Advertisement

ರೈಲ್ವೇ ಟ್ರ್ಯಾಕ್‌ನಲ್ಲಿ ಭಾರತೀಯ ಹಾಕಿ ಆಟಗಾರ್ತಿ ಶವ ಪತ್ತೆ

06:20 AM Aug 05, 2017 | |

ಹೊಸದಿಲ್ಲಿ : ಕಳೆದ ವರ್ಷ ದಕ್ಷಿಣ ಏಶ್ಯನ್‌ ಗೇಮ್ಸ್‌ ಹಾಕಿ ಕೂಟದಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಹರಿಯಾಣದ ಜ್ಯೋತಿ ಗುಪ್ತಾ ಸಾವಿಗೀಡಾಗಿದ್ದಾರೆ. ಇವರ ಶವ ಹರಿಯಾಣದ ರೆವಾರಿ ರೈಲ್ವೇ ನಿಲ್ದಾಣದ ಬಳಿಯ ಟ್ರ್ಯಾಕ್‌ನಲ್ಲಿ ಶುಕ್ರವಾರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಸೊನೆಪತ್‌ನವರಾದ 20 ವರ್ಷದ ಜ್ಯೋತಿ ಗುಪ್ತಾ, ಮಹರ್ಷಿ ದಯಾನಂದ ಯೂನಿವರ್ಸಿಟಿಯಲ್ಲಿ ಅಧ್ಯಯನ ನಡೆಸಿದ್ದರು. ಕ್ಲಾಸ್‌ 6 ಹಾಗೂ ಕ್ಲಾಸ್‌ 12ರ ಮಾರ್ಕ್‌ಶೀಟ್‌ನಲ್ಲಿ ಅವರ ಹೆಸರು ತಪ್ಪಾಗಿ ಮುದ್ರಣಗೊಂಡಿತ್ತು. ಇದನ್ನು ಸರಿಪಡಿಸಲೆಂದು ಅವರು ಮನೆ ಬಿಟ್ಟು ಕಾಲೇಜಿಗೆ ತೆರಳಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಗುರುವಾರ ರಾತ್ರಿ 7 ಗಂಟೆಗೆ ಮನೆಗೆ ಫೋನ್‌ ಮಾಡಿರುವ ಜ್ಯೋತಿ ಬಸ್‌ ಹಾಳಾಗಿದೆ. ಮನೆಗೆ ಬರುವುದು ಸ್ವಲ್ಪ ತಡವಾಗುತ್ತದೆ ಎಂದಿದ್ದರು ಎನ್ನಲಾಗಿದೆ. ಸುಮಾರು 10.30ರ ರಾತ್ರಿ ಹೊತ್ತಿಗೆ ರೈಲ್ವೇ ಪೊಲೀಸರು ಜ್ಯೋತಿ ಸಾವಿಗೀಡಾದ ವಿಷಯವನ್ನು ಮನೆಯವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.ರೈಲು ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಹುಡುಗಿಯೊಬ್ಬಳು ರೈಲಿಗೆ ಅಡ್ಡ ಬಂದಳು. ತತ್‌ಕ್ಷಣ ರೈಲು ನಿಲ್ಲಿಸಲು ಪ್ರಯತ್ನ ನಡೆಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅಷ್ಟರ ವೇಳೆಗೆ ದುರಂತ ಸಂಭವಿಸಿತ್ತು ಎಂದು ರೈಲು ಚಾಲಕ ಹೇಳಿದ್ದಾರೆ. ಪೊಲೀಸರು ಈಗ ಎಲ್ಲ ಹೇಳಿಕೆ ಪಡೆದುಕೊಂಡಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.ಜ್ಯೋತಿ ಪ್ರತಿಭಾವಂತ ಆಟಗಾರ್ತಿ. ಹಲವಾರು ಕೂಟಗಳಲ್ಲಿ ರಾಜ್ಯ ತಂಡ ಹರಿಯಾಣವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ಗಾಗಿ ಹಾಕಿ ಇಂಡಿಯಾ ನಡೆಸಿದ 3 ತಿಂಗಳ ತರಬೇತಿ ಶಿಬಿರದಲ್ಲೂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next