Advertisement

ಒಂಟಿ ಮಹಿಳೆಯ ದಿಟ್ಟ ಸೇವೆ : 12 ವರ್ಷದಿಂದ ಬಡ ಜನರ ಸೇವೆ

04:53 PM Mar 08, 2021 | Team Udayavani |

ಬಾಗಲಕೋಟೆ: ಬದುಕು ನೀಡಿದ ಊರಿನ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದ ದಿಟ್ಟ ಮಹಿಳೆಯೊಬ್ಬರು, ಕಳೆದ 12 ವರ್ಷಗಳಿಂದ ಸದ್ದಿಲ್ಲದ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಯಾವುದೇ ಪ್ರಚಾರದ ಹಂಗಿಲ್ಲದೇ ಸೇವೆಗಾಗಿಯಾರಿಂದಲೂ ಹಣಕಾಸಿನ ನೆರವೂ ಪಡೆಯದೇ ತಾವು ದುಡಿದ ಹಣದಲ್ಲಿ ಅರ್ಧ ಭಾಗವನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಹೌದು, ಮುಧೋಳದ ಸ್ನೇಹಾ ಮಲ್ಲಿಕಾರ್ಜುನ ಹಿರೇಮಠ, ಕಳೆದ 12 ವರ್ಷಗಳಿಂದ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ.ತಮ್ಮ ಕೈಲಾದಷ್ಟು ಸೇವೆ ಸಲ್ಲಿಸಲು ಸ್ನೇಹಲೋಕ ಮಹಿಳಾ ಸೇವಾ ಸಂಸ್ಥೆಯನ್ನು 12 ವರ್ಷಗಳ ಹಿಂದೆಯೇ ಕಟ್ಟಿಕೊಂಡಿದ್ದಾರೆ. ಸಂಸ್ಥೆàಯಲ್ಲಿ ಸುಮಾರು 15ರಿಂದ 20 ಜನ ಮಹಿಳೆಯರಿದ್ದು, ಅವರೆಲ್ಲ ಸ್ವಯಂ ಪ್ರೇರಣೆಯಿಂದ ಸೇವೆ ಮಾಡುತ್ತಾರೆ. ಕೆಲವರು ಹೊಸಬರೂ ಈ ಸಂಸ್ಥೆ ಸೇರಿಕೊಳ್ಳುತ್ತಾರೆ. ಸೀಮಂತ, ಗೃಹ ಪ್ರವೇಶ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಉಳಿದಉತ್ತಮ ಆಹಾರವನ್ನು ಕೊಳಚೆ ಪ್ರದೇಶ, ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಮಲಗುವ ಬಡ ಜನರಿಗೆ ನೀಡುತ್ತಾರೆ.

ವೃತ್ತಿಯಿಂದ ಫ್ಯಾಶನ್‌ ಡಿಸೈನರ್ ಆಗಿರುವ ಸ್ನೇಹಾ ಅವರು, ಮಾಸಿಕಗಳಿಸುವ ಹಣದಲ್ಲಿ ಅರ್ಧ ಭಾಗಸಮಾಜಕ್ಕಾಗಿ ಮೀಸಲಿಡುತ್ತಿದ್ದಾರೆ. ಪತಿ ಕೂಡ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಅವರೂ ಕೂಡ ಇವರಸೇವೆಗೆ ಸಾಥ್‌ ನೀಡುತ್ತಿದ್ದಾರೆ. ಸ್ನೇಹಾ ಅವರು, ಹತ್ತಾರು ಮಹಿಳೆಯರನ್ನು ಕಟ್ಟಿಕೊಂಡು ಪರಿಸರ ಕಾಳಜಿ, ಸಸಿ ನೆಡುವ, ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆ. ಮುಧೋಳದಲ್ಲಿ ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಅತ್ಯಂತ ಪುರಾತನ ಕಾಲದ ರಾಮ ಮಂದಿರವಿದ್ದು, ಇದು ಅತ್ಯಂತ ನಿರ್ಲಕ್ಷ್ಯಗೊಂಡು ಪಾಳು ಬಿದ್ದಿತ್ತು. ಅದನ್ನು ಸಂಪೂರ್ಣ ಸ್ವಚ್ಛತೆಗೊಳಿಸಿ, ಆ ರಾಮ ಮಂದಿರದಲ್ಲಿ ನಿತ್ಯವೂ ಸ್ನೇಹಲೋಕ ಮಹಿಳಾ ಸಂಸ್ಥೆಯ ಸದಸ್ಯೆಯರೇ ಪೂಜೆ ನಡೆಸುತ್ತಿದ್ದಾರೆ.

ಇನ್ನು ಮುಧೋಳದಲ್ಲಿ ಹಾದು ಹೋಗಿರುವ ವಿಜಯಪುರ-ಬೆಳಗಾವಿ ಹೆದ್ದಾರಿ ಅಗಲೀಕರಣ, ನಿತ್ಯವೂ ಕಿಕ್ಕಿರಿದ ವಾಹನ ದಟ್ಟನೆಯಿಂದ ಸಮಸ್ಯೆ ಎದುರಿಸುತ್ತಿದ್ದ ಮುಧೋಳದ ಜನತೆಗಾಗಿ ಬೈಪಾಸ್‌ ರಸ್ತೆ ನಿರ್ಮಾಣ ಕಾರ್ಯಕ್ಕೆ 10 ವರ್ಷಗಳ ಹಿಂದೆಯೇಭೂಮಿಪೂಜೆ ನಡೆದರೂಪೂರ್ಣಗೊಳ್ಳದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡುಪ್ರತ್ಯೇಕ ಪತ್ರ ಬರೆದಿದ್ದರು. 15 ದಿನಗಳಲ್ಲೇ ಪ್ರಧಾನಿ ಕಚೇರಿಯಿಂದ ಪ್ರತ್ಯುತ್ತರ ಬರುವ ಜತೆಗೆ, ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next