Advertisement

ದಾಖಲೆ ನಿರ್ಮಿಸಿದ ಮಿಥಾಲಿ 2 ಸಾವಿರ ರನ್‌

12:18 PM Jun 08, 2018 | Sharanya Alva |

ಕೌಲಾಲಂಪುರ, ಜೂ. 7: ಭಾರತದ ಖ್ಯಾತ ಆಟಗಾರ್ತಿ ಮಿಥಾಲಿ ರಾಜ್‌ ಟಿ20 ಕ್ರಿಕೆಟ್‌ ನಲ್ಲಿ 2 ಸಾವಿರ ರನ್‌ ಪೂರೈಸಿದ್ದಾರೆ. ಏಶ್ಯ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಅವರು ಈ ದಾಖಲೆ ನಿರ್ಮಿಸಿದರು. ಇದರೊಂದಿಗೆ ಚುಟುಕು ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರೈಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ಈ ಸಾಧನೆಗೈದ 7ನೇ ಆಟಗಾರ್ತಿ. ಇಂಗ್ಲೆಂಡ್‌ನ‌ ಚಾರ್ಲೋಟ್‌ ಎಡ್ವರ್ಡ್ಸ್‌ (2,605 ರನ್‌) ಅಗ್ರಸ್ಥಾನದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next