ಹುಣಸೂರು: ಮಹಿಳಾ ಸ್ವಸಹಾಯ ಸಂಘದ ಒಕ್ಕೂಟದ ಸದಸ್ಯರಿಗೆ ಸರಕಾರದ ವಿವಿಧ ಸೌಲಭ್ಯಗಳು ಹಾಗೂ ತರಬೇತಿ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ತಾಲೂಕಿನ ಗಾವಡಗೆರೆ ಹೋಬಳಿ ಹಿರೀಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಆರ್.ಜಿ.ಎಸ್.ಎ. ಯೋಜನೆಯಡಿ ಗ್ರಾಮೀಣ ಬಡತನ ನಿವಾರಣೆಯ ಯೋಜನೆ, ಮಿಷನ್ ಅಂತ್ಯೋದಯ, ಮತ್ತು ಸರಕಾರದ ಜನೋಪಯೋಗಿ ಯೋಜನೆ, ಅಭಿವೃದ್ಧಿ ಕುರಿತು ತರಬೇತಿ ನೀಡಲಾಯಿತು.
ತರಬೇತಿ ಕಾರ್ಯಾಗಾರದಲ್ಲಿ ಬಿ.ಎಂ.ಕೆ .ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರಾಜು ಮಾತನಾಡಿ ಬಡತನ ನಿವಾರಣೆಗಾಗಿ ಸ್ವಸಹಾಯ ಸಂಘದ ಸದಸ್ಯರು ಅಣಬೆ ಬೇಸಾಯ, ರಾಗಿ ಖರೀದಿಸಿ ಅದರಲ್ಲಿ ರಾಗಿ ಹಿಟ್ಟು ಮತ್ತು ಹಲವು ಪದಾರ್ಥಗಳ ತಯಾರಿಸಿ ಮಾರಾಟ ಮಾಡಿದಲ್ಲಿ ಬೇಡಿಕೆ ಇದೆ. ಹಾಗೂ ತರಕಾರಿಗಳು ಬೆಲೆ ಕಡಿಮೆ ಇದ್ದಾಗ ಟಮೋಟೋ ಸಾಸ್, ಚಿಲ್ಲಿ ಸಾಸ್‌ಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದಲೂಲಾಭ ಗಳಿಸಬಹುದು ಇಂತಹ ಯೋಜನೆಗಳಿಗೆ ಸರ್ಕಾರ ಸಹಾಯ ಧನ ನೀಡಲಿದೆ. ಇದರಿಂದ ಆರ್ಥಿಕ ವಾಗಿ ಅಭಿವೃದ್ದಿ ಹೊಂದಬಹುದಾಗಿದೆ. ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರೇಗೌಡ ಮಾತನಾಡಿ ಸರಕಾರವು ಸ್ವಸಹಾಯ ಸಂಗಗಳಿಗೆ ಸಾಕಷ್ಟು ಯೋಜನೆಗಳನ್ನು ಕಲ್ಪಿಸಿದ್ದು, ಸಬ್ಸಿಡಿ ಪಡೆದು ಸ್ವ ಉದ್ಯೋಗ ಆರಂಭಿಸಿದಲ್ಲಿ ಇತರರಿಗೂ ಉದ್ಯೋಗ ನೀಡಬಹುದಾಗಿದ್ದು, ಇಂತಹ ಕಾರ್ಯಾಗಾರದಲ್ಲಿ ಬಾಗವಹಿಸಿ ಮಾಹಿತಿ ಪಡೆದುಕೊಳ್ಳಿರೆಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವತ್ಸಲ, ಪಿ.ಡಿ.ಒ.ಶ್ರೀನಿವಾಸ್, ಸದಸ್ಯರಾದ ಸುಜಾತಸತೀಶ್, ರುಕ್ಮಿಣಿ, ಸಣ್ಣಶೆಟ್ಟಿ, ಅಭಿ, ಕುಚೇಲೇಗೌಡ, ಬೀರೇಗೌಡ, ಕುಮಾರಿ, ಫಾರೂಕ್ ಮಹಮ್ಮದ್, ಲೆಕ್ಕ ಸಹಾಯಕ ಮಹದೇವ್, ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ಹಾಜರಿದ್ದರು.