ಕಲಬುರಗಿ: ಪುರುಷರೇ ದುಶ್ಚಟಕ್ಕೆ ಬಲಿಯಾಗುತ್ತಿರುವ ಹಿನ್ನೆಲೆ ಮನಗಂಡು ರಾಜ್ಯ ಸರ್ಕಾರ ಮಹಿಳೆಯರ ಹೆಸರಿನಲ್ಲಿಯೇ ಮನೆಗಳನ್ನು ಹಂಚಲು ಉದ್ದೇಶಿಸಿದ್ದು, ಮಹಿಳೆ ಯಾವುದೇ ವಸ್ತು ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಸಂಗಮೇಶ್ವರ ಕಾಲೋನಿಯ ಸಂಗಮೇಶ್ವರ ಮಹಿಳಾ ಮಂಡಳಿ ಆವರಣದಲ್ಲಿ ರವಿವಾರ ಸಂಜೆ ನಡೆದ ಮಂಡಳಿಯ 40ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವವಿದ್ದರೂ ದೇಶದಲ್ಲಿ ಸಂಸ್ಕಾರ ಉಳಿದಿದ್ದು ಸ್ತ್ರೀಯರಿಂದಲೇ.
ಯಾವುದೇ ಪುರುಷನ ಸಾಧನೆ ಹಿಂದೆ ಸ್ತ್ರೀ ಪಾತ್ರ ಮುಖ್ಯವಾಗಿರುತ್ತದೆ. ಮಹಿಳೆ ಕುಟುಂಬದ ಹಿತ ಬಯಸುತ್ತಾಳೆ. ಆದರೆ ಪುರುಷರಲ್ಲಿ ಸ್ವಾರ್ಥ ಭಾವನೆ ಹೆಚ್ಚು ಎಂದರು. ಹೃದ್ರೋಗ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೆಕುಂದ್ರಿ, ಹಂಪಿ ಕನ್ನಡ ವಿವಿ ಕುಲಪತಿ ಡಾ| ಮಲ್ಲಿಕಾ ಘಂಟಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿದರು.
ಪ್ರಭಾವತಿ ಧರ್ಮಸಿಂಗ್, ಡಾ| ಮಹಾದೇವಿ ಮಾಲಕರಡ್ಡಿ, ವೈಶಾಲಿ ದೇಶಮುಖರಿಗೆ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಂದಿತಾ ಲೇಡಿಸ್ ಆμàಸರ್ಸ್ ಕ್ಲಬ್ ಅಧ್ಯಕ್ಷೆ ಮೈತ್ರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಮತ್ತಿತರರು ಹಾಜರಿದ್ದರು. ಮಂಡಳಿ ಅಧ್ಯಕ್ಷೆ ಇಂದಿರಾ ಮಾನ್ವಿಕರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶೋಭಾ ರಂಜೋಳಕರ ರಚಿಸಿದ ಪುಸ್ತಕ ಬಿಡುಗಡೆ ಗೊಳಿಸಲಾಯಿ ತು. ಸಂಧ್ಯಾ ಹೊನಗುಂಟಿಕರ್ ಸ್ವಾಗತಿಸಿದರು. ಜಾನಕಿ ದೇಶಪಾಂಡೆ ನಿರೂಪಿಸಿದರು. ಫೆ. 27ರಂದು ಸಂಜೆ 6:00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮೇ ಪ್ಲವರ್ ನರ್ಸರಿ ಮಕ್ಕಳಿಂದ ವೆಲಕಂ ಡ್ಯಾನ್ಸ್, ದೇಶಭಕ್ತಿ ನೃತ್ಯ, ಸಂಗಮೇಶ್ವರ ಮಹಿಳಾ ಮಂಡಳದ ಸದಸ್ಯರಿಂದ ಒನಕೆ ಓಬವ್ವ ರೂಪಕ ಪ್ರದರ್ಶಿತವಾಗಲಿದೆ.
ವಂದಿತಾ ಆμàಸರ್ಸ ಲೇಡಿಸ್ ಕ್ಲಬ್ ಸದಸ್ಯರಿಂದ ರಾಷ್ಟ್ರೀಯ ಭಾವೈಕ್ಯತಾ ರೂಪಕ ನಡೆಯಲಿದೆ. ಸುನಂದಾ ಸಾಲೋಡಗಿ ಮತ್ತು ಸಂಗಡಿಗರಿಂದ ಕವ್ವಾಲಿ ಗೀತ ಚಿತ್ರ ಜತೆಗೆ ಇದೇ ಸಂದರ್ಭದಲ್ಲಿ ಮಗ ಮತ್ತು ಮಾಯಿನ್‌ಗಿಡ ನಾಟಕ ಪ್ರದರ್ಶನ ನಡೆಯಲಿದೆ.