Advertisement

ಇಂದಿನಿಂದ ಬೆಂಗಳೂರಿನಲ್ಲಿ ಮಹಿಳಾ ಏಷ್ಯಾ ಕಪ್‌ ಬಾಸ್ಕೆಟ್‌ಬಾಲ್‌

06:10 AM Jul 23, 2017 | |

ಬೆಂಗಳೂರು: ಉದ್ಯಾನನಗರಿಯಲ್ಲಿ ಫಿಬಾ ಏಷ್ಯಾ ಕಪ್‌ ಮಹಿಳಾ ಬಾಸ್ಕೆಟ್‌ಬಾಲ್‌ ಕೂಟಕ್ಕೆ ಶನಿವಾರ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.

Advertisement

ಜು.23ರಿಂದ 29ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ. ಭಾರತ ತಂಡ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನ ಭಾರತ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಳಿದ ಪಂದ್ಯಗಳು ಕೋರಮಂಗಲದಲ್ಲಿ ನಡೆಯಲಿದೆ. ಭಾರತ ಶನಿವಾರ ರಾತ್ರಿ 8 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಉಸ್ಬೇಕಿಸ್ತಾನವನ್ನು ಎದುರಿಸಲಿದೆ. 

ಉಳಿದಂತೆ ಸಿಂಗಾಪುರ, ಲೆಬನಾನ್‌, ಕಜಕೀಸ್ಥಾನ, ಶ್ರೀಲಂಕಾ ಈ ಗುಂಪಿನಲ್ಲಿರುವ ಪ್ರಮುಖ ತಂಡಗಳಾಗಿವೆ. ವಿಭಾಗದಲ್ಲಿ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಫಿಲಿಪ್ಪಿನ್ಸ್‌, ಜಪಾನ್‌, ಚೈನೀಸ್‌ ತೈಪೆ, ಡಿಪಿಆರ್‌ ಕೊರಿಯಾ, ನ್ಯೂಜಿಲೆಂಡ್‌ ಹಾಗೂ ಚೀನಾದ ಪ್ರಬಲ ತಂಡಗಳು ಇವೆ ಎನ್ನುವುದು ವಿಶೇಷ.

ಪ್ರಬಲ  ಚಾಂಪಿಯನ್‌ ಜಪಾನ್‌: ಹಾಲಿ ಚಾಂಪಿಯನ್‌ ಜಪಾನ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ. ಉಳಿದಂತೆ ಚೀನಾ, ನ್ಯೂಜಿಲೆಂಡ್‌ ತಂಡಗಳು  ಕೂಡ ಕೂಟದ ಅಪಾಯಕಾರಿ ತಂಡಗಳಾಗಿವೆ. ಆದರೆ ಭಾರತ ತಂಡದ ಆಟಗಾರ್ತಿಯರು ಪ್ರಬಲ ಹೋರಾಟ ನೀಡುವ ಮೂಲಕ ಪ್ರಶಸ್ತಿ ಗೆಲುವಿನ ಕನಸಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next