Advertisement

ಮಹಿಳೆಯರು ಮತದಾನದ ಮಹತ್ವ ಅರಿತುಕೊಳಿ

02:46 PM Apr 10, 2019 | keerthan |

ತಿಪಟೂರು: ಮಹಿಳೆಯರಿಗೆ ಮತದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಮಹಿಳೆಯರು ಮತದಾನದ ಮಹತ್ವ ಅರಿತು ಇತರರಿಗೂ ಜಾಗೃತಿ ಮೂಡಿಸಿ ಶೇ.100ರಷ್ಟು ಮತದಾನ ಮಾಡ
ಬೇಕೆಂದು ಉಪವಿಭಾಗಾಧಿಕಾರಿ ಎಸ್‌. ಪೂವಿತಾ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಮತದಾನ ಜಾಗೃತಿ ಅಂಗವಾಗಿ ಸ್ವೀಪ್‌ ಸಮಿತಿ ತುಮಕೂರು ಮತ್ತು
ತಿಪಟೂರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿಶೇಷಚೇತನರಿಂದ ಬೈಕ್‌ ರ್ಯಾಲಿ ಹಾಗೂ ವಿವಿಧ ಇಲಾಖಾ ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಮೂಲಕ ಮತಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಡ್ಡಾಯ ಮತದಾನ: ಉತ್ತಮ ಪ್ರಜಾಭುತ್ವ ವ್ಯವಸ್ಥೆಗೆ ಮತದಾನದ ಅವಶ್ಯಕತೆ ಇದ್ದು, ಅದಕ್ಕಾಗಿ ತಾಲೂಕಿ ನಾದ್ಯಂತ ಮತದಾನದ ಬಗ್ಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಮಹಿಳೆಯರು ಮತದಾನದ ಮಹತ್ವ ತಿಳಿದುಕೊಂಡು ತಮ್ಮ ಸುತ್ತಮುತ್ತಲಿನ ಜನರಿಗೆ ಅರಿವನ್ನು ಮೂಡಿಸುವುದರಿಂದ ಕಡ್ಡಾಯ ಮತದಾನ ಮಾಡಲು ಅನುಕೂಲವಾಗುತ್ತದೆ ಎಂದರು.

ಮತದಾನ ಮಾಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜು ಮಾತನಾಡಿ, ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ಮತದಾನದ ಅರಿವು ಮೂಡಿಸಿ ರುವುದು ಶ್ಲಾಘನೀಯ. ಮಹಿಳೆಯರು, ವಿಕಲಚೇತನರು ಹಾಗೂ ಅಲ್ಪ ಸಂಖ್ಯಾತರು ಮತದಾನ ಮಾಡಬೇಕು. ಮತದಾನದ ಅರಿವು ಮೂಡಿಸುವಾಗ ಯಾವುದೇ ಪಕ್ಷ, ಅಭ್ಯರ್ಥಿ
ಬಿಂಬಿಸಬಾರದು. ಕಡ್ಡಾಯವಾಗಿ ಮಹಿಳಾ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ತಿಳಿಸಬೇಕು ಎಂದರು.

ಸಖೀ ಬೂತ್‌ ಮತಗಟ್ಟೆ: ನಗರಸಭಾ ಪೌರಾಯುಕ್ತೆ ಡಾ.ಮಧು ಮಾತನಾಡಿ, ಮಹಿಳೆಯರಿಗಾಗಿ ಪಿಂಕ್‌ ಸಖೀ ಬೂತ್‌ ಮತಗಟ್ಟೆಯನ್ನು ಕಳೆದ ಬಾರಿ ಜಾರಿ ಮಾಡಲಾಗಿತ್ತು. ಎಲ್ಲಾ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ರ್‍ಯಾಂಪ್‌ ವ್ಯವಸ್ಥೆ, ವೀಲ್‌ಚೇರ್‌, 31 ವಾರ್ಡ್‌ಗಳಲ್ಲಿ ವಾಹನ ವ್ಯವಸ್ಥೆ ಮಾಡಲಾಗಿದೆ. ಮತದಾನದ ಜಾಗೃತಿಗಾಗಿ ವಾರ್ಡ್‌ಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು, ಅವರ ಮೂಲಕ ಮಾಹಿತಿ ಪಡೆಯಬಹುದು ಎಂದರು.

Advertisement

ತುರ್ತು ಚಿಕಿತ್ಸೆಗೆ ಸೌಲಭ್ಯ: ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ಮಾತನಾಡಿ, ಚುನಾವಣೆ ದಿನದಂದು ಆರೋಗ್ಯ ಇಲಾಖೆಯಿಂದ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಜನರಿಗೆ ಸೇವೆ ನೀಡಲಾಗುತ್ತಿದ್ದು, ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಬೂತ್‌ಗಳಲ್ಲಿ ತುರ್ತು ಚಿಕಿತ್ಸೆಗೆ ಅನುಕೂಲ ವಾಗುವಂಥ ಸೌಲಭ್ಯ ನೀಡಲಾಗುತ್ತದೆ ಎಂದರು.

ಬಹುಮಾನ: ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಿಳಿಗೆರೆ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ದ್ವಿತೀಯ ಎಸ್‌.ಆರ್‌.ಡಿ ಪಾಳ್ಯದ ವೀಣಾ ತಂಡ, ತೃತೀಯ ವಿಶೇಷಚೇತನರಿಗೆ ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಸಿಂಗ್ರಿನಂಜಪ್ಪ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ರಮೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಗೌರಮ್ಮ, ಸಿಡಿಪಿಓ ಓಂಕಾರಪ್ಪ, ಮೇಲ್ವಿಚಾರಕಿ ಪ್ರೇಮಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next