Advertisement

ಮಳೆ ಭೀತಿ: ಸೇಂಟ್‌ ಲೂಸಿಯಾ ಪಂದ್ಯಗಳು ಆ್ಯಂಟಿಗುವಾದಲ್ಲಿ?

06:15 AM Nov 12, 2018 | Team Udayavani |

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಮಳೆಯ ಅಡಚಣೆ ಎದುರಾಗಿದೆ. ಶನಿವಾರ ಸೇಂಟ್‌ ಲೂಸಿಯಾದ ಗ್ರಾಸ್‌ ಐಲೆಟ್‌ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್‌-ಶ್ರೀಲಂಕಾ ನಡುವಿನ “ಎ’ ವಿಭಾಗದ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.

Advertisement

ಹವಾಮಾನ ವರದಿ ಪ್ರಕಾರ ಇನ್ನೂ ಒಂದು ವಾರ ಗ್ರಾಸ್‌ ಐಲೆಟ್‌ನಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಇಲ್ಲಿನ ಪಂದ್ಯಗಳನ್ನು ಆ್ಯಂಟಿಗುವಾಕ್ಕೆ ವರ್ಗಾಯಿಸಲು ಐಸಿಸಿ ಚಿಂತನೆ ನಡೆಸುತ್ತಿದೆ.

ಆ್ಯಂಟಿಗುವಾ ಮತ್ತು ಸೇಂಟ್‌ ಲೂಸಿಯಾ ಲೀಗ್‌ ಪಂದ್ಯಗಳ ತಾಣಗಳಾಗಿವೆ. ಸೇಂಟ್‌ ಲೂಸಿಯಾದ ಗ್ರಾಸ್‌ ಐಲೆಟ್‌ 8 ಲೀಗ್‌ ಪಂದ್ಯಗಳ ಆತಿಥ್ಯ ವಹಿಸಬೇಕಿತ್ತು. ಆದರೀಗ ಪ್ರಾಕೃತಿಕ ವಿಕೋಪ ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಯಾವುದೇ ಅಧಿಕೃತ ನಿರ್ಧಾರಕ್ಕೆ ಬರಲಾಗಿಲ್ಲ. ಆದರೆ ಇದಕ್ಕೆ ಅನೇಕ ಅಡ್ಡಿ ಆತಂಕಗಳಿವೆ. ಮುಖ್ಯವಾಗಿ ನೇರ ಪ್ರಸಾರದ ಬಹು ಮುಖ್ಯ ಸಾಧನವಾದ ಉಪಗ್ರಹವನ್ನು ಸಾಗಿಸುವುದು ದೊಡ್ಡ ಸಮಸ್ಯೆಯಾಗಿದೆ. ಇದರ ಸುರಕ್ಷತೆ ಬಗ್ಗೆ ಕಸ್ಟಮ್ಸ್‌ನವರು ಯಾವುದೇ ಖಾತ್ರಿ ನೀಡುವುದಿಲ್ಲ. ಅಲ್ಲದೇ ಆ್ಯಂಟಿಗುವಾದಲ್ಲಿ ಹೆಚ್ಚುವರಿ ಪಿಚ್‌ಗಳನ್ನು ಸಿದ್ಧಗೊಳಿಸಬೇಕಿದೆ. ಕ್ರಿಕೆಟಿಗರ ವಾಸ್ತವ್ಯದ ಸಮಸ್ಯೆ ತಲೆದೋರಬಹುದು. ವಿಶೇಷ ವಿಮಾನದ ವೆಚ್ಚ ಕೂಡ ದುಬಾರಿ ಆಗಲಿದೆ.ಮಳೆ ನಿಂತೀತೇ ಎಂದು ಕಾದು ನೋಡುವುದು ಸಂಘಟಕರ ಸದ್ಯದ ಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next