Advertisement

ವನಿತಾ ಹಾಕಿ: ಭಾರತ ಸೆಮಿಫೈನಲಿಗೆ

07:30 AM Apr 11, 2018 | Team Udayavani |

ಗೋಲ್ಡ್‌ ಕೋಸ್ಟ್‌: ಭಾರತೀಯ ವನಿತಾ ಹಾಕಿ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 1-0 ಅಂತರದಿಂದ ಮಣಿಸುವ ಮೂಲಕ ಗೇಮ್ಸ್‌ನ ಸೆಮಿಫೈನಲ್‌ ಸ್ಪರ್ಧೆಗೆ ಪ್ರವೇಶ ಗಿಟ್ಟಿಸಿಕೊಂಡಿದೆ. ಮಂಗಳವಾರ ನಡೆದ “ಎ’ ಗುಂಪಿನ ಅಂತಿಮ ಲೀಗ್‌ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸುವುದರೊಂದಿಗೆ ಮೂಂದಿನ ಹಂತಕ್ಕೆ ಲಗ್ಗೆಯಿಟ್ಟಿದೆ.

Advertisement

ನಾಯಕಿ ರಾಣಿ ರಾಮ್‌ಪಾಲ್‌ 47 ನಿಮಿಷದಲ್ಲಿ ಹೊಡೆದ ಗೋಲಿನ ನೆರವಿನಿಂದ ಭಾರತ ತಂಡ ಜಯ ದಾಖಲಿಸಿತು. ಈ ವಿಜಯದ ಬಳಿಕ ಭಾರತದ ಒಟ್ಟು 9 ಅಂಕಗಳೊಂದಿಗೆ “ಎ’ ಗುಂಪಿನಲ್ಲಿ ಎರಡನೇ ತಂಡವಾಗಿ ಉಳಿದುಕೊಂಡಿದೆ. ಇಂಗ್ಲೆಂಡ್‌ ತಂಡವೂ ಎರಡನೇ ಸ್ಥಾನದಲ್ಲಿದ್ದರೂ ಗೋಲ್‌ ಅಂತರದಿಂದ ಅಗ್ರಸ್ಥಾನದಲ್ಲಿದೆ. 

ದಕ್ಷಿಣ ಆಫ್ರಿಕಾ ತಂಡ ಒಟ್ಟು 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ಸ್ಥಾನದಲ್ಲಿರುವ ವೇಲ್ಸ್‌ ತಂಡವನ್ನು ಮುಂದಿನ ಲೀಗ್‌ ಪಂದ್ಯದಲ್ಲಿ ಎದುರುಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next