Advertisement
ಈ ವರೆಗೆ ಭಾರತ ಟಿ20 ವಿಶ್ವಕಪ್ ಗೆಲ್ಲುವುದಿರಲಿ, ಫೈನಲ್ ತಲುಪಲಿಕ್ಕೂ ವಿಫಲವಾಗಿದೆ. 2009 ಮತ್ತು 2010ರಲ್ಲಿ ಸೆಮಿಫೈನಲ್ ತಲುಪಿದ್ದೇ ಭಾರತದ ಈವರೆಗಿನ ಅತ್ಯುತ್ತಮ ಸಾಧನೆ. ಆದರೆ ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ತಲುಪಿದ ಬಳಿಕ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತದ ಸಾಧನೆ ಗಮನಾರ್ಹ ಮಟ್ಟದಲ್ಲಿ ಸುಧಾರಣೆ ಕಾಣುತ್ತ ಬಂದಿದೆ. ಅಂದು ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೋತ ಬಳಿಕ ಭಾರತ ತನ್ನ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳುತ್ತಲೇ ಬಂದಿದ್ದು, ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಬಹುದು ಎಂಬುದು ಇತ್ತೀಚೆಗಷ್ಟೇ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಮೇಶ್ ಪೊವಾರ್ ವಿಶ್ವಾಸ.
Related Articles
Advertisement
ಶ್ರೀಲಂಕಾವನ್ನು ಅವರದೇ ನೆಲದಲ್ಲಿ ಮಣಿಸಿದ ಭಾರತ, ಬಳಿಕ ತವರಲ್ಲಿ ಆಸ್ಟ್ರೇಲಿಯ “ಎ’ ತಂಡಕ್ಕೆ ವೈಟ್‌ವಾಶ್ ಮಾಡುವ ಮೂಲಕ ಉತ್ತಮ ಫಾರ್ಮ್ ಪ್ರದರ್ಶಿಸಿದೆ. ಕೆರಿಬಿಯನ್ ನಾಡಿಗೆ ತೆರಳಿದ ಬಳಿಕ ಅಭ್ಯಾಸ ಪಂದ್ಯಗಳಲ್ಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡಿಗೆ ಸೋಲುಣಿಸಿದೆ.
ಪ್ರಬಲ ಬ್ಯಾಟಿಂಗ್ ಲೈನ್‌ಅಪ್
ಭಾರತದ ಅಗ್ರ ಕ್ರಮಾಂಕದಲ್ಲಿ ಸ್ಮತಿ ಮಂಧನಾ- ಮಿಥಾಲಿ ಪಾತ್ರ ನಿರ್ಣಾಯಕವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ತನ್ಯಾ ಭಾಟಿಯ, ಹರ್ಮನ್‌ಪ್ರೀತ್ ಕೌರ್ ಆಧಾರವಾಗಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಲೆಗ್‌ಸ್ಪಿನ್ನರ್ ಪೂನಂ ಯಾದವ್ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಬಹುದು. ಆದರೆ ಜೂಲನ್ ಗೋಸ್ವಾಮಿ ನಿವೃತ್ತಿಯ ಬಳಿಕ ತಂಡದ ವೇಗದ ಬೌಲಿಂಗ್ ವಿಭಾಗ ಅನುಭವದ ಕೊರತೆ ಎದುರಿಸುತ್ತಿದೆ.
ಕಳೆದ 3 ವಿಶ್ವಕಪ್‌ಗ್ಳಲ್ಲಿ ಗ್ರೂಪ್ ಹಂತ ದಾಟುವಲ್ಲಿ ವಿಫಲವಾಗಿದ್ದ ಭಾರತ, ಈ ಬಾರಿ ದೊಡ್ಡ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. ಲೀಗ್ ಹಂತದಲ್ಲಿ ಪ್ರಬಲ ನ್ಯೂಜಿಲ್ಯಾಂಡ್, ಸಾಂಪ್ರದಾಯಿ ಕ ಎದುರಾಳಿ ಪಾಕಿಸ್ಥಾನ ಮತ್ತು 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನು ಭಾರತ ಎದುರಿಸಬೇಕಿದೆ. “ನೀವು ವೈಯಕ್ತಿಕವಾಗಿ ಶ್ರೇಷ್ಠ ಪ್ರದರ್ಶನ ನೀಡಿದರೂ ತಂಡ ಬೆಳೆಯುತ್ತದೆ. ಭಾರತೀಯ ವನಿತಾ ಕ್ರಿಕೆಟ್ ಬೆಳೆಯುತ್ತದೆ. ಜನರೆಲ್ಲ ವನಿತಾ ಕ್ರಿಕೆಟ್ ಪಂದ್ಯಾವಳಿಯನ್ನು ಹೆಚ್ಚು ಆಸಕ್ತಿಯಿಂದ ನೋಡಲಾರಂಭಿಸುತ್ತಾರೆ. ಇಂಥ ದೊಡ್ಡ ಕೂಟಗಳಲ್ಲಿ ದಾಖಲೆಗಳನ್ನು ಮುರಿಯಲು ಪ್ರಯತ್ನಿಸಬೇಕು’ ಎಂದಿದ್ದಾರೆ ಕೋಚ್ ರಮೇಶ್ ಪೊವಾರ್.
ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿ.ಕೀ.), ಏಕ್ತಾ ಬಿಷ್ಟ್, ದಯಾಳನ್ ಹೇಮಲತಾ, ಮಾನ್ಸಿ ಜೋಶಿ, ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧನಾ, ಅನುಜಾ ಪಾಟೀಲ್, ಮಿಥಾಲಿ ರಾಜ್, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಪೂನಂ ಯಾದವ್.