Advertisement
ಅನನುಭವಿ ಥಾಯ್ಲೆಂಡ್ ಲೀಗ್ ಪಂದ್ಯದಲ್ಲಿ ಭಾರತದೆದುರು ಶೋಚ ನೀಯ ಆಟವಾಡಿ ಜುಜುಬಿ 37 ರನ್ನಿಗೆ ಕುಸಿದಿತ್ತು. ಭಾರತ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದಂತೂ ಥಾಯ್ಲೆಂಡ್‌ಗೆ ಸಾಧ್ಯವಾಗದ ಮಾತು. ಆದರೆ ಸೋಲಿನ ಪ್ರಮಾಣ ವನ್ನು ತಗ್ಗಿಸಬಹುದೆಂಬುದು ಸದ್ಯದ ನಿರೀಕ್ಷೆ.
ಭಾರತ ಲೀಗ್ ಉದ್ದಕ್ಕೂ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತ ಬಂದಿದೆ. ಈ ಪ್ರಯೋಗವೇ ಪಾಕಿಸ್ಥಾನ ವಿರುದ್ಧದ ಸೋಲಿಗೊಂದು ಕಾರಣ ಎಂಬುದರಲ್ಲಿ ಅನುಮಾನವಿಲ್ಲ.
Related Articles
Advertisement
ಥಾಯ್ಲೆಂಡ್ ವಿರುದ್ಧ ಇದನ್ನು ಹೇಗೂ ಸಂಭಾಳಿಸಬಹುದು. ಆದರೆ ಫೈನಲ್ ಸವಾಲು ಹೆಚ್ಚು ಕಠಿನ. ಇಲ್ಲಿ ಶ್ರೀಲಂಕಾ ಅಥವಾ ಪಾಕಿಸ್ಥಾನ ಸವಾಲು ಎದುರಾಗಲಿದೆ. ಲೀಗ್‌ನಲ್ಲಿ ಪಾಕ್ ವಿರುದ್ಧ ಎದುರಾದ ಸೋಲಿಗೆ ಫಿನಿಶಿಂಗ್ ಸಮಸ್ಯೆ ಕೂಡ ಮುಖ್ಯ ಕಾರಣ.
ಜಬರ್ದಸ್ತ್ ಜೆಮಿಮಾಭಾರತದ ಬ್ಯಾಟಿಂಗ್ ವಿಭಾಗದ “ಬಿಗ್ ಬೂಸ್ಟ್’ ಅಂದರೆ ಜೆಮಿಮಾ ರೋಡ್ರಿಗಸ್ ಅವರ ಜಬರ್ದಸ್ತ್ ಫಾರ್ಮ್. ಎರಡು ಅರ್ಧ ಶತಕ ಗಳೊಂದಿಗೆ 188 ರನ್ ಪೇರಿಸಿದ ಸಾಧನೆ ಇವರದು. ಓಪನರ್ ಶಫಾಲಿ ವರ್ಮ ಕೂಡ ಫಾರ್ಮ್ ಗೆ ಮರಳಿದಂತಿದೆ. ಮಂಧನಾ, ಕೌರ್, ದೀಪ್ತಿ ಉತ್ತಮ ಲಯದಲ್ಲಿದ್ದಾರೆ. ರಿಚಾ ಘೋಷ್ ಉಳಿದೆರಡು ಪಂದ್ಯಗಳಲ್ಲಾದರೂ ದೊಡ್ಡ ಮೊತ್ತ ಗಳಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಈ ಬಾರಿ ಸ್ಪಿನ್ ತ್ರಿವಳಿಗಳಾದ ದೀಪ್ತಿ ಶರ್ಮ, ಸ್ನೇಹ್ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರದೇ ಮೇಲುಗೈ. ಲಂಕಾ-ಪಾಕ್ ಕಠಿನ ಫೈಟ್
ಮೊದಲ ಸೆಮಿಫೈನಲ್ ಏಕಪಕ್ಷೀಯವಾಗಿ ನಡೆಯುವ ಸಾಧ್ಯತೆಯನ್ನು ತೆರೆದಿಟ್ಟರೆ, ಪಾಕಿಸ್ಥಾನ-ಶ್ರೀಲಂಕಾ ನಡುವಿನ ಮತ್ತೊಂದು ಸೆಮಿಫೈನಲ್ ತೀವ್ರ ಪೈಪೋಟಿಯ ನಿರೀಕ್ಷೆ ಮೂಡಿಸಿದೆ. ಪಾಕ್ ಕೂಡ ಭಾರತದಂತೆ 5 ಪಂದ್ಯ ಗೆದ್ದು 10 ಅಂಕ ಗಳಿಸಿದೆ. ಆದರೆ ರನ್‌ರೇಟ್‌ನಲ್ಲಿ ಹಿಂದೆ ಬಿತ್ತು. ಶ್ರೀಲಂಕಾ ಆರರಲ್ಲಿ 4 ಪಂದ್ಯ ಗೆದ್ದು ತೃತೀಯ ಸ್ಥಾನಿಯಾಯಿತು. ಮಂಗಳವಾರವಷ್ಟೇ ನಡೆದ ಕೊನೆಯ ಲೀಗ್ ಮುಖಾಮುಖಿಯಲ್ಲಿ ಪಾಕ್ 5 ವಿಕೆಟ್‌ಗಳಿಂದ ಲಂಕೆಯನ್ನು ಮಣಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಚಾಮರಿ ಅತಪಟ್ಟು ಬಳಗದಿಂದ ಸಾಧ್ಯವೇ ಎಂಬುದೊಂದು ಕುತೂಹಲ. ಸೆಮಿಫೈನಲ್-1
ಭಾರತ-ಥಾಯ್ಲೆಂಡ್
ಆರಂಭ: ಬೆಳಗ್ಗೆ 8.30 ಸೆಮಿಫೈನಲ್-2
ಪಾಕಿಸ್ಥಾನ-ಶ್ರೀಲಂಕಾ
ಆರಂಭ: ಅಪರಾಹ್ನ 1.00