Advertisement

ಲೋಹದ ಹಕ್ಕಿಗಳ ಮೇಲೆ ಮಹಿಳಾ ಪ್ರಾಬಲ್ಯ !

12:55 PM Sep 24, 2018 | |

ಆಕಾಶದಲ್ಲಿ ಹಾರುತ್ತಿರುವ ವಿಮಾನ ಕಂಡಾಗ ನನಗೂ ರೆಕ್ಕೆ ಇದ್ದರೆ ಹೀಗೆ ಹಾರಬೇಕು ಎಂಬ ಮನಸ್ಸಾಗುತ್ತಿತ್ತು. ಈ ಕನಸನ್ನು ಮನೆ ಮಂದಿಯ ಮುಂದೆ ಹಂಚಿಕೊಂಡಾಗ ಅವರೆಲ್ಲ ನಕ್ಕು, ಇದು ನಿನ್ನಿಂದ ಆಗಲ್ಲಮ್ಮ ಎನ್ನುವ ಮೂಲಕ ನನಗೆ ಕನಸು ಕಾಣುವ ಅಧಿಕಾರವೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಬಿಡುತ್ತಿದ್ದರು. ಇದು ಹಲವು ವರ್ಷಗಳ ಹಿಂದಿನ ಕಥೆ. ಆದರೆ ಈಗ ಇದಕ್ಕೆ ತದ್ವಿರುದ್ದ. ಜಗತ್ತಿನಲ್ಲೇ ಅತಿ ಹೆಚ್ಚಿನ ಭಾರತೀಯ ಮಹಿಳೆಯರಿಂದು ಲೋಹದ ಹಕ್ಕಿಗಳ ಮೇಲೆ ಪ್ರಾಬಲ್ಯ ಸಾಧಿಸಿ ಆಕಾಶದ ಉದ್ದಗಲಕ್ಕೂ ಹಾರುತ್ತಿದ್ದಾರೆ.

Advertisement

ಪ್ರತಿಭೆ, ಸಾಧನೆಯ ಮೂಲಕ ಭಾರತೀಯ ಮಹಿಳೆಯರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹೀಗಾಗಿಯೇ ಭಾರತೀಯ ಮಹಿಳಾ ಪೈಲೆಟ್‌ ಗಳ ಸಂಖ್ಯೆಯ ಜತೆಗೆ ಅವರ ಸಾಧನೆಯೂ ಆಕಾಶದ ಎತ್ತರಕ್ಕೆ ಬೆಳೆಯುತ್ತಿದೆ.

ಖಾಸಗಿ ಕ್ಷೇತ್ರದಲ್ಲಿ ಶೇ. 12ರಷ್ಟು ಭಾರತೀಯ ಮಹಿಳೆಯರು ಇಂದು ಪೈಲೆಟ್‌ ಗಳಾಗಿ ದುಡಿಯುತ್ತಿದ್ದಾರೆ. ಮಾತ್ರವಲ್ಲ ಹೆಚ್ಚಿನ ಮಹಿಳೆಯರು ಪೈಲೆಟ್‌ಗಳಾಗಲು ಆಸಕ್ತಿ ತೋರುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲೆಟ್‌ಗಳಿರುವುದು ಭಾರತೀಯ ವಾಯುಪಡೆಯಲ್ಲಿ. ಈ ಮೂಲಕ ಭಾರತೀಯ ಮಹಿಳೆಯರು ಎಷ್ಟು ಸಾಧನೆಗಯ್ಯುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು ಎನ್ನುತ್ತಾರೆ ನಾಗರಿಕ ವಿಮಾನ ಯಾನ ಸಚಿವ ಜಯಂತ್‌ ಸಿನ್ಹಾ.

ವಾಣಿಜ್ಯ ಅಥವಾ ಯುದ್ಧ  ವಿಮಾನಗಳ ಪೈಲೆಟ್‌ ಹುದ್ದೆಗೆ ಎರಡರಲ್ಲೂ ಪುರುಷರಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಇದನ್ನು ನಿಭಾಯಿಸಲು ಹೆಣ್ಣು ಅಸಮರ್ಥಳು ಎಂಬ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ವಾಣಿಜ್ಯ ಕ್ಷೇತ್ರ ಮಾತ್ರವಲ್ಲ ಯುದ್ಧ ವಿಮಾನಗಳಲ್ಲೂ ಮಹಿಳಾ ಪೈಲೆಟ್‌ ಗಳ ಸಂಖ್ಯೆ ಅಧಿಕವಾಗುತ್ತಿದೆ.

ಭಾರತೀಯ ವಾಯುಪಡೆಯು ಮಹಿಳಾ ಪೈಲೆಟ್‌ ಗಳಿಗೆ ಫೈಟರ್‌ ಜೆಟ್‌ ಹಾರಿಸಲು ಅನುಮತಿ ಕೊಟ್ಟಿದ್ದರಿಂದಾಗಿ ಹಲವಾರು ಮಹಿಳೆಯರು ಇಂದು ಯುದ್ಧ ವಿಮಾನಗಳಲ್ಲೂ ಪೈಲೆಟ್‌ ಗಳಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ ಪೈಲೆಟ್‌ ಆಗಬೇಕು ಎಂದು ಕನಸುಕಾಣುವ ಹೆಣ್ಣು ಮಕ್ಕಳಿಗೆ ಆದರ್ಶವಾಗಿದ್ದಾರೆ.

Advertisement

ಅನ್ನಿ ದಿವ್ಯಾ
ಮೊದಲ ಬಾರಿಗೆ ವಿಮಾನವನ್ನು ಪ್ರವೇಶಿಸಿದವರು. ಅದು ಪ್ರಯಾಣಿಕರಾಗಿ ಅಲ್ಲ. ಪೈಲೆಟ್‌ ಆಗಿ. 30ನೇ ವಯಸ್ಸಿನಲ್ಲಿ ಅವರು ತಮ್ಮ ಬದುಕಿನ ಬಗ್ಗೆ ನಿಶ್ಚಿತ ಗುರಿ ಹೊಂದಿದ್ದರು. ಹೀಗಾಗಿ ಬೋಯಿಂಗ್‌ 777 ಎಂಬ ಯುದ್ಧ ವಿಮಾನವನ್ನು ಆಂಧ್ರಪ್ರದೇಶದ ವಿಜಯವಾಡದಿಂದ ಹಾರಿಸಿದ್ದರು.

ಸಯ್ಯದ್‌ ಸಾಲ್ವಾ ಫಾತಿಮಾ
ಮುಸ್ಲಿಂ ಸಮುದಾಯ ಹೆಣ್ಣು ಮಗಳ ಸಾಧನೆ ಇತರರಿಗೂ ಪ್ರೇರಣೆ ನೀಡುವಂತಿದೆ. ಅತ್ಯಂತ ಪ್ರತಿಷ್ಠಿತ ವಿಮಾನ ಯಾನ ವಾದ ಏರ್‌ ಬಸ್‌ ಏ 320 ಯಡಿವೈ ಸಿಎ ಪರವಾನಿಗೆಗೆ ಕಾಯುತ್ತಿರುವ ಸಯ್ಯದ್‌ ಸಾಲ್ವಾ ಫಾತಿಮಾ, 20ನೇ ವರ್ಷದಲ್ಲಿ ಹೊಸದಿಲ್ಲಿಯಿಂದ 30,000 ಕಿ.ಮೀ. ದೂರ ದಲ್ಲಿರುವ ಸ್ಯಾನ್‌ ಫ್ರಾ ನ್ಸಿಸ್ಕೋ ವರೆಗೆ ಕ್ಷಮತಾ ಬಾಜ್ಪೇ ಎಂಬ ವಿಮಾನವನ್ನು ಹಾರಿಸಿದ್ದರು.

ಗುಂಜನ್‌ ಸಕ್ಸೇನಾ
ಕಾರ್ಗಿಲ್‌ ಯುದ್ಧದಲ್ಲಿ ವೈದ್ಯಕೀಯ ನೆರವು ಮತ್ತು ಪಾಕ್‌ ಸೈನ್ಯದ ಚಟುವಟಿಕೆ ಪತ್ತೆಹಚ್ಚಲು ಚೀತಾ ಹೆಲಿಕಾಪ್ಟರ್‌ ಅನ್ನು ಹಾರಿಸಿದ ಕೀರ್ತಿ ಇವರದ್ದು. ಇವರೊಂದಿಗೆ ಮೋಹಾನ ಸಿಂಗ್‌, ಭುವನಾ ಕಾಂತ್‌ ಹೆಸರುಗಳೂ ಸೇರಿವೆ. ಇದು ಯುದ್ಧ ವಿಮಾನದಲ್ಲಿ ಮಹಿಳೆಯರ ಪ್ರಾಬಲ್ಯವಾದರೆ ಇನ್ನು ವಾಣಿಜ್ಯ ಕ್ಷೇತ್ರದಲ್ಲಿ ಪೈಲೆಟ್‌ ಗಳಾಗಿ ಜಗತ್ತಿನ ಉದ್ದಗಲಕ್ಕೂ ಸಂಚರಿಸಿರುವವರಲ್ಲಿ ರಶ್ಮೀ ಶರ್ಮಾ, ಜಸ್ಸಿ ಕಪೂರ್‌, ಶ್ರುತಿ ಲಾಜೂ, ಅಂಜನಾ ಸಿಂಗ್‌, ಧನಶ್ರೀ, ದೀಪ್ತಿ ಶ್ರೀನಿವಾಸ್‌, ರೀತೂ ರಥಿ, ಮೇಘನಾ ಅವರ ಹೆಸರುಗಳೂ ಖ್ಯಾತವಾಗಿವೆ.

ಇತ್ತೀಚೆಗಷ್ಟೇ ಮುಂಬಯಿಂದ ಜೈಪು ರಕ್ಕೆ ಮೊದಲ ಬಾರಿಗೆ ವಿಮಾನ ಚಲಾಯಿಸಿದ ಪಂಜಾಬ್‌ ಮೂಲದ ರೊಹಿನಾ ಮಾರಿಯಾ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಸೊಸೆ. ಇವರು ಮಂಗಳೂರಿನ ವಿಮಾನ ನಿಲ್ದಾಣದಿಂದಲೂ ವಿಮಾನ ಚಲಾಯಿಸುತ್ತಾರೆ.

ಹೀಗೆ ಒಂದು ಕಾಲದಲ್ಲಿ ಪುರುಷ ಪ್ರಧಾನವಾಗಿದ್ದ ಪೈಲೆಟ್‌ ಹುದ್ದೆಗಳನ್ನು ಇಂದು ಮಹಿಳೆಯರೇ ಹೆಚ್ಚಾಗಿ ಧಕ್ಕಿಸಿಕೊಂಡಿದ್ದಾರೆ. ಮಹಿಳೆಯರ ಪಾಲಿಗೆ ಇದು ಕೇವಲ ಒಂದು ಹುದ್ದೆಯಲ್ಲ. ಬದಲಿಗೆ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಸಾರಲು ಸಿಕ್ಕಿರುವ ಅವಕಾಶ. ಒಂದು ಕಾಲದಲ್ಲಿ ಮನೆಯಿಂದ ಹೆಣ್ಣು ಮಗಳು ಹೊರಗೆ ಹೋಗುವುದಕ್ಕೂ ಅವಕಾಶವಿರದಿದ್ದ ನಾಡಿನಲ್ಲಿ ಇಂದು ಆಕಾಶದೆತ್ತರಕ್ಕೂ ಹಾರಿದ್ದಾರೆ. ಇದು ಸಾಮಾನ್ಯ ಸಾಧನೆಯಲ್ಲ. 

ಇದಕ್ಕಾಗಿ ಸಾಕಷ್ಟು ಪರಿಶ್ರಮ, ತಾಳ್ಮೆ, ಗುರಿ ಸಾಧನೆಯ ಛಲವೇ ಮುಖ್ಯವಾಗಿರುತ್ತದೆ. ಲೋಹದ ಹಕ್ಕಿಗಳ ಮೇಲೆ ಭಾರತೀಯ ಮಹಿಳೆಯರ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಇನ್ನಷ್ಟು ಮಹಿಳೆಯರಿಗೆ ಸ್ಫೂರ್ತಿ  ತುಂಬುತ್ತಿದೆ.

ಅವನಿ ಚತುರ್ವೇದಿ
ಮಿಗ್‌- 29 ಯುದ್ಧ ವಿಮಾನ ತರಬೇತಿಯಲ್ಲಿ 2016ರಲ್ಲಿ ಕಾರ್ಯಾಚರಿ ಸಿದ್ದ ಮೂವರು ಪೈಲೆಟ್‌ ಗಳಲ್ಲಿ ಒಬ್ಬರು. 10 ವರ್ಷದ ಹಿಂದೆ ಸೋಲೋ ಜೆಟ್‌ ಫೈಟರ್‌ ಕಲ್ಪನೆಗೆ ಸಾಕಾರ ರೂಪ ಕೊಟ್ಟ ಕೀರ್ತಿ ಇವರದ್ದು. ಪಿತೃ ಪ್ರಧಾನ ಸಮಾಜದ ಮನಸ್ಥಿತಿಯನ್ನು ಬದಲಿಸಿದರು. ಉತ್ತರ ಪ್ರದೇಶದ ಬರೇಲಿಯ ಶುಭಂಗಿ ಸ್ವರೂಪ್‌ ಭಾರತದ ಮೊದಲ ನೌಕಾಪ ಡೆಯ ಪೈಲೆಟ್‌ ಆಗಿದ್ದಾರೆ. ಅರೇಬಿಯನ್‌ ಸಮುದ್ರದ ಮೇಲಿರುವ ಮೆರಿ ಟೈಮ್‌ ವಿಚ ಕ್ಷಣ ವಿಮಾನವನ್ನು ಹಾರಿಸಿದ ಮೊದಲ ಮಹಿಳಾ ಪೈಲೆಟ್‌ ಕೂಡ ಇವರೇ ಆಗಿದ್ದಾರೆ. 

ಧನ್ಯಶ್ರೀ, ಸುಶ್ಮಿತಾ

Advertisement

Udayavani is now on Telegram. Click here to join our channel and stay updated with the latest news.

Next