Advertisement

ನರೇಗಾದಲ್ಲಿ ಸ್ತ್ರೀಯರು: ಉಡುಪಿ ರಾಜ್ಯಕ್ಕೆ ಮೊದಲಿಗ

12:14 AM Aug 08, 2021 | Team Udayavani |

ಮಂಗಳೂರು: ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಮಹಿಳೆ ಯರ ಪಾಲ್ಗೊಳ್ಳುವಿಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 50 ದಾಟಿದ್ದು ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ, ಅಂದರೆ ಶೇ. 62ರಷ್ಟು ಸಾಧನೆ ದಾಖಲಿಸಿದೆ.

Advertisement

ಮಹಿಳೆಯರ ಭಾಗವಹಿಸುವಿಕೆ ಕನಿಷ್ಠ ಶೇ. 50 ಇರಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿದ್ದ ಮಹಿಳಾ ಕಾಯಕೋತ್ಸವದ ಮೊದಲ ಹಂತ ಫ‌ಲ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವನಿತೆಯರ ಪಾಲ್ಗೊಳ್ಳುವಿಕೆ ಶೇ. 50-62ಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಪ್ರತೀ ತಾಲೂಕಿನ 10 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಸಮೀಕ್ಷೆ ನಡೆಸಲಾಗಿತ್ತು. ಸಂಯೋಜಕರು ಮತ್ತು ಗ್ರಾ.ಪಂ. ಸಿಬಂದಿ ಮನೆ ಮನೆಗೆ ತೆರಳಿ ಮಹಿಳೆಯರನ್ನು ನರೇಗಾದತ್ತ ಬರಲು ಮನವೊಲಿಸಿದ್ದರು. ದ.ಕ.ದಲ್ಲಿ 1ನೇ ಹಂತದಲ್ಲಿ ಪ್ರತೀ ತಾಲೂಕಿನ 10 ಮತ್ತು ಪ್ರಸ್ತುತ 2ನೇ ಹಂತದಲ್ಲೂ 10 ಗ್ರಾ.ಪಂ.ಗಳಲ್ಲಿ ಸಮೀಕ್ಷೆ ಆಗುತ್ತಿದೆ.

ಮಹಿಳೆಯರಿಂದ ಸ್ಪಂದನೆ :

“ನರೇಗಾ’ದಲ್ಲಿ ಸಮಾನ ವೇತನ ಇರುವುದರಿಂದ ಮತ್ತು ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಹೆಚ್ಚಿರುವುದರಿಂದ ಸ್ತ್ರೀಯರು ಆಸಕ್ತಿ ತೋರುತ್ತಿದ್ದಾರೆ. ಆದರೆ ಸಮುದಾಯ ಕೆಲಸಗಳಿಗಿಂತ ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಒಲವು ಇದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಸರಕಾರದ ನಿಯಮ ಪ್ರಕಾರ ನರೇಗಾದಲ್ಲಿ ಕನಿಷ್ಠ ಶೇ. 50ರಷ್ಟು ಮಹಿಳೆಯರ ಭಾಗವಹಿಸುವಿಕೆ ಬೇಕು. ದಕ್ಷಿಣ ಕನ್ನಡ ಜಿಲ್ಲೆ ಆ ಹಂತ ತಲುಪಿದೆ. ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಪ್ರಯತ್ನ ಮುಂದುವರಿಸಲಾಗಿದೆ.– ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

5 ಸಾವಿರ ಮಹಿಳೆಯರು ನರೇಗಾದಲ್ಲಿ ಪಾಲ್ಗೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಹಿಳೆ ಯರ ಪಾಲ್ಗೊಳ್ಳುವಿಕೆ ಶೇ. 62ರಷ್ಟು ಇದ್ದು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಶೇ. 75ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. – ಡಾ| ನವೀನ್‌ ಭಟ್‌, ಉಡುಪಿ ಜಿ.ಪಂ. ಸಿಇಒ

 

-ಸಂತೋಷ್‌ ಬೊಳ್ಳೆಟ್ಟು

 

Advertisement

Udayavani is now on Telegram. Click here to join our channel and stay updated with the latest news.

Next