Advertisement
ಆಸ್ಪತ್ರೆಗೆ ಬಂದ ನೂರಕ್ಕೂ ಹೆಚ್ಚು ಮಹಿಳೆಯರು: ಈ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಯಳಂದೂರು ಪಟ್ಟಣದ ಆಸ್ಪತ್ರೆಯ ಮುಂಭಾಗ ಕೊಳ್ಳೇಗಾಲ, ಹನೂರು, ಸಂತೆಮರಹಳ್ಳಿ, ಚಾಮರಾಜನಗರ ಭಾಗದ ನೂರಕ್ಕೂ ಹೆಚ್ಚು ಮಹಿಳೆಯರನ್ನು ಆಶಾ ಕಾರ್ಯಕರ್ತೆಯರು ಕರೆ ತಂದಿದ್ದರು. ಕೆಲ ಕಾಲ ಗೊಂದಲ ಉಂಟಾಯಿತು.
Related Articles
Advertisement
ವೈದ್ಯರ ಪರದಾಟ: ಅಲ್ಲದೆ ಇಲ್ಲಿ ಕೇವಲ 4 ಜನ ವೈದ್ಯರ ತಂಡ ಮಾತ್ರ ಇದೆ. ಇದರಲ್ಲಿ ಒಬ್ಬ ಶಸ್ತ್ರ ಚಿಕಿತ್ಸಕರು, ಮತ್ತೂಬ್ಬರು ಅರೆವಳಿಕೆ ತಜ್ಞರು, ಒಬ್ಬರು ಪ್ರಸೂತಿ ತಜ್ಞರು ಇದ್ದು ಈ ಮೂವರೂ ಕೂಡ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲೆ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೊಬ್ಬ ವೈದ್ಯರು ಮಕ್ಕಳ ತಜ್ಞರಾಗಿದ್ದು ಹೊರ ರೋಗಿಗಳ ಸಂಖ್ಯೆಯೂ ಅಧಿಕವಾಗಿದ್ದರಿಂದ ಚಿಕಿತ್ಸೆ ನೀಡಲು ಹಾಗೂ ಪಡೆದುಕೊಳ್ಳಲು ವೈದ್ಯರು ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಆಸ್ಪತ್ರೆ ಮೇಲ್ದರ್ಜೆಗೇರಲಿ: ಯಳಂದೂರು ಸಾರ್ವಜನಿಕ ಆಸ್ಪತ್ರೆ ಮೇಲ್ದಜೇìಗೇರಿಸಲು ಅನೇಕ ವರ್ಷಗಳಿಂದಲೂ ಬೇಡಿಕೆ ಸಲ್ಲಿಸಲಾಗುತ್ತಿದೆ. ಇದನ್ನು 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಾಗಿ ಮಾರ್ಪಡಿಸಿದ್ದಲ್ಲಿ ಇಲ್ಲಿ ನುರಿತ ತಜ್ಞರೂ ಸೇರಿದಂತೆ 12 ಜನ ವೈದ್ಯರ ತಂಡ ಇರುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸುಲಭವಾಗುತ್ತದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಇದನ್ನು ಮೇಲ್ದಜೇìಗೇರಿಸಲು ಕ್ರಮ ವಹಿಸುತ್ತಿಲ್ಲ ಎಂದು ಪಟ್ಟಣದ ನಿವಾಸಿಗಳಾದ ಆರ್. ಗೋಪಾಲಕೃಷ್ಣ, ಸುಹೇಲ್‌ಖಾನ್ ದೂರಿದರು.
ಬೇರೆ ತಾಲೂಕಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗೆ ಆಗಮಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಒಂದು ದಿನದಲ್ಲಿ ಕೇವಲ 30 ಮಹಿಳೆಯರಿಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿದೆ. ಹಾಗಾಗಿ ಎಲ್ಲರ ಹೆಸರನ್ನೂ ನೋಂದಾಯಿಸಿಕೊಳ್ಳಲಾಗಿದೆ. ಉಳಿದವರಿಗೆ ಮುಂದಿನ ದಿನಾಂಕವನ್ನು ನಿಗಧಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ವಹಿಸಲಾಗುವುದು.-ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ * ಫೈರೋಜ್ ಖಾನ್