Advertisement

ನಿಲ್ಲಬೇಕಿದೆ ಮಹಿಳಾ ದೌರ್ಜನ್ಯ: ಸಂಕನೂರ

12:39 PM Mar 18, 2021 | Team Udayavani |

ಗದಗ: ಭಾರತದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಆದರೆ ಇತ್ತಿಚಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಘಟನೆಗಳು ತಲೆತಗ್ಗಿಸುವಂತಾಗಿದೆ ಎಂದು ವಿ.ಪ ಸದಸ್ಯ ಪ್ರೊ| ಎಸ್‌.ವಿ. ಸಂಕನೂರ ವಿಷಾದ ವ್ಯಕ್ತಪಡಿಸಿದರು.

Advertisement

ಕರ್ನಾಟಕ ರಾಜ್ಯ ಮುಸ್ಲಿಂ ವೇಲ್‌ಫೇರ್‌ ಅಸೋಸಿಯೇಶನ್‌ನಿಂದ ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ರವಿವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯ ಸ್ಥಿತಿ-ಗತಿ, ಬದುಕು, ಮಹಿಳೆ ಮೇಲೆ ನಡೆಯುತ್ತಿರುವ ಎಲ್ಲ ರೀತಿಯದೌರ್ಜನ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಗಂಭೀರ ಚಿಂತನೆ ನಡೆಯಬೇಕು. ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಂಘಟನೆ ಜಿಲ್ಲಾಧ್ಯಕ್ಷ ಡಾ| ಸಿ.ಎಂ. ರಫಿ ಮಾತನಾಡಿ, ಮುಸ್ಲಿಂ ಸಮುದಾಯದ ನೌಕರರಶ್ರೇಯೋಭಿವೃದ್ಧಿಗೆ ಹುಟ್ಟಿಕೊಂಡ ಈ ಸಂಘಟನೆಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಚುರುಕಾಗಿ ಕಾರ್ಯ ಮಾಡಲಿದೆ ಎಂದರು.

ಸಂಘಟನೆ ಸಂಸ್ಥಾಪಕ ಸಲೀಂ ಹಂಚಿನಮನಿ, ರಾಜ್ಯ ಉಪಾಧ್ಯಕ್ಷ ಅಬ್ದುಲ್‌ಖಾದರ ಮೆಣಸಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ನಿಯಾಜ್‌ ಅಹ್ಮದ್‌, ಸಹ ಕಾರ್ಯದರ್ಶಿ ಶ್ರೀಮತಿ ಫರಹತ್‌ ಜಲಗೇರಿ ಸಂದರ್ಭೋಚಿತವಾಗಿ ಮಾತನಾಡಿದರು.

Advertisement

ಡಾ| ಅಮರೇಶ ನಾಶಿ, ಮಂಜುಳಾ ದಾನಿ, ಕುಮಾರಿ ಕೌಸರಭಾನು,ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಹಾಗೂಸಂಘಟನೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಎಸ್‌.ಎಂ. ಜಮಾದಾರ, ಎಸ್‌.ಎಸ್‌.ಚೌಥಾಯಿ, ಕೆ.ಟಿ. ಮೀರಾನಾಯಕ,ಆರ್‌.ಬಿ. ಖಾದಿರನವರ, ಬಿ.ಎಂ. ಮುಲ್ಲಾ,ಎ.ಎ. ಮುಲ್ಲಾ, ಎಂ.ಎಲ್‌. ತಾಳಿಕೋಟಿ,ಎಂ.ಆರ್‌. ಹರ್ಲಾಪುರ, ನಜೀರ್‌ ಶಿರಹಟ್ಟಿ, ಎಂ.ಕೆ. ನಲವಡಿ, ಎಂ.ಆರ್‌. ಹವಾಲ್ದಾರ,ಜಮೀರಅಹ್ಮದ್‌ ಖಾಜಿ, ಎಂ.ಎಚ್‌. ಸೌದತ್ತಿ,ಎಂ.ಎಚ್‌. ಶಿರಹಟ್ಟಿ, ಎಸ್‌.ಎಚ್‌. ಮನಿಯಾರ, ಆರ್‌.ಎಂ. ಬಿಂಕದಕಟ್ಟಿ, ಕೆ.ಎಚ್‌. ನರಗುಂದ, ಫರಿದಾಬೇಗಂ ಬಳ್ಳಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next