Advertisement

ನೊಂದ ಮಹಿಳೆಯರಿಗೆ ಸಾಂತ್ವನ ಹೇಳಿ: ಶೋಭಾ ಶ್ರೀನಿವಾಸ್

04:26 PM Mar 15, 2022 | Team Udayavani |

ಕಡೂರು: ಕೆಲವು ಕುಟುಂಬಗಳಲ್ಲಿ ಮಹಿಳೆಯರು ಮಾನಸಿಕವಾಗಿ ನೆಮ್ಮದಿ ಕಾಣದೆ ಇರುವವರು ಇದ್ದಾರೆ. ಅಂತಹವರನ್ನು ಗುರುತಿಸಿ ಸಾಂತ್ವನ ಹೇಳಬೇಕಾಗಿದೆ ಎಂದು ಜಿಲ್ಲಾ ಮಾದಿಗ ದಂಡೋರ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್‌ ಹೇಳಿದರು.

Advertisement

ಪಟ್ಟಣದ ಕಸಾಪ ಸಭಾಂಗಣದಲ್ಲಿ ಕರ್ನಾಟಕ ಮಾದಿಗ ದಂಡೂರ ಸಮಿತಿಯ ಜಿಲ್ಲಾ ಮತ್ತು ತಾಲೂಕು ಘಟಕವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಮಾಜವು ಸೇರಿದಂತೆ ಇತರೆ ಸಮಾಜಗಳಲ್ಲಿಯೂ ಸಹ ಮಹಿಳೆ ಇಂದಿಗೂ ಶೋಷಣೆಗೊಳಗಾಗುತ್ತಿದ್ದು ಹೇಳಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗುತ್ತಿದ್ದಾಳೆ. ಅಂತಹ ಮಹಿಳೆಯರನ್ನು ಮೊದಲು ಗುರುತಿಸಿ ಅವರಿಗೆ ಸಾಂತ್ವನ ಹೇಳುವುದರ ಮೂಲಕ ನೆಮ್ಮದಿಯ ಬದುಕನ್ನು ಕಟ್ಟಿಕೊಡುವಂತಹ ಕೆಲಸವಾಗಬೇಕಾಗಿದೆ ಎಂದರು.

ತಂಗಲಿ ಗ್ರಾಪಂ ಅಧ್ಯಕ್ಷೆ ಆರತಿ ಗೋವಿಂದಪ್ಪ ಮಾತನಾಡಿ, ಮಾದಿಗ ದಂಡೋರ ಸಮಿತಿಯಿಂದ ಪ್ರಥಮವಾಗಿ ಮಹಿಳಾ ದಿನಾಚರಣೆಯನ್ನು ಆಯೋಜಿಸಿ ಸಮಾಜದ ಮಹಿಳೆಯರನ್ನು ಗುರುತಿಸಿ ಒಂದೆಡೆ ಸೇರುವ ಕಾರ್ಯ ಮಾಡಿರುವುದು ಶ್ಲಾಘನೀಯ. ಮುಂದೆ ಇದೇ ರೀತಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿರುವ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದರು.

ನೂತನ ತಾಲೂಕು ಅಧ್ಯಕ್ಷೆ ಮರವಂಜಿ ಮಂಜುಳಾ ನರಸಿಂಹಪ್ಪ ಮಾತನಾಡಿದರು. ನಿವೃತ್ತ ಶಿಕ್ಷಕ ಆರ್‌.ಜಿ. ಕೃಷ್ಣಸ್ವಾಮಿ ಮಹಿಳೆಯರ ಕುರಿತು ಮಾತನಾಡಿದರು. ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಶುಭ ಹಾರೈಸಿದರು. ಬೀರೂರಿನ ಮಂಜುಳಾ ವಿಶ್ವನಾಥ್‌, ಸೀತಾಲಕ್ಷ್ಮಿ, ನೇತ್ರಾವತಿ, ಸೌಂದರ್ಯ ಜಗದೀಶ್‌, ಸವಿತಾ ರಾಜಕುಮಾರ್‌, ಸುಜಾತ ಲಕ್ಷ್ಮಮ್ಮ, ಅಂಬಿಕಾ, ಲತಾ, ಪಾರ್ವತಮ್ಮ, ಶಾರದ, ವಿದ್ಯಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next