Advertisement

ಫ್ರೀಲ್ಯಾನ್ಸ್‌ಗೆ ಮಹಿಳೆಯರ ನೋಂದಣಿಯೇ ಹೆಚ್ಚು

09:55 PM Jul 30, 2023 | Team Udayavani |

ನವದೆಹಲಿ: ಕೊರೊನಾ ಕಾಲಘಟ್ಟದಲ್ಲಿ ವರ್ಕ್‌ ಫ್ರಂ ಹೋಮ್‌ ವ್ಯವಸ್ಥೆ ಜಾಸ್ತಿಯಾಗಿತ್ತು. ಅನಂತರ ಸಹಜ ಸ್ಥಿತಿಗೆ ಸಂಸ್ಥೆಗಳು ಮರಳುತ್ತಿರುವ ನಡುವೆಯೇ ಇದೀಗ ಹೊಸದಾಗಿ ಫ್ರೀಲ್ಯಾನ್ಸ್‌ ಕಾನ್ಸಪ್ಟ್‌ನಲ್ಲಿ ಉದ್ಯೋಗ ಅರಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳೇ ಇಂಥ ಉದ್ಯೋಗಗಳನ್ನು ಅರಸುತ್ತಿದ್ದು, ಜೂನ್‌ ತ್ತೈಮಾಸಿಕವೊಂದರಲ್ಲೇ ಅಂಥವರ ಪ್ರಮಾಣ ಶೇ.15ರಷ್ಟು ಏರಿಕೆಯಾಗಿದೆ ಎಂದು ಫ್ಲೆಕ್ಸಿಂಗ್‌ ಇಟ್‌ ಎನ್ನುವ ಸಂಸ್ಥೆಯ ವರದಿಯೊಂದು ತಿಳಿಸಿದೆ.

Advertisement

ಏನಿದು ಫ್ರಿಲ್ಯಾನ್ಸ್‌ ?
ಯಾವುದೇ ನಿರ್ದಿಷ್ಟ ಸಂಸ್ಥೆಯೊಂದರ ಉದ್ಯೋಗಿ ಆಗದೆಯೇ, ಕೇವಲ ವೇತನಕ್ಕಷ್ಟೇ ಕೆಲಸ ಮಾಡುವ ವ್ಯವಸ್ಥೆ. ಅಂದರೆ ಆ ಸಂಸ್ಥೆಯ ಉದ್ಯೋಗಿಗೆ ದೊರೆಯುವ ಯಾವ ಸೌಲಭ್ಯವೂ ಫ್ರಿಲಾನ್ಸ್‌ ವರ್ಕರ್‌ಗಳಿಗೆ ಇರುವುದಿಲ್ಲ. ನಿರ್ದಿಷ್ಟ ಅವಧಿಗೆ ಮಾತ್ರ ಕಾರ್ಯ ನಿರ್ವಹಿಸಿ, ಅದಕ್ಕೆ ತಕ್ಕಂತೆ ಹಣ ಸಂಪಾದಿಸಬಹುದು.

ಫ್ರಿಲ್ಯಾನ್ಸ್‌ ಆಯ್ಕೆಗೆ ಪ್ರಮುಖ ಕಾರಣಗಳೇನು ?
* ಕೊರೊನಾ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಂ ಘೋಷಿಸಿದ ಕೆಲ ಸಂಸ್ಥೆಗಳು ಇದೀಗ ಕಚೇರಿ ಬೇರೆಡೆಗೆ ಸ್ಥಳಾಂತರಿಸಿ, ಉದ್ಯೋಗಿಗಳನ್ನು ಕಚೇರಿಗೆ ಬರಲು ಆಗ್ರಹಿಸಿವೆ.
* ದೂರಕ್ಕೆ ಪ್ರಯಾಣಿಸಿ ಕೆಲಸ ಮಾಡಲಾಗದೇ, ಅಥವಾ ತಾವಿರುವ ಸ್ಥಳಗಳಿಂದಲೇ ಕೆಲಸ ಮಾಡುವ ಅವಕಾಶವಿಲ್ಲದೇ ಇರುವುದು.
*ವಿದ್ಯಾವಂತ, ಶಿಕ್ಷಿತ ಮಹಿಳೆಯರಾಗಿದ್ದರೂ ವಿವಾಹ ಅಥವಾ ಇನ್ನಿತರೆ ಕಾರಣಗಳಿಂದ ಕೆಲಸದೊಂದಿಗೆ ತಮ್ಮ ವೈಯಕ್ತಿಕ ಜೀವನ ಸರಿದೂಗಿಸಲು ಸಾಧ್ಯವಾಗದಿರುವುದು.

ಉಪಯೋಗವೇನು ?
ಕೆಲ ವೈಯಕ್ತಿಕ ಕಾರಣಗಳಿಂದ ಹೊರಬಂದು ಕೆಲಸ ಮಾಡಲಾಗದೇ ಇದ್ದಂಥ ಹಾಗೂ ಅನಿವಾರ್ಯತೆಗಳಿಂದ ದೂರದ ಪ್ರದೇಶಗಳಿಗೆ ಹೋಗಿ ದುಡಿಯುತ್ತಿದ್ದು, ತಮ್ಮದೇ ಮನೆಗಳಿಗೆ ಹಿಂದಿರುಗಲು ಬಯಸುತ್ತಿರುವ ವೃತ್ತಿಪರರಿಗೆ ತಮ್ಮ ಊರುಗಳಲ್ಲಿರುವ ಕಡಿಮೆ ಉದ್ಯೋಗಾವಕಾಶದ ಸಮಸ್ಯೆಯಿಂದ ಉದ್ಯೋಗವೇ ಇಲ್ಲದೇ ಕೂತಿರುವ ಮಹಿಳೆಯರಿಗೆ ಫ್ರೀಲ್ಯಾನ್ಸ್‌ ಕಾನ್ಸೆಪ್ಟ್ ಸಹಾಯಕವಾಗಿದೆ. ಮನೆಯಲ್ಲೇ ಕೂತು ಕೈತುಂಬ ಸಂಬಳ ಪಡೆಯುವುದಷ್ಟೇ ಅಲ್ಲದೇ, ತಮ್ಮದೇ ಕ್ಷೇತ್ರಗಳಲ್ಲಿನ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ವ್ಯವಸ್ಥೆ ಸಹಾಯಕವಾಗಿದೆ ಎಂಬುದು ಮಹಿಳೆಯರ ಅಭಿಪ್ರಾಯ.

ಶೇ.15
ಜೂನ್‌ ತ್ತೈಮಾಸಿಕದಲ್ಲಿ ಫ್ರೀಲ್ಯಾನ್ಸ್‌ನಲ್ಲಿ ಹೆಚ್ಚಾದ ಮಹಿಳಾ ನೋಂದಣಿ ಪ್ರಮಾಣ

Advertisement

ಶೇ.50
ನೋಂದಣಿ ಮಾಡಿಕೊಂಡವರಲ್ಲಿ 5 ವರ್ಷಕ್ಕಿಂತ ಹೆಚ್ಚು ಉದ್ಯೋಗ ಅನುಭವ ಇರುವವರ ಪ್ರಮಾಣ

ಶೇ.60
ಫ್ರೀಲಾನ್ಸ್‌ ಮೂಲಕವೇ ಪೂರ್ಣಾವಧಿ ಕೆಲಸಗಾರರಾಗಿರಲು ಬಯಸಿರುವವರು

ಶೇ.50
ಪದವಿ, ಸ್ನಾತಕೋತ್ತರ ಪದವಿಗಳನ್ನು ಹೊಂದಿರುವವರು

ಶೇ.40
ಪ್ರಾಜೆಕ್ಟ್‌ಗಳ ಆಧಾರದಲ್ಲಿ ಅರೆಕಾಲಿಕ ಕೆಲಸ ಅರಸುವವರ ಪ್ರಮಾಣ

ಯಾವ ವಿಭಾಗದಲ್ಲಿ ಎಷ್ಟೆಷ್ಟು ನೋಂದಣಿ
ತಂತ್ರಜ್ಞಾನ ಶೇ.15
ಮಾರ್ಕೆಟಿಂಗ್‌ ಶೇ.13
ಎಚ್‌ಆರ್‌ ಶೇ.13
ಕಾರ್ಯತಂತ್ರ ಶೇ.9
ಡಿಸೈನ್‌ ಸರ್ವೀಸ್‌ ಶೇ.9
ರೀಸರ್ಚ್‌, ಅಕಾಡೆಮಿಕ್‌ ಶೇ.9

Advertisement

Udayavani is now on Telegram. Click here to join our channel and stay updated with the latest news.

Next