Advertisement

ವನಿತಾ ಹಾಕಿ: ಭಾರತ ಸೆಮಿಫೈನಲ್‌ ಪ್ರವೇಶ

02:55 PM Aug 28, 2018 | Team Udayavani |

ಜಕಾರ್ತಾ: ಭಾರತದ ವನಿತಾ ಹಾಕಿ ತಂಡ ಏಶ್ಯಾಡ್‌ ಪಂದ್ಯಾವಳಿಯ ಸೆಮಿಫೈನಲಿಗೆ ಲಗ್ಗೆ ಇರಿಸಿದೆ. ಸೋಮವಾರದ ಲೀಗ್‌ ಪಂದ್ಯದಲ್ಲಿ ಥಾಯ್ಲೆಂಡ್‌ಗೆ 5-0 ಗೋಲುಗಳಿಂದ ಸೋಲುಣಿಸುವ ಮೂಲಕ ರಾಣಿ ರಾಮ್‌ಪಾಲ್‌ ಬಳಗ ಪದಕದ ನಿರೀಕ್ಷೆಯೊಂದನ್ನು ಮೂಡಿಸಿದೆ. 

Advertisement

ಮೊದಲೆರಡು ಕ್ವಾರ್ಟರ್‌ಗಳಲ್ಲಿ ಎರಡೂ ತಂಡಗಳ ಪ್ರಬಲ ಹೋರಾಟದಿಂದಾಗಿ ಯಾವುದೇ ಗೋಲು ದಾಖಲಾಗಿರಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ರಾಣಿ ರಾಮ್‌ಪಾಲ್‌ ಗೋಲು ಖಾತೆ ತೆರೆದರು. ಕೊನೆಯ ಅವಧಿಯ ಆಟಕ್ಕೆ ತೆರಳುವಾಗ ಭಾರತ ಕೇವಲ 1-0 ಮುನ್ನಡೆಯಲ್ಲಿತ್ತು.

“ಬಿ’ ವಿಭಾಗದ ಎಲ್ಲ 4 ಪಂದ್ಯಗಳನ್ನು ಗೆದ್ದ ಭಾರತ 12 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಲಗ್ಗೆ ಇರಿಸಿದೆ. ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾ ದ್ವಿತೀಯ ಸ್ಥಾನಿಯಾಗಿ ಸೆಮಿ ತಲುಪಿದೆ. ದಕ್ಷಿಣ ಕೊರಿಯಾವನ್ನು ಭಾರತ 4-1 ಗೋಲುಗಳಿಂದ ಮಣಿಸಿತ್ತು.

ರಾಣಿ ಹ್ಯಾಟ್ರಿಕ್‌ ಸಾಧನೆ
ಆದರೆ ಅಂತಿಮ ಕ್ವಾರ್ಟರ್‌ನಲ್ಲಿ 4 ಗೋಲು ಬಾರಿಸುವ ಮೂಲಕ ವನಿತೆಯರು ತಮ್ಮ ಪಾರಮ್ಯ ಮೆರೆದರು. ರಾಣಿ ರಾಮ್‌ಪಾಲ್‌ ಅವರ ಹ್ಯಾಟ್ರಿಕ್‌ ಈ ಅವಧಿಯ ಆಕರ್ಷಣೆ ಆಗಿತ್ತು. ಅವರು 2ನೇ ಹಾಗೂ 5ನೇ ಗೋಲು ಬಾರಿಸಿ ಈ ಸಾಧನೆಗೈದರು. ಮೋನಿಕಾ ಮತ್ತು ನವಜ್ಯೋತ್‌ ಕೌರ್‌ ಉಳಿದೆರಡು ಗೋಲು ಹೊಡೆದರು. ಇದರೊಂದಿಗೆ ಈ ಕೂಟದಲ್ಲಿ ಭಾರತದ ವನಿತೆಯರು ಒಟ್ಟು 38 ಗೋಲು ಬಾರಿಸಿದಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next