Advertisement

Women Junior Asia Cup Hockey: ಮಲೇಷ್ಯಾವನ್ನು ಮಣಿಸಿದ ಭಾರತ

11:17 PM Jun 05, 2023 | Team Udayavani |

ಕಾಕಾಮಿಗಹಾರ (ಜಪಾನ್‌): ವನಿತಾ ಜೂನಿಯರ್‌ ಏಷ್ಯಾ ಕಪ್‌ ಹಾಕಿ ಪಂದ್ಯಾವಳಿಯ ದ್ವಿತೀಯ ಮುಖಾಮುಖೀಯಲ್ಲಿ ಭಾರತ ದಿಟ್ಟ ಹೋರಾಟ ನಡೆಸುವ ಮೂಲಕ ಮಲೇಷ್ಯಾವನ್ನು 2-1 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ.

Advertisement

ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಸತತ 2ನೇ ಗೆಲುವು. ಇದರೊಂದಿಗೆ ಭಾರತ “ಎ’ ವಿಭಾಗದಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. ಮೊದಲ ಪಂದ್ಯದಲ್ಲಿ ಉಜ್ಬೆಕಿಸ್ಥಾನ ವನ್ನು 22-0 ಗೋಲುಗಳಿಂದ ಮಣಿಸಿತ್ತು.

ಮಲೇಷ್ಯಾ ವಿರುದ್ಧ ಭಾರತ ಆರಂಭದಲ್ಲಿ ಹಿನ್ನಡೆಗೆ ಸಿಲುಕಿತ್ತು. ಪಂದ್ಯದ 6ನೇ ನಿಮಿಷದಲ್ಲೇ ನಝೇರಿ ಬಾರಿಸಿದ ಫೀಲ್ಡ್‌ಗೋಲ್‌ನಿಂದ ಮಲೇಷ್ಯಾ ಅಚ್ಚರಿಯ ಮುನ್ನಡೆ ಗಳಿಸಿತು. ಆದರೆ ಅವರ ಈ ಸಂತಸ ಉಳಿದದ್ದು ನಾಲ್ಕೇ ನಿಮಿಷ. ಮುಮ್ತಾಜ್‌ ಖಾನ್‌ ಪೆನಾಲ್ಟಿ ಕಾರ್ನರ್‌ ಒಂದನ್ನು ಗೋಲಾಗಿ ಪರಿವರ್ತಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಭಾರತದ ದ್ವಿತೀಯ ಗೋಲನ್ನು ದೀಪಿಕಾ 26ನೇ ನಿಮಿಷದಲ್ಲಿ ಸಿಡಿಸಿದರು. ಇದು ಪೆನಾಲ್ಟಿ ಸ್ಟ್ರೋಕ್‌ ಮೂಲಕ ಬಂತು.

ಭಾರತದ ಮುಂದಿನ ಎದುರಾಳಿ ಕೊರಿಯಾ. ಈ ಪಂದ್ಯ ಮಂಗಳವಾರ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next