Advertisement
ಹೆಣ್ಣು ಇಂದಿನ ಎಲ್ಲಾ ಕಾರ್ಯಕ್ಷೇತ್ರವನ್ನೂ ಸಲೀಸಾಗಿ ನಿಭಾಯಿಸುತ್ತಾಳೆ. ಹೆತ್ತವರ ಬಗ್ಗೆ ಪ್ರೇಮ, ಕಾಳಜಿ, ಮಮತೆ ಹೆಣ್ಣು ಮಕ್ಕಳಿಗೇ ಹೆಚ್ಚು ತಾನೇ? ಈಗೆಲ್ಲ ವರದಕ್ಷಿಣೆ ಕೊಟ್ಟು, ಸಾಲಾಂಕೃತ ಕನ್ಯಾದಾನ ಮಾಡಬೇಕಿಲ್ಲ. ಮೇಲಾಗಿ ತನ್ನ ಜವಾಬ್ದಾರಿಯನ್ನು ಮತ್ತು ಖರ್ಚು ವೆಚ್ಚಗಳನ್ನು ಸ್ವತಃ ತೂಗಿಸಿಕೊಳ್ಳುವಷ್ಟು ದುಡಿದು ಆರ್ಥಿಕ ಸ್ವಾವಲಂಬಿಯೂ ಆಗುತ್ತಿದ್ದಾಳೆ.. ಮುಂತಾದ ನನ್ನ ಯಾವುದೇ ಸಮಾಧಾನದ ಮಾತುಗಳು, ಈ ಸಲ ಗಂಡು ಮಗುವೇ ಬೇಕು ಎನ್ನುವ ಗಂಡನ, ಅತ್ತೆ ಮನೆಯವರ ನಿರೀಕ್ಷೆಯ ಮುಂದೆ ಸೋತು ಹೋಗುತ್ತಿದ್ದವು.
Related Articles
Advertisement
ನಮ್ಮ ಸುಶಿಕ್ಷಿತ ಸಮಾಜ ಇಷ್ಟು ಮುಂದುವರೆದಿರುವಾಗ, ಗಂಡು ಹೆಣ್ಣೆಂಬ ಭೇದ ತೆಳು ಗೆರೆಯಾಗಿ ಉಳಿದಾಗ, ಇಂದಿನ ಹೆಣ್ಣು ಮಗಳು ಎಲ್ಲಾಕ್ಷೇತ್ರಗಳಲ್ಲೂ ಕಾಲೂರಿ ನಿಂತು ತನ್ನ ಸಾಮರ್ಥ್ಯಸಾಬೀತು ಪಡಿಸಿಕೊಂಡಾಗ ಗಂಡು ಮಗುವೇ ಬೇಕುಎಂಬ ವ್ಯಾಮೋಹ ಕೀಳು ಮಟ್ಟದ್ದು ಎನ್ನಿಸದೇ ಇರಲಿಲ್ಲ. ಮೊದಲು ಮನೆಗೊಬ್ಬ ವಂಶೋದ್ಧಾರಕಇರಬೇಕು ಎಂಬುವುದೊಂದು ಸಾಮಾನ್ಯವಿಚಾರವಾಗಿತ್ತು. ಹಾಗಂತ ಮೊದಲು ಹುಟ್ಟುವ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರವಿರಲಿಲ್ಲ. ಎಂಥ ಬಡವರೇಆಗಿರಲಿ, ಗಂಡು ಹುಟ್ಟುವವರೆಗೆ ಅಥವಾ ಹುಟ್ಟಿದ ನಂತರವೂ ಸಂತಾನಾಭಿವೃದ್ದಿ ನಿಲ್ಲಿಸುತ್ತಿರಲಿಲ್ಲ.ಹೀಗಾಗಿಯೇ ಏನೋ ಮೊದಲು ಎರಡು ಮೂರು ಹೆಣ್ಣು ಮಕ್ಕಳು ಹುಟ್ಟಿದರೂ ಮುಂದೆ ಗಂಡಾದೀತು ಎಂಬ ನಿರಾಳತೆಯಲ್ಲೇ ಬದುಕು ಸಾಗುತ್ತಿತ್ತು.
ಕಾಲ ಬದಲಾದಂತೆ…
ಕಾಲ ಬದಲಾದಂತೆ ಎಲ್ಲವೂ ಪಲ್ಲಟವಾಗಿ, ಎರಡು ಮಕ್ಕಳಷ್ಟೇ ಸಾಕು ಎನ್ನುವ ಆಧುನಿಕ ವಿಚಾರ ತಲೆದೂರಿದಾಗ ಹುಟ್ಟುವ ಎರಡರಲ್ಲಿ ಒಂದು ಗಂಡು ಮಗುವೇ ಆಗಬೇಕಾದದ್ದು ಅನಿವಾರ್ಯವೆನ್ನು ವಂತಾಯ್ತು. ಅದರ ಪರಿಣಾಮ ಹಳ್ಳಿಗಳು ಬಿಡಿ, ಸುಶಿಕ್ಷಿತ ಸಮಾಜ ಎನ್ನಿಸಿಕೊಂಡ ನಗರಗಳಲ್ಲೂ ಗಂಡು ಮಗುವಿನ ಸಂತಾನಕ್ಕಾಗಿ ಹೆಂಡತಿಯ ಮೇಲೆ ಒತ್ತಡ ಆರಂಭವಾಯಿತು. ಯಾವುದೇ ಸಂತಾನದ ಲಿಂಗ
ನಿರ್ಣಯವಾಗುವುದೇ ಗಂಡಸಿನ ವೀರ್ಯದ ಮೇಲೆ ಎಂಬ ಸತ್ಯ ಮರೆಯಾಗಿ ಹೆಣ್ಣು ತಾನು ಬಯಸಿದಸಂತಾನ ಕೊಡಲೇಬೇಕಾದ ಯಂತ್ರವೆಂಬಂತೆ ಭಾವಿಸಲಾಯ್ತು. ಇದರಿಂದ ಅಕ್ಷರಶಃ ನಲುಗಿದ್ದುಹೆಣ್ಣು. ಮತ್ತವಳ ಮೊದಲ ಸಂತಾನವಾದ ಹೆಣ್ಣುಮಗು. ಕೂಡು ಕುಟುಂಬಗಳಲ್ಲಿ ಗಂಡು ಹೆತ್ತ ಸೊಸೆಯನ್ನು ಅಭಿಮಾನಿಸುವುದು, ಹೆಣ್ಣು ಹೆರುವ ಸೊಸೆಯನ್ನು ಕೀಳಾಗಿ ಕಾಣುವುದು, ಹಂಗಿಸಿ ಮಾತನಾಡುವಂತಹ ಮಾನಸಿಕ ಆಘಾತದೊಂದಿಗೆ ಆರಂಭಗೊಂಡು ದೈಹಿಕವಾಗಿ ಚಿತ್ರ ಹಿಂಸೆ ಕೊಡುವುದು, ಹೆಣ್ಣು ಭ್ರೂಣ ಹತ್ಯೆ, ಹುಟ್ಟಿದಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬರುವುದು, ಕಸದ ಬುಟ್ಟಿಗೆ ಎಸೆದು ಬರುವುದು, ಮತ್ಯಾರಿಗೋ ನಿರ್ದಯವಾಗಿ ಕೊಟ್ಟು ಬಿಡುವುದು, ಹೆಂಡತಿ ಇರುವಾಗಲೇ ಮತ್ತೂಂದು ಮದುವೆಯಾಗುವುದು ಅಷ್ಟೇ ಯಾಕೆ, ಅವಳನ್ನು ಕೊಂದು ಬಿಡುವಂತಹ ಕ್ರೂರ ಕೃತ್ಯಗಳೂ ನಡೆದದ್ದುಂಟು.
ಕಾನೂನುಗಳಿವೆ ನಿಜ, ಆದರೆ…
ಈಗ ಇಂತಹ ಅಮಾನವೀಯತೆ ಕಡಿಮೆಯಾದರೂತೀರಾ ಇಲ್ಲವಾಗಿಲ್ಲ. ಇಂದಿನ ಬಹುತೇಕರು ಮೊದಲುಹೆಣ್ಣು ಹುಟ್ಟಿದರೆ ಮನೆಗೆ ಲಕ್ಷ್ಮೀ ಬಂದಳು ಎಂದುಖುಷಿಯಿಂದ ಸ್ವೀಕರಿಸು ವುದು ನಿಜ, ಎರಡನೇ ಮಗುವಿನ ವಿಷಯ ಬಂದಾಗ ಮಾತ್ರ ಮತ್ತೆ ಹೆಣ್ಣೇಆದರೆ? ಅದರ ಬದಲಿಗೆ ಒಬ್ಬಳೇ ಮಗಳು ಸಾಕುಎಂದು ಮತ್ತೂಂದು ಮಗುವನ್ನು ಮಾಡಿಕೊಳ್ಳುವವಿಚಾರವನ್ನೇ ಕೈಬಿಡುತ್ತಾರೆ. ಹೆಣ್ಣು ಭ್ರೂಣ ಹತ್ಯೆನಿಷೇಧ, ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಆಕೆಯ ಸಮಗ್ರಅಭಿವೃದ್ಧಿಯ ದೃಷ್ಟಿಯಿಂದ ಏನೆಲ್ಲ ಕಾನೂನುಗಳುಬಂದಿವೆ. ಆದರೆ ಮನುಷ್ಯನ ಹಳಸಲು ಭಾವನೆಗಳಿಗೆಎಲ್ಲಿಯ ಕಾನೂನು? ಎಂದಿನವರೆಗೆ ಮನೆಗೆ ಕೀರ್ತಿತರುವವನು, ಹೆತ್ತವರನ್ನು ಸಾಕುವವನು, ಸತ್ತಾಗ ಪಿಂಡಇಡುವವನು ಗಂಡು ಮಗನಷ್ಟೇ ಎನ್ನುವ ಆಲೋಚನೆಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಇದೂಹೆಣ್ಣಾ? ಎಂಬ ಮೂದಲಿಕೆ, ಇದೂ ಹೆಣ್ಣಾದರೆ… ಎಂಬ ಆತಂಕ ನಿಲ್ಲುವುದಿಲ್ಲವೇನೋ.
– ಅಮೃತಾ