Advertisement
ಸೌಂದರ್ಯಪ್ರಜ್ಞೆ ಕಾರಣದಿಂದಲೇ ಮನುಷ್ಯರು ತಲೆ ಕೂದಲಿಗೆ ಮಾತ್ರ ಪ್ರಾಶಸ್ತ್ಯ ಕೊಡುತ್ತಾರೆ. ದೇಹದ ಉಳಿದ ಭಾಗದಲ್ಲಿರುವ ಕೂದಲಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಆರೋಗ್ಯ ದೃಷ್ಟಿಯಿಂದ ಎಲ್ಲ ಕೂದಲುಗಳಿಗೂ ಮಹತ್ವ ಕೊಡಬೇಕಾಗುತ್ತದೆ.
Related Articles
Advertisement
ವಿಷಕಂಠನೂ ಬಿಲ್ವಪ್ರಿಯನೂ: ಕೇವಲ ಕೂದಲು ಎಂದಲ್ಲ, ಸಹಜ ಆಹಾರದಲ್ಲಿಯೂ ಕೆಲವು ವಿಷಾಂಶಗಳು ಇರುತ್ತವೆ. ಇಂತಹ ವಿಷಾಂಶಗಳು ದೇಹಕ್ಕೆ ಸೇರಿದರೆ ಅವುಗಳನ್ನು ಹೊರಗೆ ಹಾಕಲು ಬಿಲ್ವದ ಎಲೆ, ತುಳಸಿ ಎಲೆ, ಲಕ್ಕಿ ಸೊಪ್ಪು (ನಿರ್ಗುಂಡಿ) ಇತ್ಯಾದಿಗಳನ್ನು ಆಹಾರ ರೂಪದಲ್ಲಿ (ಕೇವಲ ಎಲೆ ಸೇವನೆ ಅಥವಾ ತಂಬುಳಿ ಇತ್ಯಾದಿಗಳನ್ನು ಮಾಡಿ) ಸೇವಿಸಬಹುದು. ಬಾಳೆದಿಂಡಿನ ಖಾದ್ಯಗಳನ್ನು ಬಳಸುವ ಕ್ರಮ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಮಜ್ಜಿಗೆಯೂ ಪರಿಣಾಮಕಾರಿ. ಶಿವನಿಗೆ ಬಿಲ್ವ ಪ್ರಿಯವಾಗಿ
ರುವುದೂ, ವಿಷಕಂಠ ಎಂಬ ಹೆಸರು ಇರುವುದೂ ಉಲ್ಲೇಖನೀಯ ಎನ್ನುತ್ತಾರೆ ಉದ್ಯಾವರ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಜನಪದ ಔಷಧ ವಿಭಾಗದ ಮುಖ್ಯಸ್ಥೆ ಡಾ| ಚೈತ್ರಾ ಹೆಬ್ಟಾರ್.
ಹೇರ್‌ಬಾಲ್ ಅಪಾಯ: ಕೂದಲು ಜೀರ್ಣ ವಾಗುವುದಿಲ್ಲ. ಬಿಡಿ ಬಿಡಿಯಾಗಿದ್ದರೆ ಮಲದ ರೂಪದಲ್ಲಿ ಹೊರಹೋಗುತ್ತದೆ. ಆದರೆ ಮಾನಸಿಕ ಸಮಸ್ಯೆ ಇರುವ ಕೆಲವರು ಕೂದಲನ್ನು ಕಿತ್ತು ತಿನ್ನು ತ್ತಾರೆ. ಇದು ಜೀರ್ಣಾಂಗದಲ್ಲಿ ಹೇರ್‌ಬಾಲ್ ಆಗಿ ಜೀರ್ಣ ವ್ಯವಸ್ಥೆಯನ್ನು ತಡೆಯುತ್ತದೆ. ಹೊಟ್ಟೆ ನೋವು ಇತ್ಯಾದಿಗಳು ಕಾಣುತ್ತವೆ, ಕೆಲವೊಮ್ಮೆ ಸರ್ಜರಿ ಮಾಡಬೇಕಾಗುತ್ತದೆ ಎಂದು ಮಣಿಪಾಲ ಕೆಎಂಸಿ ಕರುಳು ಬೇನೆ ವಿಭಾಗದ ಮುಖ್ಯಸ್ಥೆ, ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ಮಮತಾ ಬಲ್ಲಾಳ್ ಹೇಳುತ್ತಾರೆ.
ಎಣ್ಣೆಸ್ನಾನವೂ ಪರಿಹಾರ: ಯಾವುದೇ ಭಾಗದ ಕೂದಲು ಉದುರುವಿಕೆಗೆ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗುವುದೂ ಒಂದು ಕಾರಣ. ಕೂದಲು ಉದುರುವಿಕೆಯನ್ನು ತಡೆಗಟ್ಟಲು ಶುದ್ಧ ಎಣ್ಣೆಯ ಸ್ನಾನ ಉತ್ತಮ. ಇದೇ ಕಲ್ಪನೆಯಲ್ಲಿ ದೀಪಾವಳಿ ಸ್ನಾನ ಚಾಲ್ತಿಗೆ ಬಂತು. ನಿತ್ಯ ಎಣ್ಣೆ ಹಚ್ಚಿ ಸ್ನಾನ ಮಾಡಲು ಸಾಧ್ಯವಿಲ್ಲವಾದರೂ ವಾರ, ಪಕ್ಷ, ತಿಂಗಳಿ ಗೊಮ್ಮೆಯಾದರೂ ಮಾಡಬೇಕು ಎಂಬ ಸಲಹೆ ವೈದ್ಯ ಡಾ| ಜಯರಾಮ ಭಟ್ಟ ಅವರದು.
-ಮಟಪಾಡಿ ಕುಮಾರಸ್ವಾಮಿ