ಗಜೇಂದ್ರಗಡ: ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ನಾವು ನಮ್ಮನ್ನುಗೌರವಿಸಿಕೊಳ್ಳಬೇಕಿದೆ. ಜಗತ್ತು ನಮ್ಮನ್ನುಗೌರವದಿಂದ ಕಾಣುತ್ತದೆ ಎಂದು ಅಕ್ಕನ ಬಳಗ ಅಧ್ಯಕ್ಷೆ ಸಂಯುಕ್ತಾ ಬಂಡಿಹೇಳಿದರು.
ಪಟ್ಟಣದ ಬಂಡಿಯವರ ಸಭಾಭವನದಲ್ಲಿ ಗಜೇಂದ್ರಗಡ-ಉಣಚಗೇರಿ ಅಕ್ಕನ ಬಳಗ ವತಿಯಿಂದ ಸೋಮವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿಗೂ ಕೂಡಾ ಸ್ತ್ರೀಕುಲದ ಮೇಲೆ ಕಿರುಕುಳಗಳು ನಡೆಯುತ್ತಿವೆ. ಇದನ್ನು ಹೊಡೆದೂಡಿಸಲು ನಮ್ಮ ಕಷ್ಟಗಳನ್ನುನಾವೇ ಅರಿತುಕೊಳ್ಳಬೇಕು. ಹೆಣ್ಣಿಗೆ ಹೆಣ್ಣೆ ಶತ್ರುವಾಗಬಾರದು ಎಂದು ಕಿವಿಮಾತು ಹೇಳಿದರು.
ಆಯುಷ್ ಇಲಾಖೆ ಅಧಿಕಾರಿ ಡಾ| ಸುಜಾತಾ ಪಾಟೀಲ ಮಾತನಾಡಿ,ಮಹಿಳೆಯರನ್ನು ಸಮಾಜ ದೂಷಿಸುವ ಕೆಲಸ ನಿಲ್ಲಬೇಕು. ಮಹಿಳೆಯರುಫ್ಯಾಷನ್‌ಗೆ ಒಳಗಾಗದೇ ಸಂಸ್ಕಾರಕ್ಕೆಒತ್ತು ನೀಡಬೇಕು ಎಂದರು.
ಮಹಿಳಾ ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತುಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿ ಮಂಜುಳಾ ರೇವಡಿ, ಗೀತಾ ಕಂಬಳಾಳ, ಸಾಕ್ಷಿ ಬಾಗಮಾರ, ಸುವರ್ಣಾ ನಂದಿಹಾಳ, ಅನುಸೂಯಾ ವಾಲಿ, ಪ್ರೇಮಾ ವಸ್ತ್ರದ, ಲೀಲಾವತಿ ವನ್ನಾಲ, ಉಮಾ ಮ್ಯಾಕಲ್, ಶರಣಮ್ಮ ಅಂಗಡಿ, ಗಿರಿಜಾ ಬಡಿಗೇರ, ಲೀಲಾವತಿ ಸವಣೂರು, ಶ್ವೇತಾ ಕಾರಡಗಿಮಠ, ವಿಜಯಲಕ್ಷ್ಮೀ ಚಟ್ಟೇರ, ಸಂಗೀತಾಗಾಣಗೇರ, ಲಲಿತಾ ಪಾಟೀಲ,ಸುಕನ್ಯಾ ಹೊಗರಿ, ಕಾವ್ಯಾ ಮೆಣಸಗಿ, ಎಲ್.ಆರ್. ಕೌಜಗೇರಿ, ಜಿ.ಎಫ್. ಉಪ್ಪಾರ, ಶ್ವೇತಾ ಕಾರಡಗಿಮಠ, ದೀಪಾ ಗೌಡರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಬಿಜೆಪಿ ಮಂಡಳ ಪ್ರಶಿಕ್ಷಣ ಕಾರ್ಯಕ್ರಮ :
ಮುಳಗುಂದ: ಪಕ್ಷದ ಶಿಸ್ತು,ಧ್ಯೇಯ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಶಿಕ್ಷಣ ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾರ್ಜಕ ಮತ್ತು ಸಾಬುನು ಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ ಹೇಳಿದರು.
ಸ್ಥಳೀಯ ಕೆಎಸ್‌ಎಸ್ ಕಾಲೇಜು ಸಭಾ ಭವನದಲ್ಲಿ ಗದಗ ಗ್ರಾಮೀಣ ಬಿಜೆಪಿ ಮಂಡಳ ವತಿಯಿಂದ ಪಕ್ಷದಕಾರ್ಯಕರ್ತರಿಗೆ ಆಯೋಜಿಸಿದ್ದ ಪ್ರಶಿಕ್ಷಣ ವರ್ಗ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.ಪಕ್ಷದ ಕಾರ್ಯಕರ್ತರು ಪಕ್ಷದ ಧ್ಯೇಯಗಳಿಗೆ ಬದ್ಧರಾಗಿರಬೇಕುಎಂದರು.
ಬಿ.ಎಸ್.ಚಿಂಚಲಿ, ದ್ಯಾಮಣ್ಣ ನೀಲಗುಂದ, ಮೋಹನ್ ಮದ್ದಿನ, ಬೂದಪ್ಪ ಹಳ್ಳಿ, ಹರೀಶ ಮಲ್ಲಾರಿ,ಬಸವರಾಜ ಮೆಣಸಿನಕಾಯಿ, ಶರಣಪ್ಪ ಭೋಳನವರ, ಮಲ್ಲಪ್ಪ ಬಳ್ಳಾರಿ, ಬಸವರಾಜ ಲಾಳಿ, ಬಾಬು ಯಲಿಗಾರ,ಆನಂದ ಶೇಟ್, ಉಮೇಶ ಮಲ್ಲಾಪುರ, ಸುಜಾತಾ ಬಂಕದ ಇತರರಿದ್ದರು.