Advertisement
ಪತ್ರಿಕೆ ಹಾಕುವ ಜತೆಗೆ ವ್ಯಾಯಾಮವೂ ಆಗುತ್ತದೆಕುಂದಾಪುರ: ಬೆಳ್ಳಂಬೆಳಗ್ಗೆ ಮನೆ-ಮನೆಗೆ ಪೇಪರ್ ಹಾಕುವವರು ಪುರುಷರು ಮಾತ್ರವಲ್ಲ, ಮಹಿಳೆಯರೂ ಈ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದಾರೆ ಅನ್ನುವುದೇ ಒಂದು ಸ್ಫೂರ್ತಿ ದಾಯಕ ವಿಚಾರ. ಇಂತಹ ಪ್ರೇರಣಾದಾಯಿ ಮಹಿಳೆಯರಲ್ಲಿ ಸಿದ್ದಾಪುರದ ಸುಮನಾ ಸದಾನಂದ ಭಟ್ ಅವರು ಸಹ ಒಬ್ಬರಾಗಿದ್ದಾರೆ.
Related Articles
***
ಸ್ವಾವಲಂಬಿ ಬದುಕಿನ ಛಲಗಾರ್ತಿ
Advertisement
***
ಬದುಕು ರೂಪಿಸಿಕೊಂಡ ತಾಯಿ-ಮಗಳು
ಮಂಗಳೂರು: ನಾಲ್ಕು ಗಂಟೆಗೆ ಎದ್ದು ಸ್ಕೂಟಿಯಲ್ಲಿ ಹೊರಟರೆ ಮನೆ ಮನೆಗಳಿಗೆ ಪೇಪರ್ ತಲುಪಿ ವಾಪಸ್ ಬರುವಾಗ 9 ಗಂಟೆ. ಪತ್ರಿಕೆ ವಿತರಣೆಯಲ್ಲಿ ಬದುಕು ಕಟ್ಟಿಕೊಂಡಿರುವ ಈ ತಾಯಿ ಮತ್ತು ಮಗಳಿಗೆ ತಾವು ಪೇಪರ್ ಏಜೆಂಟ್ ಎಂಬ ಹೆಮ್ಮೆ. ಸ್ವಾಭಿಮಾನ, ಆತ್ಮಸ್ಥೈರ್ಯ ಇವರಲ್ಲಿ ಮೂಡಿದೆ. ಛಲದಿಂದ ಬದುಕುವ ಬಗೆ ಗೊತ್ತಾಗಿದೆ. ಉದಯವಾಣಿ ಪತ್ರಿಕೆಯ ಪಾನೀರು ಏಜೆಂಟ್ ಆಗಿರುವ ಐರಿನ್ ಮೆಂಡೋನ್ಸ ಅವರು ಕಳೆದ 15 ವರ್ಷಗಳಿಂದ ಪತ್ರಿಕೆ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅದರ ಜತೆಗೆ ಹಾಲು ಕೂಡ ವಿತರಿಸುತ್ತಾರೆ. ಅನಿವಾರ್ಯ ಸಂದರ್ಭದಲ್ಲಿ ಐರಿನ್ ಅವರಿಗೆ ಹೋಗಲು ಸಾಧ್ಯವಾಗದಿದ್ದರೆ ಆಕೆಯ ಮಗಳು ಮನೆ ಮನೆಗಳಿಗೆ ತೆರಳಿ ಪೇಪರ್ ವಿತರಿಸುತ್ತಾರೆ. ಆಕೆ 5ನೇ ತರಗತಿಯಲ್ಲಿರುವಾಗಲೇ ಪೇಪರ್ ಹಾಕಲು ಅಮ್ಮನಿಗೆ ನೆರವಾಗುತ್ತಿದ್ದರು. ಪತಿಯನ್ನು ಕಳೆದುಕೊಂಡರೂ ಐರಿನ್ ಅವರು ಎದೆಗುಂದದೇ ತಮ್ಮ ಪತ್ರಿಕೆ, ಹಾಲು ವಿತರಣೆಯ ವ್ಯವಹಾರವನ್ನೇ ನಂಬಿ ಅದರಲ್ಲೇ ಸ್ವಾವಲಂಬನೆ ಸಾಧಿಸತೊಡಗಿದರು. ಆರಂಭದಲ್ಲಿ ತಮ್ಮನ ಸಹಾಯ ಪಡೆದುಕೊಂಡಿದ್ದ ಐರಿನ್ ಅವರು ಈಗ ಸ್ವತಂತ್ರವಾಗಿ ವ್ಯವಹಾರ ನಿಭಾಯಿಸಬಲ್ಲರು. ಲಾಕ್‌ಡೌನ್ ಸಮಯದಲ್ಲಿಯೂ ಪತ್ರಿಕೆ ವಿತರಿಸಿದ್ದಾರೆ. ನನಗೆ ಪತ್ರಿಕೆ ಬದುಕು ಕೊಟ್ಟಿದೆ. ಮಹಿಳೆಯರು ಕೇವಲ ನಾಲ್ಕು ಗೋಡೆಯ ನಡುವೆ ಇದ್ದು ಕೆಲಸ ಮಾಡಬೇಕೆಂದೇನಿಲ್ಲ. ಆಕೆಯೂ ಮನೆಯಿಂದ ಹೊರಗೆ ಬಂದು ಕೆಲಸ, ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಿದೆ. ಅನೇಕ ಮಂದಿ ಮಹಿಳೆಯರು ನಮಗಿಂತಲೂ ಕಷ್ಟದಲ್ಲಿರುವುದನ್ನು ನೋಡಿದ್ದೇನೆ. ಅವರೂ ಕೂಡ ಧೈರ್ಯ ತೆಗೆದುಕೊಂಡು ಸಾಧ್ಯವಾದ ಉದ್ಯೋಗ, ವ್ಯವಹಾರ ಮಾಡ ಬೇಕು. ಹಿಂಜರಿಕೆ ಬೇಡ. ನಾನು ಧೈರ್ಯ ಮಾಡಿದ್ದರಿಂದ ಇದೆಲ್ಲ ಸಾಧ್ಯ ವಾಗಿದೆ. ಪತಿ ಇಲ್ಲವೆಂಬ ನೋವು, ಆತಂಕ ನನ್ನಲ್ಲಿತ್ತು. ದೇವರು ನನಗೆ ದಾರಿ ತೋರಿಸಿದ್ದಾರೆ. ಇಂದು ಸ್ವಂತ ಕಾಲಲ್ಲಿ ನಿಂತು ಜೀವನ ನಡೆಸುತ್ತಿದ್ದೇನೆ. ಇಂದಿಗೂ 4 ಗಂಟೆಗೆ ಎದ್ದು ಪತ್ರಿಕೆ ವಿತರಿಸುತ್ತಿದ್ದೇನೆ ಎನ್ನುತ್ತಾರೆ ಐರಿನ್ ಅವರು.
***
4. ಪತ್ರಿಕೆ ಹೊರ ಜಗತ್ತಿಗೆ ಪರಿಚಯಿಸಿತು
ಉಡುಪಿ: ಕೆಲಸ ಯಾವುದಾದರೇನು ಶ್ರದ್ಧೆಯಿಂದ ದುಡಿಮೆ ಮಾಡಿದಾಗ ಮಾತ್ರ ಪ್ರತಿಫಲ ಕಾಣಲು ಸಾಧ್ಯ. ಅಂತಹ ಶ್ರಮ ಜೀವಿಯೇ ಉದಯವಾಣಿ ಪತ್ರಿಕೆ ವಿತರಕಿ ಹಾಗೂ ಏಜೆಂಟ್ ಸುಮಿತ್ರಾ ರಾಮನಾಥ್. 34 ವರ್ಷದ ಇವರು ಮಲ್ಪೆ ವಡಬಾಂಡೇಶ್ವರದ ನಿವಾಸಿ. ಪತಿ ರಾಮನಾಥ ಹಾಗೂ ಮಗಳು ಶ್ರೇಯಾ. ಕಳೆದ 5 ವರ್ಷಗಳಿಂದ ತೊಟ್ಟಂ ಪ್ರದೇಶದಲ್ಲಿ ಉದಯವಾಣಿ ಏಜೆಂಟ್ ಆಗಿ ದ್ದಾರೆ. ಮನೆ-ಮನೆಗೆ ತೆರಳಿ ಪತ್ರಿಕೆಯನ್ನು ತಲುಪಿಸುವ, ಬಿಲ್ ಸಂಗ್ರಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಎಸೆ ಸೆಲ್ಸಿ ಶಿಕ್ಷಣವನ್ನು ಪೂರ್ಣ ಗೊಳಿಸಿದ ಸುಮಿತ್ರಾ ಅವರು ಗೃಹಿಣಿಯಾಗಿದ್ದಾರೆ. ಮನೆ ಕೆಲಸದ ಜತೆಗೆ ಬದುಕಿನ ಬಂಡಿ ನಡೆಸಲು ಪತಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇವಲ ಪೇಪರ್ ವಿತರಕಿ ಯಾಗಿದ್ದ ಸುಮಿತ್ರಾ 5 ವರ್ಷ ಗಳಿಂದ ಪತ್ರಿಕೆಯ ಏಜೆಂಟ್ ಹಾಗೂ ಬಿಲ್ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 5ರ ಹೊತ್ತಿಗೆ ಪೇಪರ್ ಹಾಕುವ ಹುಡುಗರಿಗೆ ಪೇಪರ್ ಕೊಡುತ್ತಾರೆ. ಅವರಲ್ಲಿ ಯಾರಾದರೂ ಬಾರದಿದ್ದರೆ ತಾವೇ ಹೋಗಿ ಮನೆಗಳಿಗೆ ಪೇಪರ್ ಹಾಕುತ್ತಾರೆ. ಬಳಿಕ ಮನೆ ಕೆಲಸವನ್ನು ಪೂರ್ಣಗೊಳಿಸಿ ಬೆಳಗ್ಗೆ 10ರಿಂದ 1ರ ವರೆಗೆ ಮತ್ತು ಮಧ್ಯಾಹ್ನ 2ರಿಂದ 5ರ ವರೆಗೆ ಮನೆ-ಮನೆಗೆ ತೆರಳಿ ಬಿಲ್ ಸಂಗ್ರಹಿಸುತ್ತಾರೆ. ಉದಯವಾಣಿ ಪತ್ರಿಕೆ ಏಜೆಂಟ್ ಆದ ಬಳಿಕ ಜೀವನದಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಕೇವಲ ಮೂರು ಗೋಡೆಗೆ ಸೀಮಿತವಾಗಿದ್ದ ನಾನು ಹೊರ ಜಗತ್ತಿಗೆ ಪರಿಚಿತಗೊಂಡೆ. ಮನೆಯ ಕೆಲಸ ಮಾಡಿಕೊಂಡವಳಿಗೆ ದುಡಿಮೆಯ ಮಹತ್ವ ಅರಿವಾಗಿದೆ. ಮನೆಯಲ್ಲಿ ಪತಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಇತ್ತು. ಏಜೆಂಟ್ ಆದ ಬಳಿಕ ಆ ನೋವು ಕಡಿಮೆ ಆಗಿದೆ. ಇದರಿಂದಾಗಿ ಮನೆಯಿಂದ ಹೊರಗಡೆ ಹೋಗಿ ಕೆಲಸ ಮಾಡಬೇಕು ಎನ್ನುವ ಚಿಂತೆ ಇಲ್ಲ. ಬೆಳಗ್ಗೆ ಸರಿಯಾದ ಸಮಯಕ್ಕೆ ಪತ್ರಿಕೆ ಗ್ರಾಹಕರಿಗೆ ತಲುಪಿದರೆ ಜವಾಬ್ದಾರಿ ಮುಗಿಯುತ್ತದೆ ಎನ್ನುತ್ತಾರೆ ಸುಮಿತ್ರಾ.