Advertisement
ದೇಶವನ್ನೆ ಅಲ್ಲೋಲಕಲ್ಲೋಲ ಮಾಡಿದ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಡೀ ತಾಲೂ ಕಿ ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕೊರೊನಾವನ್ನು ತಡೆಗಟ್ಟಲು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದು ಇದೇ ಮಹಿಳಾ ಅಧಿಕಾರಿಗಳು. ತಾಲೂಕಿನ ದಂಡಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇ ಶಕರು, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು, ಬಿಸಿಎಂ ಸಹಾ ಯಕ ನಿರ್ದೇಶಕರು ಎಲ್ಲಾ ಮಹಿಳಾ ಅಧಿಕಾರಿಗಳೇ.
Related Articles
Advertisement
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ: ಮಂಜುಶ್ರೀ ತಾಲೂಕಿನಲ್ಲಿ 3 ವರ್ಷಗಳಿಂದ ಮೀನು ಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೀನುಗಾರರಿಗೆ ಸರಕಾರದಿಂದ ಸಿಗುವ ಸೌಲಭ್ಯ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ರೇಣುಕಾದೇವಿ: ರೇಣುಕಾದೇವಿ ಯವರು ತಾಲೂಕಿನಲ್ಲಿ 2 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು. ಎಸ್.ಟಿ , ಎಸ್.ಸಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪುವಂತ ಕೆಲಸ ನಿರ್ವಹಿಸುತ್ತಿದ್ದು , ಇವರ ವ್ಯಾಪ್ತಿಯಲ್ಲಿ ಬರುವ ಹಾಸ್ಟಲ್‌ಗಳ ನಿರ್ವಹನೆಯಲ್ಲಿ ಯಾವುದೇ ಲೋಪ ಬಾರದಂತೆ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಿಗುವ ಸರ್ಕಾರದ ಸೌಲಭ್ಯವನ್ನು ತಲುಪಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಇಂದ್ರಮ್ಮ:
ಇಂದ್ರಮ್ಮ ನಿವೃತ್ತ ಪ್ರಾಂಶುಪಾಲರಾಗಿದ್ದು . ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಿರ್ಗತಿಕರ ಪರ ಧ್ವನಿ ಎತ್ತುವ ಇವರು , ನೂರಾರು ಹೋರಾಟ, ಕಾರ್ಯಾಗಾರ ನೀಡಿದ್ದು ಉತ್ತಮ ವಾಗ್ಮಿ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾಪಂ ಅಧ್ಯಕ್ಷರು ಜಯಮ್ಮ: ಜಯಮ್ಮ ತಾಲೂಕಿನ ಶೆಟ್ಟಿಕೆರೆ ನಿವಾಸಿಯಾಗಿದ್ದು ತಾಪಂ ಅಧ್ಯಕ್ಷರಾಗಿ ಜನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಪುರಸಭೆ ಅಧ್ಯಕ್ಷರು ಪುಷ್ಪ; ಪುಷ್ಪರವರು ಪಟ್ಟಣದ ನಿವಾಸಿಯಾಗಿದ್ದು , ಪಟ್ಟಣದ ಪ್ರಥಮ ಪ್ರಜೆಯಾಗಿದ್ದಾರೆ. ಪುರಸಭೆಯ ಮಹಿಳಾ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದು. ಜನಪರ ಕೆಲಸಗಳನ್ನು ಮಾಡುವ ಉದ್ದೇಶ ಹೊಂದಿದ್ದಾರೆ.
ತಾಲೂಕು ಆಸ್ಪತ್ರೆಯ ಡಿ ಗ್ರೂಪ್ ಮಹಿಳಾ ನೌಕರರು, ಪುರಸಭೆಯಲ್ಲಿನ ಮಹಿಳಾ ಪೌರ ಕಾರ್ಮಿಕರು, ಮಹಿಳಾ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ.
– ಚೇತನ್