Advertisement
ಭಾರತೀಯ ಕಾಲಮಾನದಂತೆ ಭಾರತ-ಶ್ರೀಲಂಕಾ ಪಂದ್ಯ ಬೆಳಗ್ಗೆ 6.30ಕ್ಕೆ, ಪಾಕಿಸ್ಥಾನ-ಬಾಂಗ್ಲಾದೇಶ ಮುಖಾಮುಖೀ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದೆ. ಅಕಸ್ಮಾತ್ ಈ ಪಂದ್ಯಗಳೂ ನಡೆಯದೆ ಹೋದರೆ ಆಗ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಫೈನಲ್ ಪ್ರವೇಶಿಸಲಿವೆ. “ಎ’ ವಿಭಾಗದಲ್ಲಿದ್ದ ಭಾರತ 4 ಅಂಕ ಹಾಗೂ 5.425ರಷ್ಟು ಉತ್ಕೃಷ್ಟ ರನ್‌ರೇಟ್ ಹೊಂದಿತ್ತು. ಬಾಂಗ್ಲಾದೇಶ “ಬಿ’ ವಿಭಾಗದ ಅಗ್ರಸ್ಥಾನಿಯಾಗಿತ್ತು (4.850).
ಜೂ. 12ರಂದು ಆರಂಭಗೊಂಡ ಈ ಪಂದ್ಯಾವಳಿ ಕಿರಿಯ ಕ್ರಿಕೆಟಿಗರ ಅಂತಾರಾಷ್ಟ್ರೀಯ ಅನುಭವವನ್ನು ಹೆಚ್ಚಿಸಲು ನೆರವಾಗಬೇಕಿತ್ತು. ಆದರೆ ಮೊದಲೆರಡು ದಿನದ 4 ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಮಳೆಯಿಂದ ರದ್ದಾದವು. ಮಲೇಷ್ಯಾ-ಯುಎಇ ನಡುವಿನ ಪಂದ್ಯ 5 ಓವರ್‌ಗಳಿಗೆ ಸೀಮಿತಗೊಂಡಿತು. ಲೀಗ್ ಹಂತದಲ್ಲಿ ಒಟ್ಟು 12 ಪಂದ್ಯ ನಡೆಯಬೇಕಿತ್ತು. 7 ಪಂದ್ಯಗಳು ಸಂಪೂರ್ಣ ಕೊಚ್ಚಿ ಹೋದವು. ಇದರಲ್ಲಿ ಭಾರತ- ಪಾಕಿಸ್ಥಾನ ನಡುವಿನ ಪಂದ್ಯವೂ ಸೇರಿತ್ತು. ಭಾರತ- ನೇಪಾಲ ಪಂದ್ಯ ಕೂಡ ವರುಣನ ಅಬ್ಬರಕ್ಕೆ ಸಿಲುಕಿತು.
Related Articles
Advertisement