Advertisement

ಮುನಿರತ್ನ ವಿರುದ್ಧ ಕಿಡಿ;ಮಹಿಳಾ ಕಾರ್ಪೋರೇಟರ್ ಗಳಿಂದ ಆತ್ಮಹತ್ಯೆ ಯತ್ನ

03:22 PM May 29, 2017 | Sharanya Alva |

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಮೂವರು ಮಹಿಳಾ ಕಾರ್ಪೋರೇಟರ್ ಗಳು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಡೆದಿದೆ.

Advertisement

ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭಗೊಂಡಾಗ, ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಗ್ಗೆರೆ ಕಾರ್ಪೋರೇಟರ್ ಮಂಜುಳಾ ನಾರಾಯಣ ಸ್ವಾಮಿ, ಎಚ್ ಎಂಟಿ ವಾರ್ಡ್ ಕಾರ್ಪೋರೇಟರ್ ಆಶಾ ಸುರೇಶ್, ಜೆಪಿ ಪಾರ್ಕ್ ಕಾರ್ಪೋರೇಟರ್ ಮಮತಾ ವಾಸುದೇವ್ ಅವರು ಆಗ್ರಹಿಸಿದರು.

ಆದರೆ ಮೇಯರ್ ಅವರು ಈ ಬಗ್ಗೆ ಶೂನ್ಯವೇಳೆಯಲ್ಲಿ ಚರ್ಚಿಸುವಂತೆ ಸೂಚಿಸಿದರು. ಇದಕ್ಕೆ ಸೊಪ್ಪು ಹಾಕದ ಮಹಿಳಾ ಕಾರ್ಪೋರೇಟರ್ಸ್ಸ್ ಗಳು ಸಭೆಯ ನಡುವೆಯೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಮೇಯರ್ ಮನವಿ ಮಾಡಿಕೊಂಡರು ಅದಕ್ಕೂ ಜಗ್ಗದೆ ಪ್ರತಿಭಟನೆ ಮುಂದುವರಿಸಿದ್ದರು.

ಏತನ್ಮಧ್ಯೆ ಶಾಸಕ ಮುನಿರತ್ನ ಅವರ ಬೆಂಬಲಿಗರು ರಾವಣ, ದುಶ್ಯಾಸನರಿಗೆ ಹೋಲಿಕೆ ಮಾಡಿ ಆಕ್ರೋಶ ವ್ಯಕ್ತಪಡಿಸಿ, ತಾವು ತಂದಿದ್ದ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಾಟಕೀಯ ಬೆಳವಣಿಗೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next