Advertisement

ಕಲಿಕೆಯಿಂದ ಮಹಿಳಾ ಆಸ್ಮಿತೆ ಜಾಗೃತಿ

11:35 AM May 20, 2018 | |

ವಿಜಯಪುರ: ಆಧುನಿಕ ಜಗತ್ತಿನಲ್ಲೂ ಮಹಿಳೆಗೆ ಘನತೆಯ ಬುದುಕು ಸಾಧ್ಯವಾಗಿಲ್ಲ. ಕಲಿಕೆಯಿಂದ ಮಾತ್ರ ಮನುಷ್ಯ ಪ್ರಜ್ಞೆ, ಮಹಿಳಾ ಆಸ್ಮಿತೆಯ ಜಾಗೃತಿ ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ಹೇಳಿದರು.

Advertisement

ಶನಿವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2017-18ನೇ ಸಾಲಿನ
ಕ್ರೀಡೆ, ವಸತಿ ನಿಲಯ ಮತ್ತು ಸಾಂಸ್ಕೃತಿಕ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
 
ಜಗತ್ತಿನ ಆಗುಹೋಗು ಜ್ಞಾನಕ್ಕಾಗಿ, ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಸಮಾಜದ ಮುಂದಿನ ಉತ್ತಮ ನಾಯಕಿಯರಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು. 

ಪ್ರಸ್ತುತ ದಿನದ ಪರಿಸರ ಸಮಸ್ಯೆ ಗಮನಿಸಿದರೆ ಜೈವಿಕ ಇಂಧನವು ಮುಂದಿನ ಭವಿಷ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ವಿಶ್ವವಿದ್ಯಾಲಯ ಜೈವಿಕ ಇಂಧನದ ಸಂಶೋಧನಾ ಕಾರ್ಯ ಮಾಡುತ್ತಿರುವುದು ಮತ್ತು ಅದನ್ನು ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
 
ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿ ನಿಯರು ಭಾಗವಹಿಸಬೇಕು. ಕಲಿಕೆ ಉದ್ದೇಶವು ಪ್ರತಿ ದಿನ ಮತ್ತು ಪ್ರತಿ ಕ್ಷಣ ಕಲಿಯುವುದಾಗಿದೆ. ವಿದ್ಯಾರ್ಥಿನಿಯರು ತಾವು ಕಲಿತ ವಿದ್ಯೆಯನ್ನು ವ್ಯರ್ಥ ಮಾಡಬಾರದು.
ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರು ಹೊಸ ಔಷಧಗಳ ಪ್ರಯೋಗಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರು ಆತ್ಮಗೌರವ ಮತ್ತು
ಮಾನವೀಯ ಮೌಲ್ಯದಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಪರಸ್ಪರ ಹೆಣ್ಣು-ಗಂಡು ಸಮಾನತೆಯಿಂದ ಬಾಳಬೇಕು. ಸ್ವಾಭಿಮಾನ ಆರ್ಥಿಕ ಸಶಕ್ತಿ ಅವಲಂಬಿಸಿದೆ ಎಂದು ಅಭಿಪ್ರಾಯಪಟ್ಟರು. 

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಸಬಿಹಾ ಮಾತನಾಡಿದರು. ಕ್ರೀಡಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ| ವಿಶ್ವನಾಥ ನಡಕಟ್ಟಿ, ವಸತಿ ನಿಲಯ ಪಾಲಕಿ ಡಾ| ಶ್ವೇತಾ ಬೆಂಗಾರೆ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಆಪ್ತ ಸಮಾಲೋಚಕಿ ಭಾರತಿ ಹಿರೇಮಠ ಇದ್ದರು. ವಿದ್ಯಾರ್ಥಿನಿಯರ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಪೂಜಾ ಬಾಗಿ ಮಾತನಾಡಿದರು.

Advertisement

ಈ ವೇಳೆ ಕ್ರೀಡಾ ಸ್ಪರ್ಧೆ ವಿಜೇತರಿಗೆ ಫಲಕ, ಪದಕ, ಪ್ರಮಾಣಪತ್ರ ವಿತರಿಸಲಾಯಿತು. ಕ್ರೀಡಾ ಸ್ಪರ್ಧೆಯಲ್ಲಿ
ಶಿಕ್ಷಣ ಅಧ್ಯಯನ ವಿಭಾಗವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು
ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ವೈ.ಪಿ. ನೀಲಮ್ಮ ಭಾಜನರಾದರು. 

ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಓಂಕಾರ ಕಾಕಡೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯವಸತಿ ನಿಲಯ ಪಾಲಕಿ ಡಾ| ಜ್ಯೋತಿ ಉಪಾಧ್ಯೆ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ| ಹನುಮಂತಯ್ಯ ಪೂಜಾರ ನಿರೂಪಿಸಿದರು. ಕ್ರೀಡಾ
ನಿರ್ದೇಶನಾಲಯ ನಿರ್ದೇಶಕ ಡಾ| ರಾಜಕುಮಾರ ಮಾಲಿಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next