Advertisement

ವನಿತಾ ಡಬಲ್ಸ್‌ : ಬಾರ್ಬೊರಾ ಕ್ರೆಜಿಕೋವಾ ಡಬಲ್‌ ಸಾಧನೆ

12:39 AM Jun 14, 2021 | Team Udayavani |

ಶನಿವಾರವಷ್ಟೇ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದು ಮೊದಲ ಗ್ರ್ಯಾನ್ಸ್ಲಾಮ್‌ ಕಿರೀಟ ಏರಿಸಿಕೊಂಡ ಜೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಪ್ಯಾರಿಸ್‌ನಲ್ಲಿ ಅಪರೂಪದ ಅವಳಿ ಸಾಧನೆಗೈದಿದ್ದಾರೆ. ರವಿವಾರದ ವನಿತಾ ಡಬಲ್ಸ್‌ನಲ್ಲೂ ಚಾಂಪಿಯನ್‌ ಆಗಿ ಹೊರಹೊಮಮ್ಮಿದ್ದಾರೆ.

Advertisement

ಕ್ಯಾಥರಿನಾ ಸಿನಿಯಕೋವಾ-ಬಾರ್ಬೊರಾ ಕ್ರೆಜಿಕೋವಾ ಜೋಡಿ ಪ್ರಶಸ್ತಿ ಸಮರದಲ್ಲಿ ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌-ಅಮೆರಿಕದ ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ವಿರುದ್ಧ 6-4, 6-2 ನೇರ ಸೆಟ್‌ಗಳ ಜಯ ಸಾಧಿಸಿತು.

ಈ ಪರಾಕ್ರಮದೊಂದಿಗೆ 2000ದ ಬಳಿಕ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌, ಡಬಲ್ಸ್‌ ಪ್ರಶಸ್ತಿಗಳೆಡರ ಮೇಲೂ ಹಕ್ಕು ಚಲಾಯಿಸಿದ ಮೊದಲ ಆಟಗಾರ್ತಿ ಎಂಬ ಹಿರಿಮೆ ಕ್ರೆಜಿಕೋವಾ ಅವರದಾಯಿತು. ಅಂದು ಫ್ರಾನ್ಸ್‌ನ ಮೇರಿ ಪಿಯರ್ ಈ ಹಿರಿಮೆಗೆ ಪಾತ್ರರಾಗಿದ್ದರು.

ಇದು ಕ್ರೆಜಿಕೋವಾ-ಸಿನಿಯಕೋವಾ ಜೋಡಿಗೆ ಒಲಿದ ದ್ವಿತೀಯ ಫ್ರೆಂಚ್‌ ಓಪನ್‌ ಪ್ರಶಸ್ತಿ. ಇವರು 2018ರಲ್ಲೂ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next