Advertisement

ಮಹಿಳಾ ಆರೋಗ್ಯ ಪಾಲನೆ : ಉಪನ್ಯಾಸ

04:59 PM Feb 23, 2017 | Harsha Rao |

ಉಡುಪಿ: ಸ್ವಾವಲಂಬನೆ, ಆರೋಗ್ಯಪೂರ್ಣ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಳ್ಳುವುದು, ಹಿತಮಿತ ಆಹಾರ ಸೇವನೆ, ಪರಿಸರ ಸ್ವತ್ಛತೆ ನಿರ್ವಹಣೆ, ಲೈಂಗಿಕ ಸ್ವೇಚ್ಛಾಚಾರದಿಂದ ದೂರವಿರುವುದು – ಇವು ಮಹಿಳೆಯರ ಸಂತೃಪ್ತ ಜೀವನಕ್ಕೆ ಪೂರಕ ಅಂಶಗಳು ಎಂದು ಮಣಿಪಾಲದ ಸೋನಿಯಾ ಕ್ಲಿನಿಕ್‌ ಮತ್ತು ನರ್ಸಿಂಗ್‌ ಹೋಂನ ವೈದ್ಯೆ ಡಾ| ಗಿರಿಜಾ ಎ. ಅಭಿಪ್ರಾಯಪಟ್ಟರು.  

Advertisement

ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮಹಿಳಾ ಸಬಲೀಕರಣ ಪ್ರಕೋಷ್ಠದ ಆಶ್ರಯದಲ್ಲಿ ಏರ್ಪಡಿಸಲಾದ ಮಹಿಳೆಯರದ ಆರೋಗ್ಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲೆ ಡಾ| ಸುಕನ್ಯಾ ಮೇರಿ ಅಧ್ಯಕ್ಷತೆ ವಹಿಸಿದ್ದರು.  ಪ್ರಕೋಷ್ಠದ ಸಂಯೋಜಕಿ ಲವಿಟಾ ಡಿ’ಸೋಜಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಶಿವಾನಿ ಯು. ಶ್ಯಾನ್‌ ಭಾಗ್‌ ಉಪಸ್ಥಿತರಿದ್ದರು. ಚೈತ್ರಾ ಕಿಣಿ ಸ್ವಾಗತಿಸಿದರು. ಅನುರಾಧಾ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next