Advertisement

ಅಧ್ಯಕ್ಷರ ಮುಂದೆ ಕಣ್ಣೀರಿಟ್ಟ ಮಹಿಳಾ ಕೈದಿಗಳು

11:52 AM Jun 13, 2018 | |

ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳ ವಿಭಾಗಕ್ಕೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ನಾಗಲಕ್ಷ್ಮೀಬಾಯಿ ಭೇಟಿ ನೀಡಿ, ಅಲ್ಲಿನ ಮಹಿಳಾ ಕೈದಿಗಳ ಕುಶಲೋಪರಿ ವಿಚಾರಿಸಿದರು.

Advertisement

ಕಾರಾಗೃಹದಲ್ಲಿ ಸಾಲಾಗಿ ನಿಂತಿದ್ದ ಮಹಿಳಾ ಕೈದಿಗಳನ್ನು ಒಬ್ಬೊರನ್ನಾಗಿ ಮಾತನಾಡಿಸಿದ ನಾಗಲಕ್ಷ್ಮೀಬಾಯಿ,
ಮಹಿಳೆಯರು ಜೈಲಿಗೆ ಬರಲು ಕಾರಣವೇನು? ಯಾವ ಪ್ರಕರಣ ಸೇರಿ ಮಕ್ಕಳ ಅಪಹರಣ, ಕೊಲೆ ಇತರೆ
ವಿಷಯಗಳ ಕುರಿತು ವಿಚಾರಿಸಿದರು.

ಈ ವೇಳೆ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರ ಮುಂದೆ ಕಣ್ಣೀರಿಟ್ಟ ಸಹೋದರನ ಪುತ್ರನನ್ನು ಅಪಹರಿಸಿ, ಕೊಲೆಗೈದಿರುವ ಆರೋಪದಡಿ ಬಂಧಿತಳಾಗಿದ್ದ ಕೈದಿ ನಾಗಮ್ಮ, ನನಗೆ ಜೈಲಲ್ಲಿ ಜೀವನ ಮಾಡಲಿಕ್ಕೆ ಆಗುತ್ತಿಲ್ಲ. ಸಾಧ್ಯವಾದಷ್ಟು ಬೇಗ ನನ್ನನ್ನು ಹೊರಗಡೆ ಕಳಿಸಿಕೊಡಿ. ಕೂಲಿ-ನಾಲಿ ಮಾಡಿ ಜೀವನ ಮಾಡುತ್ತೇನೆ. ನನ್ನಪರ
ವಕೀಲರಿಗೆ ಹಣ ಜೋಡಿಸಿ ಸಾಕಾಗಿದೆ.

ನಾನು ನನ್ನ ಸಹೋದರನ ಪುತ್ರನನ್ನು ಅಪಹರಿಸಿ ಬೇರೆಯವರಿಗೆ ನೀಡಿದ್ದೇನೆ ಅಷ್ಟೇ. ಅದನ್ನೇ ದೊಡ್ಡದು ಮಾಡಿ ಕೌಲ್‌ ಬಜಾರ್‌ ಪೊಲೀಸರು ನನ್ನನ್ನು ಲಾಠಿಯಿಂದ ಹೊಡೆದು, ಅಪಹರಣ, ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಕಣ್ಣೀರಿಟ್ಟರು. ಮಗು ಅಪಹರಣದ ಆರೋಪದಡಿ ಜೈಲು ಸೇರಿರುವ ಮೂವರು ಮಂಗಳಮುಖೀಯರು, ಮಗುವನ್ನು ದತ್ತು ಪಡೆದಿದ್ದು ನಿಜ. ಆದರೆ, ದತ್ತು ಪಡೆದ ಬಗ್ಗೆ ಯಾವುದೇ ದಾಖಲೆಗಳು ನಮ್ಮ ಬಳಿಯಿರಲಿಲ್ಲ. ಅದಕ್ಕಾಗಿಯೇ ದತ್ತು ಪಡೆದ ಮಗುವನ್ನು ಅಪಹರಿಸಿದ್ದಾರೆಂದು ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಅಳಲು ತೋಡಿಕೊಂಡರು.

ಇದೇ ವೇಳೆ 18 ವರ್ಷದೊಳಗೆ ಮದುವೆ ಮಾಡಿಕೊಂಡಿದ್ದ ಆರೋಪದಡಿ ಬಂಧಿತರಾದ ಯುವತಿಯನ್ನೂ ವಿಚಾರಿಸಲಾಯಿತು. ನಂತರ ಮಹಿಳಾ ಕೈದಿಗಳು ವಾಸವಿರುವ ಕೊಠಡಿ, ಕಾರಾಗೃಹದ ಅಡುಗೆ ಮನೆ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮರಣದಂಡನೆ ವಿಧಿಸುವ ಬ್ರಿಟಿಷರ ಕಾಲದ ನೇಣುಗಂಬ ವೀಕ್ಷಿಸಿದರು.

Advertisement

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ, ಆಪ್ತ ಕಾರ್ಯದರ್ಶಿ ಪುರುಷೋತ್ತಮ, ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ| ಪಿ.ರಂಗನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗೇಶ ಬಿಲ್ವ, ಸಂಚಾರ ನಿಯಂತ್ರಣ ಪೊಲೀಸ್‌ ಠಾಣೆ ಪಿಎಸ್‌ಐ ಚಂದ್ರಹಾಸ, ಜೈಲು ಆಸ್ಪತ್ರೆ ವೈದ್ಯ ಡಾ| ಎಸ್‌.ಆರ್‌.ಗುಪ್ತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ವಾರ್ತಾಧಿಕಾರಿ ಬಿ.ಕೆ.ರಾಮಲಿಂಗಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next