Advertisement

Women’s Asia Cup: ಬಾಂಗ್ಲಾ ವಿರುದ್ಧ ಶ್ರೀಲಂಕಾ ಜಯಭೇರಿ

10:31 PM Jul 20, 2024 | Team Udayavani |

ದಂಬುಲ: ಇಲ್ಲಿ ಶನಿವಾರ ನಡೆದ ಮಹಿಳಾ ಟಿ20 ಏಷ್ಯಾಕಪ್‌ ಪಂದ್ಯಾವಳಿಯ 4ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆತಿಥೇಯ ಶ್ರೀಲಂಕಾ ತಂಡ 7 ವಿಕೆಟ್‌ಗಳ ಜಯ ಗಳಿಸಿದೆ. ಗ್ರೂಪ್‌ “ಬಿ’ಯ ಈ ಪಂದ್ಯದಲ್ಲಿ ಗೆದ್ದಿರುವ ಲಂಕಾ, 2 ಅಂಕಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಇಷ್ಟೇ ಅಂಕ ಗಳಿಸಿರುವ ಥೈಲ್ಯಾಂಡ್ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನದಲ್ಲಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ, 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 111 ರನ್‌ ಗಳಿಸಿತು. ತಂಡದ ಪರ ನಿಗರ್‌ ಸುಲ್ತಾನ ಅಜೇಯ 48, ಶೋರ್‍ನಾ ಅಖ್ತರ್‌ 25 ರನ್‌ ಗಳಿಸಿ ತಂಡಕ್ಕೆ ನೆರವಿತ್ತರು.

ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ, 17.1 ಓವರ್‌ನಲ್ಲೇ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆಲುವಿನ ಕೇಕೆ ಹಾಕಿತು. ವಿಶ್ಮಿ ಗುಣರತ್ನೆ 51, ಹರ್ಷಿತಾ ಸಮರವಿಕ್ರಮ 33 ರನ್‌ ಸೇರಿಸಿ ತಂಡದ ಗೆಲುವನ್ನು ಬರೆದರು. ವಿಶ್ಮಿ ಗುಣರತ್ನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next