Advertisement

Women’s Asia Cup Cricket: ಜು. 19ರಂದು ಭಾರತ-ಪಾಕ್‌ ಪಂದ್ಯ

11:11 PM Jun 25, 2024 | Team Udayavani |

ಹೊಸದಿಲ್ಲಿ: ವನಿತಾ ಟಿ20 ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಜು. 19ರಿಂದ 28ರ ತನಕ ಇದು ಶ್ರೀಲಂಕಾದ ಡಂಬುಲದಲ್ಲಿ ನಡೆಯಲಿದೆ. ಕೂಟದ ಮೊದಲ ದಿನವೇ ಹಾಲಿ ಚಾಂಪಿಯನ್‌ ಭಾರತ ಕಣಕ್ಕಿಳಿಯಲಿದ್ದು, ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

ಏಷ್ಯಾದ ಅಗ್ರ 8 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿದ್ದು, 2 ಗುಂಪುಗಳನ್ನಾಗಿ ವಿಭಜಿಸಲಾಗಿದೆ. “ಎ’ ವಿಭಾಗದಲ್ಲಿ ಭಾರತ, ಪಾಕಿಸ್ಥಾನ, ಯುಎಇ, ನೇಪಾಲ; “ಬಿ’ ವಿಭಾಗದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌ ಮತ್ತು ಮಲೇಷ್ಯಾ ತಂಡಗಳಿವೆ.

ಭಾರತ ತನ್ನ ಉಳಿದ ಲೀಗ್‌ ಪಂದ್ಯಗಳನ್ನು ಜು. 21ರಂದು ಯುಎಇ ವಿರುದ್ಧ ಮತ್ತು ಜು. 23ರಂದು ನೇಪಾಲ ಜು. 23 ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next