ಕಾಪು: ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಉದ್ಯೋಗ ಕ್ಷೇತ್ರದಲ್ಲಿ ಇಂದು ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದು, ಇದರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಆಪಾರವಾಗಿದೆ. ಯೋಜನೆಯ ಸ್ಥಾಪಕರ ಆಶಯದಂತೆ ಯೋಜನೆಯ ಮೂಲಕವಾಗಿ ಮಹಿಳಾ ಗುಂಪುಗಳನ್ನು ರಚಿಸಿಕೊಂಡು, ಸದಸ್ಯರಿಗೆ ಸೊÌàದ್ಯೋಗದ ಬಗ್ಗೆ ತರಬೇತಿ ನೀಡಿ, ಅದಕ್ಕೆ ಬೇಕಾಗುವ ಸಂಪನ್ಮೂಲವನ್ನು ಒದಗಿಸುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಆಭಿವೃದ್ಧಿಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಾ ಬರುತ್ತಿದೆ ಎಂದು ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್. ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ವಿ. ಟ್ರಸ್ಟ್, ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆ ಉಡುಪಿ ಇವರ ನೇತೃತ್ವದಲ್ಲಿ ಜಿಎಲ್‌ಜಿ, ಎಸ್‌ಎಚ್‌ಜಿ ಮತ್ತು ಪಿಬಿಜಿ ಸದಸ್ಯರಿಗಾಗಿ ಅ. 14ರಂದು ಕಾಪು ಮಹಾದೇವಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಮೂರು ದಿನಗಳ ಕೃತಕ ಆಭರಣ ತಯಾರಿ-ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧ.ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವಾಗಿ ಸೊÌàದ್ಯೊಗಕ್ಕೆ ಅನು ಗುಣವಾಗಿ 21 ವಿವಿಧ ರೀತಿಯ ತರಬೇತಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಉಡುಪಿ, ಧಾರವಾಡ, ಮಂಗಳೂರು, ಮೈಸೂರಿನಲ್ಲಿ ತರಬೇತಿ ಸಂಸ್ಥೆಗಳನ್ನು ಹೊಂದಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಎಂ. ಬಂಗೇರ ಮಾತನಾಡಿ, ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಹಿಳೆಯರು ಸದು ಪಯೋಗಿಸುವಂತೆ ಕರೆ ನೀಡಿದರು.
ಕಾಪು ಪುರಸಭೆಯ ಸದಸ್ಯರಾದ ಅನಿಲ್ ಕುಮಾರ್, ಸುಲೋಚನಾ ಬಂಗೇರ, ಕಾಪು ಮಹಾದೇವಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಯು., ಕೃತಕ ಆಭರಣ ತಯಾರಿ ಮಾಹಿತಿದಾರ ರಮೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ವಲಯ ಮೇಲ್ವಿಚಾರಕಿ ಮಮತಾ ಸ್ವಾಗತಿಸಿದರು. ತಾಲೂಕು ಕೃಷಿ ಮೇಲ್ವಿಚಾರಕ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸುಮನಾ ವಂದಿಸಿದರು.
ಮೂರು ದಿನಗಳ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಕೃತಕ ಆಭರಣ ತಯಾರಿ ಮಾತ್ರವಲ್ಲದೇ ಮಹಿಳೆಯರಿಗೆ ಮಾರುಕಟ್ಟೆ ವ್ಯವಸ್ಥೆ, ಗ್ರಾಹಕರೊಂದಿಗೆ ಸಂವಹನ, ಸಂಪರ್ಕ ಸಾಧಿಸುವ ವಿಧಾನ, ನಾಯಕತ್ವ ಗುಣಗಳು ಮತ್ತು ಸ್ವ ಉದ್ಯೋಗಕ್ಕೆ ಬೇಕಾಗುವ ಚಿಂತನೆಯ ಕುರಿತಾಗಿ ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕವಾಗಿ ಮಾಹಿತಿ ಮಾರ್ಗದರ್ಶನವನ್ನೂ ಒದಗಿಸಲಾಗುತ್ತದೆ.
-ರಮೇಶ್, ತರಬೇತಿ
ಸಂಸ್ಥೆಯ ಉಪನ್ಯಾಸಕ