ಬೀದರ: ಅನ್ನದಾತ ದೇಶದ ಬೆನ್ನೆಲುಬು. ಅವರ ಆದಾಯ ದುಪ್ಪಟ್ಟಿಗೆ ಶ್ರಮಿಸುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರಅನ್ನದಾತರನ್ನು ಸಂಕಷ್ಟಕ್ಕೆ ತಳ್ಳಿದೆ. ಹಾಗಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ರೈತನ ಬೆನ್ನಿಗೆ ನಿಂತಿದ್ದು “ಮಹಿಳಾಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ’ಘೋಷ ವಾಕ್ಯದೊಂದಿಗೆ ರೈತರ ಸಮಸ್ಯೆ ಅರಿಯಲಾಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕೃಷಿ ಮಸೂದೆಗಳ ವಿರುದ್ಧ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರದ ಬಗ್ಗೆ ಪ್ರಶ್ನೆಮಾಡಿದ್ದರೆ ದೇಶದ್ರೋಹಿ, ರೈತರು ಬೀದಿಗೆ ಬಂದರೆಅವರನ್ನು ಭಯೋತ್ಪಾದಕರು ಎಂದು ಹೇಳುತ್ತಿದ್ದಾರೆ. 21ನೇಶತಮಾನದಲ್ಲಿ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬುದನ್ನುಯೋಚಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಪ್ರತಿ ವರ್ಗದ ಜನರು ಒಂದಿಲ್ಲೊಂದು ಒಂದು ಸಮಸ್ಯೆಗಾಗಿ ಬೀದಿಗೆ ಬಂದಿದ್ದು, 2020ನೇ ವರ್ಷವು ಮುಷ್ಕರದ ವರ್ಷ ಎಂದು ಘೋಷಿಸಿದ್ದರೆ ಇತಿಹಾಸ ಸೇರುತ್ತದೆ. ಕೇಂದ್ರ ಹಣಕಾಸು ಸಚಿವರೇ ನಮ್ಮ ಸಂಕಷ್ಟಕ್ಕೆ ದೇವರೇ ಗತಿ ಎಂದುಹೇಳಿದಾಗ ಜನರು ತಮ್ಮ ಕಷ್ಟ ಯಾರಿಗೆ ಹೇಳಬೇಕು. ತೈಲಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಎಂಬುದನ್ನು ಸರ್ಕಾರಆಟ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಜನರೊಂದಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕನ್ನಡಿಗರ ಮೇಲೆ ಯಾಕಿಷ್ಟುಸಿಟ್ಟು ಎಂದು ಪ್ರಶ್ನಿಸಿ ರಾಜ್ಯದ ಬಡ ಜನರಿಗೆ ನೀಡುವ ಅನ್ನಭಾಗ್ಯ ಯೋಜನೆ ಕಡಿಮೆಯಾಗಿದೆ. ನರೇಗಾದಡಿ ರಾಜ್ಯಕ್ಕೆ ಅನುದಾನ ಕಡಿತ ಮಾಡಲಾಗಿದೆ ಎಂದು ಕಿಡಿಕಾರಿದ ಅವರು, ಜಿಲ್ಲೆಯಲ್ಲಿ ಸರ್ಕಾರವೇ ಕಾಣೆಯಾಗಿದ್ದು, ಹುಡುಕಿ ಕೊಡಬೇಕಿದೆ. ಜಿಲ್ಲೆಯ ಸಂಸದರು ಹಾಗೂ ಸಚಿವರು ಜಿಎಸ್‌ಟಿ ಪಾಲು ತಂದಿರುವ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಿನಾಕ್ಷಿ ಸಂಗ್ರಾಮ, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ವೇನಿಲಾ ಸೂರ್ಯವಂಶಿ ಇದ್ದರು.