Advertisement

ಇಂಡಿಯಾ “ಸಿ’ತಂಡಕ್ಕೆ ವನಿತಾ ಚಾಲೆಂಜರ್‌ ಟ್ರೋಫಿ

03:03 PM Jan 11, 2020 | Team Udayavani |

ಕಟಕ್‌: ಇಂಡಿಯಾ “ಸಿ’ ತಂಡ ವನಿತಾ ಟಿ20 ಚಾಲೆಂಜರ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಶುಕ್ರವಾರ ಇಲ್ಲಿನ “ಬಾರಾಬತಿ ಸ್ಟೇಡಿಯಂ’ನಲ್ಲಿ ನಡೆದ ಫೈನಲ್‌ನಲ್ಲಿ ಅದು ಇಂಡಿಯಾ “ಬಿ’ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಡಿಯಾ “ಬಿ’ 6 ವಿಕೆಟಿಗೆ 131 ರನ್‌ ಗಳಿಸಿದರೆ, ಇಂಡಿಯಾ “ಸಿ’ 15.2 ಓವರ್‌ಗಳಲ್ಲಿ 2 ವಿಕೆಟಿಗೆ 135 ರನ್‌ ಮಾಡಿ ವಿಜಯೋತ್ಸವ ಆಚರಿಸಿತು.

ವಿಜೇತ ತಂಡದ ಪರ ಶಫಾಲಿ ವರ್ಮ ಅಜೇಯ 89 ರನ್‌ ಬಾರಿಸಿ ಮಿಂಚಿದರು. ಸ್ಫೋಟಕ ಆಟವಾಡಿದ ಶಫಾಲಿ ಕೇವಲ 45 ಎಸೆತಗಳಲ್ಲಿ ಈ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಸಿಡಿಸಿದ್ದು 15 ಬೌಂಡರಿ, 2 ಸಿಕ್ಸರ್‌. ಮನಾಲಿ ದಕ್ಷಿಣಿ 15 ರನ್ನಿಗೆ 3 ವಿಕೆಟ್‌ ಕಿತ್ತು ಇಂಡಿಯಾ “ಬಿ’ಗೆ ಕಡಿವಾಣ ಹಾಕಿದರು. “ಬಿ’ ಪರ ಪೂಜಾ ವಸ್ತ್ರಾಕರ್‌ ಅಜೇಯ 43 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next