Advertisement

ವನಿತಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾದ ಸೆಮಿ ಆಸೆ ಜೀವಂತ

04:11 PM Mar 22, 2022 | Team Udayavani |

ಹ್ಯಾಮಿಲ್ಟನ್: ವನಿತಾ ಏಕದಿನ ವಿಶ್ವಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ 110 ರನ್ ಅಂತರದಿಂದ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದರೆ, ಬಂಗ್ಲಾ ವನಿತೆಯರ ತಂಡ ಕೇವಲ 119 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಈ ಗೆಲುವಿನೊಂದಿಗೆ ಸೆಮಿ ಫೈನಲ್ ಕನಸು ಜೀವಂತವಾಗಿದೆ.

ಯಾಸ್ತಿಕಾ ಅರ್ಧಶತಕ: ಭಾರತಕ್ಕೆ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಮಂಧನಾ 32 ರನ್ ಗಳಿಸಿದರೆ, ಶಫಾಲಿ 42 ರನ್ ಬಾರಿಸಿದರು. ಉತ್ತಮ ಫಾರ್ಮ್ ಮುಂದುವರಿಸಿದ ಯಾಸ್ತಿಕಾ ಭಾಟಿಯಾ ಪಂದ್ಯದ ಏಕೈಕ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 30, ಸ್ನೇಹ್ ರಾಣ 27 ಮತ್ತು ರಿಚಾ ಘೋಷ್ 26 ರನ್ ಗಳಿಸಿದರು.

ಇದನ್ನೂ ಓದಿ:ತಮ್ಮ ಪುನೀತ್ ನಿಂದಾಗಿ ನಾನು ಸ್ವರ್ಗ ನೋಡುತ್ತಿದ್ದೇನೆ: ರಾಘವೇಂದ್ರ ರಾಜಕುಮಾರ್

ಗುರಿ ಬೆನ್ನತ್ತಿದ ಬಾಂಗ್ಲಾಕ್ಕೆ ಸ್ನೇಹ್ ರಾಣ ಬೌಲಿಂಗ್ ನಲ್ಲಿ ಕಾಡಿದರು. ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾ ರನ್ ಗಳಿಸಲು ಪರದಾಡಿತು. 32 ರನ್ ಗಳಿಸಿದ ಸಲ್ಮಾ ಖತುನ್ ರದ್ದೇ ಹೆಚ್ಚಿನ ಗಳಿಕೆ. ಸ್ನೇಹ್ ರಾಣ ನಾಲ್ಕು ವಿಕೆಟ್ ಕಿತ್ತರೆ, ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರು.

Advertisement

ಬಾಂಗ್ಲಾದೇಶ ವಿರುದ್ಧದ ಪಂದ್ಯ ಗೆದ್ದ ಭಾರತ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next