ಕನ್ನಡ ಮಹಿಳಾ ಸಾಂಸ್ಕೃತಿಕ ಜಗತ್ತು ಬಹಳ ವಿಶಿಷ್ಟವಾದುದು. ಜಾನಪದದಿಂದ ಆಧುನಿಕ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಹಿಳೆಯರು ಮತ್ತು ಮಾತೃಬಾವ ಸಂಸ್ಕೃತಿಯನ್ನು ಪುರುಷರ ಜೊತೆ ಜೊತೆಗೇ ಬೆಳೆಸಿಕೊಂಡು ಬಂದಿದೆ. ಮಹಿಳಾ ಸಾಂಸ್ಕೃತಿಕ ಲೋಕವನ್ನು ಸಂಭ್ರಮಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ . ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ದಿನೇಶ್ ಗುಂಡೂರಾವ್ ವಹಿಸಿಕೊಳ್ಳಲಿದ್ದಾರೆ. ಗಂಗಾಂಬಿಕೆ ಮಲ್ಲಿಕಾರ್ಜುನ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಲೀಲಾದೇವಿ ಆರ್. ಪ್ರಸಾದ್, ಬಿ.ಟಿ. ಲಲಿತಾ ನಾಯಕ್, ಡಾ. ವಸುಂಧರಾ ಭೂಪತಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸ್ತ್ರೀರೋಗತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರಿಂದ ವಿಶೇಷ ಉಪನ್ಯಾಸ ಇರಲಿದೆ. ಡಾ. ಮಮತಾ ಸಾಗರ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮೂಡಿಬರಲಿದೆ. ಆಹಾರ ಮೇಳವನ್ನು ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಉದ್ಗಾಟಿಸಲಿದ್ದಾರೆ. ಇನ್ನೂ ಹಲವು ಆಕರ್ಷಣೆಗಳು, ಚರ್ಚೆ, ಸಂವಾದಗಳು ಉತ್ಸವದ ಆಕರ್ಷಣೆ.
ಎಲ್ಲಿ?: ಫ್ರೀಡಂ ಪಾರ್ಕ್, ಮಹಾರಾಣಿ ಕಾಲೇಜು ಎದುರು, ಶೇಷಾದ್ರಿ ರಸ್ತೆ
ಯಾವಾಗ?: ಜ. 27, ಬೆಳಿಗ್ಗೆ 10