಗುಳಿದಿದ್ದ ಸ್ನೇಹ್‌ ರಾಣಾ ಚೇತರಿಸಿಕೊಂಡಿದ್ದು, ಮಂಗಳವಾರ ಲಭ್ಯರಾಗುತ್ತಾರೆ ಎಂಬುದಾಗಿ ಕೋಚ್‌ ಅಮೋಲ್‌ ಮುಜುಮ್ದಾರ್‌ ಹೇಳಿದ್ದಾರೆ.

ಕ್ಯಾಚ್‌ಗಳೆಲ್ಲ ನೆಲಕ್ಕೆ!
ಭಾರತದ ಸೋಲಿಗೆ ಮತ್ತೂಂದು ಮುಖ್ಯ ಕಾರಣವೆಂದರೆ ಕಳಪೆ ಫೀಲ್ಡಿಂಗ್‌. ದ್ವಿತೀಯ ಪಂದ್ಯ ದಲ್ಲಂತೂ 7 ಕ್ಯಾಚ್‌ಗಳನ್ನು ನೆಲಕ್ಕೆ ಕೆಡವ ಲಾಗಿತ್ತು. ಫೀಲ್ಡಿಂಗ್‌ ಸುಧಾರಣೆ ಆಗದ ಹೊರತು ಭಾರತದ ಮೇಲುಗೈ ನಿರೀಕ್ಷಿಸುವುದು ತಪ್ಪು.

ಮುಂದಿನ ವರ್ಷ ಭಾರತದ ಆತಿಥ್ಯ  ದಲ್ಲೇ ಏಕದಿನ ವಿಶ್ವಕಪ್‌ ನಡೆ ಯುವುದರಿಂದ, ವನಿತಾ ಪಡೆ ಈಗಿಂದಲೇ ತನ್ನ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿಕೊಂಡು ಮುಂದಡಿ ಇಡಬೇಕಿದೆ. ಇದರಲ್ಲಿ ಫೀಲ್ಡಿಂಗ್‌ ವೈಫ‌ಲ್ಯ ಕೂಡ ಒಂದು.

ಸಾಮರ್ಥ್ಯಕ್ಕೆ ತಕ್ಕ ಆಟ
ಆಸ್ಟ್ರೇಲಿಯ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಹೀಗಾಗಿಯೇ ಇರಬೇಕು, 2007ರ ಫೆಬ್ರವರಿಯಿಂದ ಭಾರತದ ವಿರುದ್ಧ ಆಸೀಸ್‌ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿಲ್ಲ.

ಅಲಿಸ್ಸಾ ಹೀಲಿ “ಬಿಗ್‌ ಸ್ಕೋರ್‌’ ದಾಖಲಿಸದೇ ಇರಬಹುದು, ಆದರೆ ಲಿಚ್‌ಫೀಲ್ಡ್‌, ಪೆರ್ರಿ, ಮೂನಿ, ಮೆಕ್‌ಗ್ರಾತ್‌ ಅವರೆಲ್ಲ ಕ್ರೀಸ್‌ ಆಕ್ರಮಿಸಿ ಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ಲಿಚ್‌ಫೀಲ್ಡ್‌ ಮತ್ತು ಪೆರ್ರಿ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಭಾರತಕ್ಕೆ ಅಪಾಯಕಾರಿಯಾಗಿ ಗೋಚರಿಸಿದ್ದನ್ನು ಮರೆಯುವಂತಿಲ್ಲ.

“ಕಳೆದ ಅನೇಕ ವರ್ಷಗಳಿಂದ ಸ್ಥಿರವಾದ ಪ್ರದರ್ಶನ ನೀಡುತ್ತ ಬಂದಿರು ವುದೇ ನಮ್ಮ ಯಶಸ್ಸಿಗೆ ಮುಖ್ಯ ಕಾರಣ. ಭಾರತ ಪ್ರವಾಸದಲ್ಲೂ ನಾವು ಇದನ್ನು ಕಾಯ್ದುಕೊಂಡಿದ್ದೇವೆ. ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿ ಕೊಳ್ಳುವುದು ನಮ್ಮ ಗುರಿ. ಇದು ಅಸಾಧ್ಯವೇನಲ್ಲ’
– ಅನ್ನಾಬೆಲ್‌ ಸದರ್‌ಲ್ಯಾಂಡ್‌

ಆರಂಭ: ಅ. 1.30
 ಪ್ರಸಾರ: ಸ್ಪೋರ್ಟ್ಸ್ 18

Advertisement

Udayavani is now on Telegram. Click here to join our channel and stay updated with the latest news.

Next